Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ 
 ದರ್ಭಶಯನ ಸುಳಾದಿ 
 ರಾಗ:ತೋಡಿ 
 ಧ್ರುವತಾಳ 
ಮಬ್ಬು ಬಯಲಾಯಿತು ಉಬ್ಬಿತು ಎನ್ನ ಮನ 
ಹಬ್ಬಿತು ಎಳೆಬಳ್ಳಿ ಅಬ್ಬರದಿಂದಲಿ
ಅಬ್ಜನಾಭನಾ ಪದಾಬ್ಜವೆಂಬದಕೆ ಬಲು
ದೊಬ್ಬ ದೊಲಗಾದಂತೆ ಲುಬ್ಧು ತನವಿಲ್ಲಾದೆ 
ಹಬ್ಬವಾಯಿತು ಇಂದು ಗುಬ್ಬಿಗೆ ಮಣಿಗುಂಜಿ
ಸುಬ್ಬದ ತೆರದಿಂದ ಅಬ್ಬಿತಯಾವು 
ಬೊಬ್ಬಿರಿವಾ ದೋಷಾ ಇಬ್ಬಾಗಿಯಾಯಿತು 
ನಿಬ್ಬರದ ಪುಣ್ಯ ಇಮ್ಮಡಿ ಫಲಿಸಿತು 
ಒಬ್ಬರೆನರಿವರು ಶಬ್ದಗಾಗೋಚರ 
ದರ್ಭಾಶಯನನಾದ ವಿಜಯವಿಠಲರೇಯಾ 
ಅಬ್ಬುಧಿವಾಸವಾದಾ ಹೆಬ್ಬಾಗೆ ಮಹಿಮೆ ll1ll
 ಮಟ್ಟತಾಳ 
ವಿಶ್ವಸೃಜಿ ಬಂದು ವಿಶ್ವಂಭರೆ ಯೊಳು 
ಅಶ್ವನೆಯ ಗೂಡ ಅಶ್ವತ್ಥದ ಬೀಜಾ 
ವಿಶ್ವಾಸದಿ ತರಿಸಿ ಈಶ್ವರ ಮೊದಲಾದ 
ವಿಶ್ವದೇವರೊಳು ಸಪ್ತಾಶ್ವನಂತೆ ಮೆರೆದಾ 
ವಿಶ್ವರ್ಯದಲಿ ಸ್ವೇತ ಸಾರಥಿ ನಮ್ಮ ವಿಜಯವಿಠಲ ಅನಾ-
ದಿ ಸ್ವಾಭಿವ ದರ್ಭಶೇನಾವಾಸಾ 
ಅಶ್ವಮೇಧದ ಪುಣ್ಯಾಪಶ್ವಾದಿಗೆ ಈವಾ ll2ll
 ತ್ರಿವಿಡಿತಾಳ 
ಅನಾಸತ್ಯರು ಬಂದು ಧ್ಯಾನವ ತಂದೀಯೆ 
ಆನಂದಾದಲಿ ವನಜಾಸೂನು ಸ್ಥಾಪಿಸಿದಾನು 
ಈ ನೆಲದಲಿ ವೃಕ್ಷ ತಾನೆ ಗಳಾಲಿದರ 
ಭಾನುಸುತ್ತ ಹರಿಯೆ ಏನಂಬೆ ಸೋಜಿಗವ 
ತಾನೊಲಿದು ಸುರ ಜೇಷ್ಟಮಾಣದಲೆ ತಪ-
ವನು ರಚಿಸಿದನು ಈ ನಿಧಿಯಲಿ ಕುಳಿತು 
ಶ್ರೀ ನಾರಯಣದೇವಾ ವಿಜಯವಿಠಲರೇಯಾ 
ಕ್ಷೋಣಿಯೊಳಗೆ ಬಂದು ನಿಲ್ಲಾ ಬೇಕೆಂದು ll3ll
 ಅಟ್ಟತಾಳ 
ಕಾಲಾಂತರಕ್ಕೆ ದಶಮೌಳಿ ಜನಿಸಾಲು 
ನೀಲಮೇಘ ಶ್ಯಾಮಾ ತಾಳಿದನವ ತಾರ 
ಭೂಲೋಕದಲಿ ನರಲೀಲೆ ಮಾಡುತ ಬಂದು 
ಆ ಲೋಕೇಶನು ಪಾಲಿಸಿದಶ್ವತ್ಥ 
ಮೂಲದಲ್ಲಿ ರಾಮಾ ವಾಲಗವಾದನು 
ಶ್ರೀ ಲೋಲ ವಿಜಯವಿಠಲ ದರ್ಭಶಯನಾ 
ಈ ಲವಣಾಬ್ಧಿಯಲಿ ಮೇಲಾಗಿ ಮೆರೆದಾ ll4ll
 ಆದಿತಾಳ 
ತೃಣತಲ್ಪ ನಾಗಿ ವರುಣನ್ನ ಭಂಗಿಸಿ ರಾ -
ವಣನ ಪುರಕೆ ಪಥವನೆ ಬಿಗಿದ ವೇಗದಲಿ 
ಮಣಿದ ಕಿಂಕರ ವಿಭೀಷಣಗೆ ಪಟ್ಟವಗಟ್ಟಿ 
ಇನಕುಲೋತ್ತುಮ ರಾಮಾನಿಲ್ಲ ಮಣಿ ಮಯ ಪೀಠದಲ್ಲಿ 
ಜನಕಾಸುತೆ ಸಮೇತ ಅನಿಮಿಷರೊಡನೆ ಅ-
ಗಣಿತ ಬಗೆಯಲ್ಲಿ ಘನ ಪದವಿಯಾಳುತ್ತ 
ಹನುಮವಂದಿತರಾಮಾ ವಿಜಯವಿಠಲ ದ-
ಕ್ಷಿಣ ವನನಿಧಿವಾಸಾ ಮುನಿಸುರ ಪರಿಪಾಲಾ 
ಮಿನುಗುವ ದರ್ಭಶಯನಾ ಶೇತುವಿನ ಧೊರಿಯೆ ll5ll
 ಜತೆ 
ಫುಲ್ಲಾ ಮುನಿಗೆ ಒಲಿದಾ ಬಲಿದಾ ಜಗನ್ನಾಥ 
ಹುಲ್ಲುಹಾಸಿಕೆಯಲ್ಲಿ ಇಪ್ಪ ವಿಜಯವಿಠಲ ll6ll
*********
 
 
No comments:
Post a Comment