Friday, 30 October 2020

ರತಿಪತಿ ಪಿತ vijaya vittala ankita suladi ಪಂಚತಿರುಪತಿ ಮಹಾತ್ಮೆ ಸುಳಾದಿ RATIPATI PITA PANCHA TIRUPATI MAHATME SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಪಂಚತಿರುಪತಿ ಮಹಾತ್ಮೆ ಸುಳಾದಿ 

 ರಾಗ:ಕೇದಾರಗೌಳ 


 ಧ್ರುವತಾಳ 


ರತಿಪತಿ ಪಿತ ಪಾರ್ವತಿ ಪತಿ ಪಿತನಯ್ಯಾ 

ಶ್ರುತಿ ತತಿನುತ ಭಾರತಿ ಪಿತಗತಿ ಪ್ರೀತ 

ಸತತ ಮಹಿಮ ಉನ್ನತ ಲೀಲಾ ಅತಿಶಯ 

ಮತಿವಂತರಿಗೆ ಸದ್ಗತಿಯಾ ಕೊಡುವ ದೇವ 

ಕ್ಷಿತಿಯೊಳ ಪ್ರತಿಕೀರುತಿಯಾ ಮೆರೆವ ಸರ್ವ 

ವೃತವ್ರಾತಗಳಿಗೆ ದೂರತನಾಗಿ ಇಪ್ಪನೆ 

ಚ್ಯುತದೂತ ಮಿತನಾಮಿತರಾಗತ ಹೃದಯಾ 

ಹಿತವಂತ ಪಂಚ ತಿರುಪತಿ ವಾಸಾ ಎನ್ನ ಸಾ-

ರಥಿ ವಿಜಯವಿಠಲಾ ಪತಿತಪಾವನ ದೇವ 

ದಿತಿನಂದನರ ತಾಯಿಯುವದಿತಿಸುತನವನ ದಾವಾ ll1ll


 ಮಟ್ಟತಾಳ 


ಕುಂಭಿಣಿಯನು ತಿರುಗಿ ಕುಂಭಸಂಭವ ಬಂದು 

ಸಂಭ್ರಮದಿಂದಲ್ಲೀ ತುಂಬಿದ ಮನದಿಂದೀ 

ಇಂಬುನೋಡಲು ಮರಿದುಂಬಿ ಮೃಗದ ಕಾ-

ದಂಬ ವಸಂತದಲಿ ಸಂಭವಿಸಿದಂತೆ 

ಬೆಂಬಿಡದಲಾಡಾಲು ಹಂಬಲಿಸಿ ನೋಡಿ 

ಅಂಬುನಿಧಿ ಶಯನ ವಿಜಯವಿಠಲನ ಪಾ -

ದಾಂಬುಜವನು ನೆರೆ ನಂಬಿದ ದೃಢವಾಗಿ ll2ll


 ತ್ರಿವಿಡಿತಾಳ 


ವೈದಿಕತನದಲ್ಲಿ ಐದಾಕಪಕೆ ಮನವೀ 

ರೈದರ ಒಡಗೂಡಿ ಮೈದೆಗಿಯಾದಲೆ 

ಐದು ಬಳಿಯಾ ಕುಳಿತು ಕೈಮಗುಚಿ 

ಜಗದೈಯಾನ್ನ ನೆನದೂ

 ದೈನ್ಯಾವೃತ್ತಿಯಲ್ಲಿ ಹೈದರೊಳಿದ್ದ

ಪರ ದೈವ ವಿಜಯವಿಠಲ 

ಮೈದೋರಿದನು ಮುನಿಗೆ ಸೈವಾಗಿ ಸಂತತಾ ll3ll


 ಅಟ್ಟತಾಳ 


ಋಷಿಯ ಮನಕೆ ಹರುಷಾವನ್ನು ತೋರಲು 

ನಿಶವನ್ನು ಕಳೆದು ದಿವಸ ನೋಡಿದಂತೆ 

ಪಸರಿಸೀತು ಜ್ಞಾನ ಕುಶಲಾದಿಂದಲಿ ಕ-

ಲುಷಹರದ ರೂಪವೆಸದದ್ದು ಅರ್ಥಿಲಿ 

ಬಿಸಿಜನಯ್ಯನ ದೇವ ವಿಜಯವಿಠಲ ಪಂಚ 

ವಸತಿಯಾದನು ಪಾಲಿಸುತ ಎಲ್ಲರನೂ ll4ll


 ಆದಿತಾಳ 


ಪಂಚಾಮೃತದ ನದಿಯ ಸ್ನಾನ 

ಪಂಚಮೂರುತಿ ದರುಶನ 

ಪಂಚರಳಿದು ಮಾಡಿದರೆ 

ಹಿಂಚಿನಘ ಪೋಗುವದು 

ಪಂಚಭೇದವನ್ನು ತಿಳಿದು 

ಮುಂಚ ಸಾಧನಪೂರವಾಗಿ 

ಕಾಂಚನ ಮಯದಿಂದ 

ಮಿಂಚುವನು ತೇಜಾದಲ್ಲಿ 

ಪಂಚರಹಿತ ವಿಜಯವಿಠಲ 

ವಂಚನೆ ಇಲ್ಲಾದಂತೆ 

ಪಂಚರಾತ್ರಿ ಇಟ್ಟು ವಿ-

ರಂಚಿ ಕೂಡ ಕರಸುವಾ ll5ll


 ಜತೆ 


ಪಂಚತಿರುಪತಿಯಾತ್ರೆ ಯಥಾರ್ಥದಲಿ ಮಾಡಿ 

ಪಾಂಚಜನ್ಯಪಾಣಿ ವಿಜಯವಿಠಲ ಪೊರೆವಾ ll6ll

*******

No comments:

Post a Comment