ರಾಗ ಸಾವೇರಿ ಆದಿತಾಳ
ಶ್ರೀ ವಿಜಯದಾಸರ ಕೃತಿ
ಸಾಗಿಬಾರಯ್ಯ ಭವ।ರೋಗದ ವೈದ್ಯನೆ ।
ಬಾಗುವೆ ನಿನಗೆ ಚೆನ್ನಾಗಿ ತುತಿಸಿ ಇಂದು ॥ ಪ ॥
ಭಾಗೀರಥೀಪಿತ ಭಾಗವತರ ಸಂ - ।
ಯೋಗ ರಂಗ ಉರಗಗಿರಿ ವೇಂಕಟಾ ॥ ಅ ಪ ॥
ರಥದ ಮಧ್ಯದಲಿಪ್ಪನೆ । ರಥಾಂಡಜವಾಹನ ।
ರಥಾಂಗಪಾಣಿಯೆ ದಶ।ರಥನೃಪತಿಪಾಲಿ ಪಾ - ।
ರಥಗೆ ವಲಿದವನ । ರಥವ ನಡೆಸಿ ಅತಿ -।
ರಥಮಹಾರಥರ ವಿ।ರಥರ ಮಾಡಿ ಗೆಲಿಸಿದೆ ॥
ಪ್ರಥಮ ದೈವವೆ ಮ।ನ್ಮಥಪಿತ ದೈತ್ಯರ -।
ಮಥನ ಭಕ್ತರ ಮನೋ।ರಥವೆ ಸತತ ತಾರಾ - ।
ಪಥ ಮಣಿವರ್ಣನೆ । ಕಥಾಶ್ರವಣದಲಿ ಸು - ।
ಪಥವ ತೋರಿಸುತಿಪ್ಪ । ಪ್ರಥಮಾಂಗನೊಡಿಯಾ ॥ 1 ॥
ನಿಲ್ಲದೆ ಬರುವುದು । ಪುಲ್ಲಲೋಚನ ಸಿರಿ - ।
ವಲ್ಲಭ ಸರ್ವರಿಗೆ । ಬಲ್ಲಿದನೆ ಅಪ್ರತಿ - ।
ಮಲ್ಲ ಮುರವಿರೋಧಿ । ಮೆಲ್ಲಮೆಲ್ಲನೆ ಪಾದ -।
ಪಲ್ಲವ ತೋರಿಸುತ್ತ । ಸುಲ್ಲಲಿತವಾಗಿ ॥
ಎಲ್ಲಕಾಲದಿ ನಮ್ಮ।ನೆಲ್ಲ ವುದ್ಧರಿಪದು ।
ಎಲ್ಲಿ ನಿನಗೆ ಸರಿ।ಯಿಲ್ಲವೊ ನೋಡಲು ।
ಸಲ್ಲುವುದೋ ಬಿರು।ದಲ್ಲಿಗಲ್ಲಿಗೆ ಗುಣ ।
ಬಲ್ಲವರಾರಿನ್ನು। ಕಲ್ಲಕೊನೆಯಲ್ಲಿಪ್ಪ ॥ 2 ॥
ಬೊಮ್ಮ ಮೊದಲು ಮನುಜೋ।ತ್ತಮ್ಮರು ಕಡೆಯಾಗಿ ।
ನಿಮ್ಮ ದಾಸರು ಅವರ । ಸಮ್ಮಂಧಿಗಳ ಪಾದ - ।
ನಮ್ಮಿಕೊಂಡಿಪ್ಪ ಅ।ಧಮ್ಮನಾ ಸರ್ವೋ- ।
ತ್ತುಮ್ಮನೆ ಅನೇಕ ಮ।ಹಿಮ್ಮ ಸರ್ವಭೂಷಿತ ॥
ರಮ್ಮೆ ಧರಣಿದೇವಿ । ಇಮ್ಮಹಿಷೇರ ಗೂಡಿ ।
ಸಮ್ಮೊಗವಾಗುತ । ಘಮ್ಮನೆ ಬಾ ಬಾ ।
ಹಿಮ್ಮೆಟ್ಟದೆ ಸಿರಿ । ವಿಜಯವಿಟ್ಠಲ ಅನು - ।
ಪಮ್ಮ ಚರಿತ ಪರ।ಬೊಮ್ಮ ತಿರುಮಲೇಶ ॥ 3 ॥
***
Sagi barayya bavarogada vaidyane
Baguve ninage cennagi tutisi indu |
Bagiratipita bagavatara samyoga
Ranga uragagiri venkata |
Rathada madhyadallippane rathaganujavahana
Rathangapaniye dasarathanrupati pala |
Parthage sarathiyagi rathava nadesi |
Athirathamaharathara virathara madi geliside |
Prathamadaivave manmathapitadaityara
Mathana Baktara manoratha paripurnane
