ಶ್ರೀ ಪುರಂದರದಾಸರ ಕೃತಿ
ರಾಗ ಶಹನ ಆದಿತಾಳ
ಕಂಡೆ ಕಂಡೆ ಕಂಡೆ ನಮ್ಮ । ಕಂಗಳ ಧೇನುವ ಕಂಡೆ ॥ ಪ ॥
ಮಂಗಳಮೂರುತಿ ಮನ್ನಾರ ಕೃಷ್ಣನ ॥ ಅ ಪ ॥
ಉಟ್ಟ ಪೀತಾಂಬರ ತೊಟ್ಟ ವಜ್ರಾಂಗಿಯ ।
ಪುಟ್ಟ ಪಾದದ ರತ್ನ ಮನ್ನಾರ ಕೃಷ್ಣನ ॥ 1 ॥
ಒರಳನೆಳೆವನ ಬೆರಳ ಚೀಪುವನ ।
ಧರೆಯೊಳು ಮೆರೆಯುವ ಮನ್ನಾರ ಕೃಷ್ಣನ ॥ 2 ॥
ಕರದ ಕಂಕಣ ಬೆರಳ ಮುದ್ರಿಕೆ ।
ತರಳ ಉಡುಪಿಯ ಮನ್ನಾರ ಕೃಷ್ಣನ ॥ 3 ।
ಅಲವಬೋಧರಿಗೆ ಒಲಿದು ಬಂದ ಮಹ ।
ಚೆಲುವ ಸ್ಮರನಪಿತ ಮನ್ನಾರ ಕೃಷ್ಣನ ॥ 4 ॥
ಶೇಷಶಯನನ ಭಾಸುರರೂಪನ ।
ಶ್ರೀಶ ಪುರಂದರವಿಠಲರಾಯನ ॥ 5 ॥
***
pallavi
kaNDe kaNDe kaNDe namma kangaLa dhEnuva kaNDe mangaLa mUruti mannAra krSNna kaNDe kaNDe kaNDe
caraNam 1
uTTa pItAmbara toTTa vajrAngiya puTTa pAdada ranna mannAra krSNana
caraNam 2
oraLaneLevana beraLa cIpuvana dhareyoLu mereyuva mannAra krSNana
caraNam 3
karada kankaNa beraLa mudrike taraLa uDupiya mannAra krSNana
caraNam 4
alava bodharige olidu banda maha celuva smarana pita mannAra krSNana
caraNam 5
shESa shayanana bhAsura rUpana shrIsha purandara viTTalarAyana
***
No comments:
Post a Comment