Wednesday 27 January 2021

ಹರಿಕಥಾಮೃತಸಾರ ಸಂಧಿ 16 ankita jagannatha vittala ದತ್ತಸ್ವಾತಂತ್ರ್ಯ ಸಂಧಿ HARIKATHAMRUTASARA SANDHI 16 DATTA SWATANTRA SANDHI

    

Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 
for saahitya click   ಹರಿಕಥಾಮೃತಸಾರ ಸಂಧಿ 1 to 32  


ಶ್ರೀಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 

ದತ್ತಸ್ವಾತಂತ್ರ್ಯ ಸಂಧಿ , ರಾಗ ಕಾಂಬೋಧಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ|

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು

ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ

ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ

ಈಪರಿ ವಿಭಾಗವ ಮಾಡಿ ತ್ರಿಪದಾಹ್ವ||1||


ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು

ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ

ತತ್ವಮಾನಿಗಳು ಎನಿಪ ಸುರರೊಳು ಹತ್ತು

ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ||2||


ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು

ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ

ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು

ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ||3||


ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು

ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ

ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು

ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ||4||


ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು

ಅವರ ಫಲ ವ್ಯತ್ಯಾಸವನೆ ಮಾಡಿ

ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು

ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ||5||


ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ

ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ

ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ

ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ||6||


ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ

ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ

ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ

ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು||7||


ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು

ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ

ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು

ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ||8||


ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ

ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ

ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು||9||


ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ

ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ

ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು

ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು||10||


ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ

ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ

ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ

ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ||11||


ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ

ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ

ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ

ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ||12||


ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು

ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ

ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ

ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ||13||


ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ

ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ

ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು

ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ||14||


ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು

ಕುಡಿಸುವ ತಾಯಿಯ ಉಪಾದಿಯಲಿ

ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ

ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು||15||


ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ

ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು

ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು

ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು||16||


ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು

ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ

ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು

ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು||17||


ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ

ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು

ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ

ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು||18||


ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ

ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ

ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು

ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ||19||

ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ

ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ

ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ

ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ||20||


ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ

ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ?

ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ

ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು||21||


ವಾಸುದೇವ ಏಕ ಪ್ರಕಾರದಿ ಈಶನೆನಿಸುವ

ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು

ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ

ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ||22||


ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ

ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ

ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು

ಜೀವರಿಗೆ ದಾಸಾತ್ವದುಪಾದಿ||23||


ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ

ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ

ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು

ಅವರವರ ಯೋಗ್ಯತೆ ಕರ್ಮವ ಅನುಸರಿಸಿ||24||


ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ

ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು

ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ

ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ||25||


ಭೂತಳಾಧಿಪನು ಆಜ್ಞ ಧಾರಕ ದೂತರಿಗೆ

ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ

ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ

ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ||26||


ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ

ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು

ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು

ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು||27||


ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ

ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ

ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ

ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ||28||


ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ

ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ

ಭ್ರಾಮಕತ್ರಯ ಮಾರಿಗೆ ಒಳಗಾಗದಲೆ


ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ||29||


ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ

ಉತ್ತರವ ಕೊಡದಲೆ ಸುಮ್ಮನಿಪ್ಪನು

ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ

ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು||30||


ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು

ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು

ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ

ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ||31||


ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ

ವಾಗ್ಮಯಗೆ ಸಮರ್ಪಿಸಿದ

ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು

ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ||32||


ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ

ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ

ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ

ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ||33||


ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು

ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು

ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ

ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು||34||


ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ

ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ

ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು?

ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ||35||


ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ?

ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ

ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ

ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ||36||


ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ

ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ

ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ

ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ||37||

************


harikathAmRutasAra gurugaLa karuNadindApanitu kELuve|

parama BagavadBaktaru idanAdaradi kELuvudu||


kAruNika hari tannoLippa apAra svAtantrya guNava nAnUru tegedu

sapAda Arondadhika aravattu nArigitta

dvi ShODaSa adhika nUru pAdatrayava tanna SarIradoLage

Ipari viBAgava mADi tripadAhva||1||


satya lOkAdhipanoLage aivattereDu pavamAnanoLu nAlvattu mEleMTu

adhika SivanoLagiTTanippattu cittaja indraroLu aidadhika daSa

tatvamAnigaLu enipa suraroLu hattu

Iraidu aKiLa jIvaroLiTTa niravadya||2||


kali modalugonDa aKiLa dAnavaroLage nAlvattaidu

I pari tiLidu upAsane mADu mareyade parama Bakutiyali

iLeyoLage sancarisu lakShmI nilayana ALAnendu

sarva sthaLagaLali santaisutippanu geLeyanandadali||3||


avanipa svAmitva dharmava svavaSa mAtyarigittu

tA mattavara muKadali rAja kAryAva mADisuva teradi

kaviBirIDita tanna kaLegaLa divija dAnava mAnavaroLiTTu

avirata guNatrayaja karmava mADi mADisuva||4||


puNya pApagaLu I teradi kAruNya sAgara dEvadAnava mAnavaroLiTTu

avara Pala vyatyAsavane mADi

banna baDisuva BaktihInara sannuta sukarma Palategedu

prapannarige koTTu avara suKapaDisuvanu suBujAhva||5||


mANikava konDu angaDiyoLu ajivAna koTTu A puruShana

samAdhAna mADuva teradi daityaru nityadali mALpa

dAna yaj~jAdigaLa Pala pavamAna pitanu apaharisi

asamIcIna suKagaLa koTTu asurara mattaranu mALpa||6||


ENa lAnCanana amala kiraNa kramENa vRuddhiyanu aidi

lOgara kANagoDadiha kattaleya Bangisuva teradante

vainatEyAngasana mUrti dhyAnavuLLa mahAtmarige

suj~jAna BaktyAdigaLu vardhisi suKavE koDutiharu||7||


janapana arikeya cOra poLaloLu dhanava kaddoyda Iyalu

avana avaguNagaLu eNisade poreva koDadire SikShisuva teradi

anucitOcita karma kRuShNArpaNavenalu

kaikonDu tannaramaneyoLiTTu Ananda baDisuva mAdhavAnatara||8||


annada annAda anna nAmaka munna pELda prakAra

jIvaroLu anna rUpa pravESagaidu avaravara vyApAra

bannabaDadale mADi mADisi dhanyarivaru ahudu endenisi

traiguNya varjita tattadAhvayanu Agi karesuvanu||9||


salilabindu payAbdhiyoLu bILalu vikAravanu aida ballade

jalavu tadrUpavane aiduvudu ella kAladali

kalilamalApahana arcisuva satkulajara kukarmagaLu

tAniShkaluSha karmagaLAgi puruShArthagaLa koDutiharu||10||


mogadoLage mogaviTTu muddisi maguvinaM bigidappi raMbisi

nEhadi tegedu tannaya stanagaLu uNisuva jananiyandadali

agaNitAtmanu tanna pAdAbjagaLa dhEnipa Bakta janarige

praGaTakanu tAnAgi sauKyagaLu Eva sarvatra||11||


tOTiganu BUmiyoLu bIjava nATabEkendenuta

hitadali mOTeyiM nIretti sasigaLa santaisuvante

pATubaDadale jagadi jIvara GOTakAsyanu sRujisi

yOgyate dATagoDadale salahutippanu sarva kAladali||12||


BUmiyoLu jalavire tRuShArtanu tA maredu

mogavetti eNdesevyOma manDaladoLage kANade miDukuvandadali

SrI manOrama sarvara antaryAmiyu Agire tiLiyalariyade

BrAmakaru Bajisuvaru Bakutiyali anya dEvateya||13||


muKya Pala vaikuMTha muKyAmuKya Pala mahadAdi lOkA

amuKya Pala vaiShayikavu endaridu ati Bakutiyinda

rakkasa ariya Bajisutali nirduHKanAgu

nirantaradi more pokkavara biDa BRutyavatsala BAratISa pita||14||


vyAdhiyiM pIDita SiSuvige guDOdakava neredu adake auShadha tEdu

kuDisuva tAyiya upAdiyali

sarvaj~ja bAdarAyaNa Bakta janake prasAda rUpakanAgi

BAgavatAdiyali pELidanu dharmAdigaLE PalaveMdu||15||


dUradalliha parvata GanAkAra tOrpudu nOLpa janarige

sAragaiyalu sarva vyAGragaLinda Bayavihudu

GOratara saMsAra sauKya asArataravendu aritu

nitya ramAramaNana ArAdhisuvaru adarinda ballavaru||16||


kesara GaTagaLa mADi bEsige bisiloLage iTTu oNagisidaru adu

Gana rasavu tuMbalu bahudE? sarva svAtantra nAneMba

paSupa naranu EnEnu mALpa anaSana dAna snAna karmagaLu

osari pOpavu baride dEha AyAsavane koTTu||17||


eraDu dIkShegaLihavu bAhyAntaravu enipa nAmadali

budharindaritu dIkShitanu Agu dIrGa dvEShagaLa biTTu

hariyE sarvOttama kSharAkShara puruSha pUjita pAda

janmAdi aravi dUra suKAtma sarvaganu endu smarisutiru||18||


hEyavastugaLillavu upAdEya vastugaLilla

nyAyAnyAya dharmagaLilla dvESha asUye modalilla

tAyi tandegaLilla kamaladaLAyata akShageyenalu

Isuva kAyiyandadi muLagagoDade BavAbdhi dATisuva||19||


mandanAdaru sariye gOpIcandana SrI mudregaLa nalivinda dharisuta

SrI tuLasi padumAkShi saragaLanu kandharada madhyadali dharisi

mukunda SrI BUramaNa trijagadvandya

sarva svAmi mama kuladaivavu ene poreva||20||


prAya dhana madadinda janarige nAyaka praBuveMbi

pUrvadi tAyi poTTeyoLiralu praBuvendEke kareyaralai?

