Tuesday 20 October 2020

ಮಕರ ಕುಂಡಲದಿಂದ vijaya vittala ankita suladi ವೇಂಕಟೇಶ ಕರ್ಣಮಹಿಮಾ ಸುಳಾದಿ MAKARA KUNDALADINDA VENKATESHA KARNA MAHIMA SULADI

 

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವೇಂಕಟೇಶದೇವರ ಕರ್ಣಮಹಿಮಾ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 


ಮಕರ ಕುಂಡಲದಿಂದ ಝಗಝಗಿಸುವ ಕರ್ನ 

ಲಕುಮಿ ಬಿನ್ನೈಸಲು ಲಾಲಿಸುವ ಕರ್ನ 

ಆಖಿಳ ಜೀವರು ಮೊರೆಯಿಡಲು ಕೇಳುವ ಕರ್ನ

ಮುಕುತಾಮುಕುತರಿಂದ ವರ್ಣಿಸಿಕೊಂಬ ಕರ್ನ

ಚಿಕ್ಕಮಕ್ಕಳಿಂದಲಿ ಲಿಚ್ಚಿಪಿಡಿಸಿದ ಕರ್ನ 

ಸುಖಸಾಂದ್ರವಾಗಿದ್ದ ಸುರಳಿತವಾದ ಕರ್ನ 

ಮಕ್ಕಳಮಣಿಸುನಿಲಯಾ ವಿಜಯವಿಟ್ಠಲ 

ಭಕ್ತರಿಗಗೋಚರವಾದ ಸೂವರ್ನ ಕರ್ನ ॥ 1 ॥


 ಮಟ್ಟತಾಳ 


ಪಂಜರದೋಲಿಯನು ಧರಿಸಿದ ಶುಭ ಕರ್ನ 

ಕುಂಜರಪತಿ ಕೂಗೆ ಕೇಳಿದ ಮಹ ಕರ್ನ 

ಆಂಜನೇಯನ ಕೂಡೇಕಾಂತವಾಡಿದ ಕರ್ನ 

ನಂಜೇಶನ ಮೈಗೆ ಪೊಂದಿ ಪೊಳೆವ ಕರ್ನ 

ಮುಂಜಿಕೇಶಾಕ್ಷಮಣ ವಿಜಯವಿಟ್ಠಲನ ನಿ -

ರಂಜನ ನಿರ್ಗುಣ ನಿರಾಧಾರ ಕರ್ನ ॥ 2 ॥


 ತ್ರಿವಿಡಿತಾಳ 


ವನಜ ಸಂಭವನು ಸ್ತ್ರೋತ್ರವ ಮಾಡೆ ಕರುಣದಲಿ 

ಅನುವರಿತು ಲಾಲಿಸುವ ಅಗಣಿತಗುಣ ಕರ್ನ 

ತೃಣಮನುಜರು ಕೈಮುಗಿದು ವಂದನೆ ಮಾಡೆ 

ಅನುಮಾನ ಇಲ್ಲದಲೆ ಪಾಲಿಸುವ ಕರ್ನ 

ಅಣುಮಹತ್ತಾದರು ಒಂದೇ ಸಮಾನವಾಗಿ 

ವಿನಯದಿಂದಲಿ ಕೇಳಿ ಸಂರಕ್ಷಿಸುವ ಕರ್ನ 

ದನುಜಾರಿ ಹುತುಭುಜಾ ವಿಜಯವಿಟ್ಠಲ ರಾಜಾ 

ಮನದಂತೆ ಮಾಗಾಯಿಲಿಂದ ವಪ್ಪುವ ಕರ್ನ ॥ 3 ॥


 ಅಟ್ಟತಾಳ 


ಸಾಧು ಜನರು ನಿಂದು ಆದರಣೆಯಿಂದ 

ಆದರಿಸೆ ಜ್ಞಾನದಿ ಪಾಲಿಪ ಕರ್ನ 

ಕ್ರೋಧದಿಂದಲಿ ವಿವಾದವನ್ನು ಪೇಳೆ 

ವೈದು ನರಕದಲ್ಲಿ ಬಾಧೆಗಿಡುವ ಕರ್ನ 

ಕಾದ ಬಂದ ಸುರರ ಮಾತಿನಿಂದಲಿ ಶಕ್ತಿ 

ಸೇದಿಕೊಂಡು ನಿತ್ರಾಣಗೈಸುವ ಕರ್ನ 

ಆದಿಮೂಲ ಸ್ವಸ್ತಿಕೃತೆ ವಿಜಯವಿಟ್ಠಲ 

ಆದಿತ್ಯಗಣದವರು ಪೋಗಿಬರುವ ಕರ್ನ ॥ 4 ॥


 ಆದಿತಾಳ 


ಉರವಣಿಸಿ ಸಾಸಿರ ಸಾವಿರವೇದಗಳು ನಿಂದು 

ಕರದುಕೊಂಡಾಡಲೂಪರವೆ ಮಾಡದ ಕರ್ನ 

ಸರಿಬಂದವರು ಕೂಗೆ ದೂರದಲ್ಲಿದ್ದರೆ ಕೇಳುತ 

ವರಗಳನಿತ್ತು ಮನೋ ಬಯಕೆ ಸಲ್ಲಿಪ ಕರ್ನ 

ಸರಿಬಾರದವರೆಷ್ಟು ಕರದು ಬೊಬ್ಬಿರಿದರೆ 

ಅರಿದು ಅರಿಯಾದಂತೆ ಸುಮ್ಮನಿಪ್ಪ ಮಾಯ ಕರ್ನ 

ಹರಿ ಕೂರ್ಮ ಮತ್ಸ್ಯವರಹ ತುರಗ ವೇಷದ ಕರ್ನ 

ಸರಸಿಜ ತನುಜಾಂಡ ಧರಿಸಿದದ್ಭುತ ಕರ್ನ 

ಪರದೈವ ಯಜ್ಞಗುಹ ವಿಜಯವಿಟ್ಠಲ ಮಹ 

ಪುರುಷ ಚೌಕಳಿ ಬಿಡಿ ಮುತ್ತಿನೊಂಟಿ ಇಟ್ಟ ಕರ್ನ ॥ 5 ॥


 ಜತೆ 


ದುರ್ಜನರಿಗೆ ನಿತ್ಯ ನರಕಕೊಡುವ ಕರ್ನ 

ಊರ್ಜಿತ ವಿಜಯವಿಟ್ಠಲನ ಸುಂದರ ಕರ್ನ ॥

*******


No comments:

Post a Comment