Audio by Vidwan Sumukh Moudgalya
ಶ್ರೀ ವಿಜಯದಾಸರ್ಯ ವಿರಚಿತ ಮನ್ನಾರಿ ಶ್ರೀಕೃಷ್ಣ ಸುಳಾದಿ
ರಾಗ : ಅಮೃತವರ್ಷಿಣಿ
ಧ್ರುವತಾಳ
ಬಾಲ ಗೋಪಾಲ ಗುಣಶೀಲಾ ವಿಶಾಲ ಮಹಿಮಾ
ಕಾಲಾ ದೇಶತಃ ಪೂರ್ಣ ನೀಲವರ್ಣಕಾಳಿಂಗಮದಭಂಗ
ಕಾಳಿಂದಿಯಾ ರಮಣ ಮೂಲಾವತಾರಾಭೇದ
ಲೀಲಾ ವಿನೋದ ಏಳೇಳು ಲೋಕವ ಆಳುವ ಬಲುದೈವ
ಪಾಲು ಮೊಸರು ಕದ್ದ ಲಾಲಾಸುರಿವ ಶುದ್ಧ
ಆಳಿನ ಮನೋರಥ ಫಾಲಲೋಚನ ವಿನುತ
ಬಾಲೆರ ಮಾನಭಂಗ ಮೌಳಿ ಮಕುಟ ತುಂಗ
ಲೋಲ ಮನ್ನಾರಿಗುಡಿ ಪಾಲಾ ವಿಜಯವಿಠಲಾ
ಸೋಳಾಸಾಸಿರ ವಾಮಲೋಚನೇರ ಪ್ರೀಯಾ
ಮಟ್ಟತಾಳ
ಅರಿಧರ ಶಿರಿಧರ ಧರಾಧರ ಗಿರಿಧರ
ಸುರಹರ ಸುರವರ ಮುರಹರ ನರವರ
ಕರಿವರತ್ಪರಾತ್ಪರ ವಿಜಯವಿಠಲ ಪೀತಾಂ -
ಬರದಂಬರ ಧಾರ ನಿರುತರ ಪರಿಪೂರ್ಣ
ಶಿರಿಮನ್ನಾರಾದಾ ವರನಿಲಯಾ ಕೃಷ್ಣಾ
ತ್ರಿವಿಡಿತಾಳ
ಋಷಿ ಹರಿತಾನೆಂಬಾಂಗಿರಸ ಕುಲದುದಭವಾ
ವಸುಧಿಯ ಎಲ್ಲನು ಶೋಧಿಸಿ ಕೊಳುತ
ಹಸನಾದ ನೆಲವೆ ಕಾಣಿಸದೆ ಇರಲುತಾ
ಪಸಿಗಾನು ಬಂದಿಲ್ಲಿ ನಸುನಗುತ
ವಸುದೇವ ಸುತನ ಮೆಚ್ಚಿಸುವೆನೆಂದು ಮನಸು
ವಶಮಾಡಿಕೊಂಡು ರಚಿಸಿದನು ತಪವನು
ವಸುಮತೀಶ್ವರ ನಮ್ಮ ವಿಜಯವಿಠಲನಾ ಸ್ಮ -
ರಿಸುತಲೀ ಪರಿಯಾ ದಿವಸ ಕಳೆಯುತಿರೆ
ಅಟ್ಟತಾಳ
ಮನ್ಯು ಅಧಿಕವಾದ ಮನ್ನಾಸುರ ದೈತ್ಯ
ತನ್ನೆದುರಲಿ ಒಬ್ಬರನ್ನು ಕಾಣೆನೆಂದೂ
ಉನ್ಮತ್ತದಿಂದ ಸನ್ನು ಮುನಿಯ ತಪ -
ವನ್ನೆ ಕೆಡಿಸಲಾಗಿ ಖಿನ್ನಮನಿಸಿನಲ್ಲಿ
ತನ್ನೊಳು ತಾನೆ ಕಾವನ್ನನಯ್ಯನ ಪಾದ -
ವನ್ನು ನೆನಿಸಲು ಸನ್ನಿಧಿಯಾದನು
ಅನ್ನಾಥರೊಡಿಯಾ ವಿಜಯವಿಠಲನು ಬಂದು
ಮನ್ನಿಸಿದನು ಋಷಿ ಅನ್ನವಾದವನು
ಆದಿತಾಳ
ದುರುಳ ಮನ್ನಾಸುರನ ಒರೆಸಿ ಮುನಿಯ ಕಾಯ್ದ
ಹರಿಪೆಸರಾದ ಮನ್ನಾರಿ ಕೃಷ್ಣನೆಂದು ಇಲ್ಲಿ
ಕರಿಸಿಕೊಂಡು ಮೆರದನು ತರುಣೇರಸಹಿತದಲ್ಲಿ
ಹರಿದ್ರಾ ನದಿಯೊಳು ಪರಿಪರಿ ಲೀಲೆ ಅ-
ಪರಿಮಿತವಾಗಿ ಆಡಿ ಸುರರು ಭೂಸುರರಿಂದ
ಹಿರಿದು ಸೇವೆಕೊಳುತ್ತ ಧರಿಗೆ ದಕ್ಷಿಣದ್ವಾರಾವೆಂದೆನಿಸಿದೆ
ಸರಿಯಾರು ನಿನಗೆ ಸುರತರುವೆ ಕಿಂಕರರಿಗೆ
ಕರುಣಿ ಮನ್ನಾರಿ ಗುಡಿ ವರರಾಜಗೋಪಾಲಾ
ಮರವಿಭುವ ವಿಜಯವಿಠಲಾ ಅರಿದವರೊಡನಿಪ್ಪ
ಜತೆ
ಮಾವಾರಿ ಮನ್ನಾರಿ ನಿಲಯಾ ರಾಜಗೋಪಾಲ
ಗೋವಋಷಿಗೆ ಒಲಿದ ವಿಜಯವಿಠಲರೇಯಾ
*******
No comments:
Post a Comment