kAya ninnanu biTTu pOgalu rAyA nIneMbuva praButva

palAyanavanaiditu samIpadaliddare adu tOru||21||


vAsudEva Eka prakAradi ISanenisuva

brahma rudra Saci ISa modalAda amararellaru dAsarenisuvaru

I sumArgava biTTu sOhamupAsaneyagaiva nara

dEhaja daiSika klESagaLu baralu avanu Eke biDisikoLa||22||


A para brahmanali trijagadvyApakAtva niyAmakAtva

sthApakAtva vaSAtva ISAtvAdi guNagaLige lOpavilla

Eka prakAra svarUpavu enipavu sarva kAladi pOpavallavu

jIvarige dAsAtvadupAdi||23||


nityanUtana nirvikAra suhRuttama praNavastha

varNOtpatti kAraNa vAgmanaHmaya sAmagAnarata

datta kapila hayAsya rUpadi pRuth prutag jIvaroLagiddu pravartisuvanu

avaravara yOgyate karmava anusarisi||24||


SRutigaLu Atana mAtu vimalA smRutigaLu Atana SikShe

jIva pratati prakRutigaLu eraDu pratimegaLu enisikoLutihavu

itara karmagaLu ella lakShmI patige pUjegaLendu smarisuta

catura vidha puruShArthagaLa bEDadiru svapnadali||25||


BUtaLAdhipanu Aj~ja dhAraka dUtarige

sEvAnusAradi vEtanava koTTu avara santOShisuva teradante

mAtariSva priyanu parama prIti pUrvaka

sadguNangaLa gAdhakara santOSha paDisuva iha parangaLali||26||


dIpa divadali kanDarAdaDe lOpagaisuvaru A kShaNa

hari samIpadallire nanda nAma sunandavu enisuvavu

aupacArikavalla sujanara pApa karmavu puNyavu enipavu

pApigaLa satpuNya karmavu pApavu enisuvavu||27||


dhanava saMpAdisuva pradrAvaNikarandadadi

kOvidara manemanegaLali sancarisu SAstra SravaNa gOsugadi

mananagaidu upadESisuta durjanara kUDi ADadiru svapnadi

praNata kAmada koDuva sauKyagaLa iha parangaLali||28||


kAraka kriya dravya viBrama mUru vidha jIvarige

bahu saMsArake ivu kAraNavu enisuvavu ella kAladali dUra ODisi

BrAmakatraya mArige oLagAgadale

sarvArAdhakana cintisutaliru sarvatra mareyadale||29||


karaNa karmava mADidare vismaraNe kAladi mAtugaLige

uttarava koDadale summanippanu

jAgarAvasthe karuNisalu vyApAra mADuva

baralu nAlkavasthegaLu pariharisi koLanu Etake? svatantranu tAneyeMbuvanu||30||


yukti mAtugaLalla Sruti smRuti ukta mAtugaLivu

vicArisi muktigivu sOpAnavu enipavu pratiprati padavu

BaktipUrvaka paThisuvavarige vyakti koDuva svarUpa suKa

praviviraktana mADuvanu BavaBayadinda bahu rUpa||31||


SrInivAsana suguNa maNigaLa prANamAta vayunAKya sUtradi pONisida mAlikeya

vAgmayage samarpisida

j~jAnigaLa dRuk viShayavuhuda aj~jAnigaLige asahya tOrpudu

mANikava markaTana kaiyali koTTa teradante||32||


SrIvidhi Ira vipAhipa ISa SacI varAtmaBava arka SaSi

digdEva RuShi gandharva kinnara siddha sAdhya gaNa sEvita padAMbuja

tvatpAdAlavaMbigaLu Ada Baktara kAva

karuNA sAMdra lakShmI hRutkumuda chandra||33||


AdariSa agatAkSha BAShA BEdadiMdali kareyalu adanu

niShEdhagaidu avalOkisade biDuvare vivEkigaLu

mAdhavana guNa pELva prAkRutavu Adareyu sari

kELi parama AhlAdabaDadippare? nirantara balla kOvidaru||34||


BAskarana manDalava kanDu namaskarisi mOdisade

dvEShadi taskaranu nindisalu kundahudE divAkarage

saMskRutavu idalla endu kuhaka tiraskarisalu Enahudu?

Bakti puraskaradi kELvarigolivanu puShkarAkSha sadA||35||


patitana kapAladoLu BAgIrathiya jalavire pEyavu enipude?

itara kavi nirmita kukAvya aSrAvya budhariMda

kRuti patikathAnvitavu enipa prAkRutave tA saMskRutavu enisi

sadgatiyanIvudu Bakti pUrvaka kELi pELvarige||36||


SAstra sayukti granthagaLu Odi kELdavanalla

santata sAdhugaLa sahavAsa sallApagaLu modalilla

mOda tIrtha Aryara matAnugaru Adavara karuNadali pELde

ramAdhava jagannAtha viThala tiLisidadaroLage||37||

********* * 


No comments:

Post a Comment