Pathamanivarnane kathasravanadali
Supathava torisutippa prathamanganodeya | 1 |
Nillade baruvudu pullalocana siri-
Vallaba sarvarige ballidane aprati-
Malla muravirodhiye mella mellane
Pada Pallava torisutta illa kaladi namma
Nella uddharisuvudu elli ninage sari-
Yillavo nodalu salluvudo birudalli
Gallige guna ballavararinnu –
Nella koti koneyalippa visva || 2 ||
Bomma modalu manujottamaru kadeyagi
Nimma dasaru avara sambandhigala pada
Nammikondippa adhama na sarvottamane
Aneka mahima sarvabushita Iremme
Mahishare gudi sammoga-
Vaguta Gammane ba ba |
Himmettide sirivijayavithala anupamma-
Charita parabomma tirumalesa ||3||
***
ಈ ಕೃತಿಯನ್ನು ರಚಿಸಿದ ಸಂದರ್ಭ :
ವಿಳಂಬಿ ಸಂವತ್ಸರದ ಆಶ್ವಯುಜಮಾಸ , ತಿರುಪತಿಯಲ್ಲಿ ಶ್ರೀಶ್ರೀನಿವಾಸನ ಬ್ರಹ್ಮೋತ್ಸವದ ವಿಜಯದಶಮಿಯ ದಿನ. ಅಂದು ಶ್ರೀಶ್ರೀನಿವಾಸನ ಉತ್ಸವಪ್ರತಿಮೆಯನ್ನು ಮುಹೂರ್ತಕ್ಕೆ ಸರಿಯಾಗಿ ರಥಕ್ಕೆ ವಾದ್ಯವೈಭವದೊಡನೆ ಕರೆತಂದಿದ್ದಾರೆ. ಮಹಂತರು ರಥವನ್ನೆಳೆಯುವ ಮುಹೂರ್ತ ನಿರೀಕ್ಷಣೆ ಮಾಡುತ್ತಲಿದ್ದು , ಕಾಲಕ್ಕೆ ಸರಿಯಾಗಿ ರಥವನ್ನೆಳೆಯಲು ಭಕ್ತವೃಂದಕ್ಕೆ ಸೂಚಿಸಿದರು. ಗೋವಿಂದಾ ಗೋವಿಂದಾ!! ಎನ್ನುವ ಧ್ವನಿಯು ಭೊರ್ಗರೆಯುತ್ತಿದ್ದು , ಶ್ರೀಶ್ರೀನಿವಾಸನಿಗೆ ಮಂಗಳಾರತಿ ಮಾಡಿದ ನಂತರ ರಥವನ್ನು ಎಳೆಯಲು ಪ್ರಾರಂಭಿಸಿದರು. ಆದರೆ , ರಥ ಒಂದು ಅಂಗುಲವೂ ಜರುಗಲಿಲ್ಲ ! ಮಹಂತರು ಕಾರಣ ತಿಳಿಯದೆ , ಶ್ರೀನಾಥನನ್ನು ಪ್ರಾರ್ಥಿಸಿದರು. ಯಾರಾದರೂ ಭಕ್ತರು ಹರಕೆ ಹೊತ್ತಿದ್ದು , ಹರಕೆ ಸಲ್ಲಿಸಲು ಮರೆತಿದ್ದರೆ , ಅಪರಾಧ ಕಾಣಿಕೆಯೊಡನೆ ಹರಕೆ ಸಲ್ಲಿಸಿರಿ ಎಂದು ಭಕ್ತರಲ್ಲಿ ವಿಜ್ಞಾಪಿಸಿದರು. ಆ ಹೊತ್ತಿಗೆ ಸರಿಯಾಗಿ , ಬಾಲಕನೊಬ್ಬನ ಮೇಲೆ ಆವೇಶ ಬಂದದ್ದು ಕಂಡಿತು - ' ಗುಡಿಯ ಒಳಗೆ ಇರುವ ಭಕ್ತನೊಬ್ಬನು ತನ್ನ ಹೃದಯಕಮಲಕರ್ಣಿಕೆಯಲ್ಲಿ ಕಟ್ಟಿಹಾಕಿದ್ದಾನೆ! ಅವನು ನನ್ನನ್ನು ಬಿಟ್ಟುಕೊಟ್ಟರೆ ನಾನಿಲ್ಲಿ ಬರುವುದು , ರಥ ಮುಂದೆ ಸಾಗುವುದು ' ಎಂದು ಬಾಲಕನು ಕೂಗಲಾರಂಭಿಸಿದನು. ಮಹಂತರಿಗೆ ಆಶ್ಚರ್ಯವಾಗಿ , ದೇವಸ್ಥಾನದ ಬೀಗಮುದ್ರೆಗಳನ್ನು ತೆಗೆಸಿ ಹುಡುಕಲು , ಶ್ರೀನರಸಿಂಹನ ಗುಡಿಯ ಬಲಭಾಗದ ಕೊಠಡಿಯಲ್ಲಿ ಶ್ರೀಪುರಂದರದಾಸರು ನಿತ್ಯ ಜಪಕ್ಕೆ ಕೂಡುತ್ತಿದ್ದ ಸ್ಥಳದಲ್ಲಿ ಶ್ರೀವಿಜಯದಾಸರು ಧ್ಯಾನಾಸಕ್ತರಾಗಿ ಕುಳಿತಿದ್ದರು! ಶ್ರೀದಾಸರನ್ನು ಎಚ್ಚರಿಸಿ , ವಾದ್ಯವೈಭವದೊಡನೆ ರಥದ ಸಮೀಪಕ್ಕೆ ತಂದು ನಿಲ್ಲಿಸಿ , ' ಶ್ರೀನಾಥನ ರಥವನ್ನು ಮುಂದೆ ಸಾಗುವಂತೆ ಮಾಡಲು ' ವಿಜ್ಞಾಪಿಸಿದರು.
ತಕ್ಷಣ ಗೆಜ್ಜೆಕಾಲಿಗೆ ಕಟ್ಟಿ , ತಂಬೂರಿ ಮೀಟುತ್ತಾ , ಚಿಟಿಕೆಯನ್ನು ಹಿಡಿದು , ಶ್ರೀಶ್ರೀನಿವಾಸನ ಎದುರಿಗೆ ನಿಂತು ಈ ಪದವನ್ನು ಶ್ರೀದಾಸರಾಯರು ಆನಂದಬಾಷ್ಪ ಪರಿಪೂರಿತ ಕಂಗಳಿಂದ ಕೂಡಿ ಹಾಡಿ ನಲಿದಾಡಿದರು . ಭಕ್ತರು ರಥವನ್ನು ಸೆಳೆಯಲಾರಂಭಿಸಿದರು , ರಥವು ಸುಗಮವಾಗಿ ಮುಂದೆ ಸಾಗಿತು.
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
********
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ||pa||
ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ ||1||
ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ||2||
ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ||3||
*******
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ ಪ
ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ಅ.ಪ.
ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ 1
ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ವಿಶ್ವ 2
ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ 3
*********
No comments:
Post a Comment