Friday, 23 October 2020

ನಾಲಿಗಿದ್ಯಾತಕೆ ಲಕುಮಿಲೋಲನ ನೆನಿಯದೆ ankita pranesha vittala NAALIGIDYATAKE LAKUMILOLANA NENIYADE

 

Audio by Vidwan Sumukh Moudgalya

ಶ್ರೀ ಪ್ರಾಣೇಶದಾಸರ ರಚನೆ 

ರಾಗ ಸಂಯೋಜನೆ ಮತ್ತು ಗಾಯನ : ಶ್ರೀ ಸುಮುಖ್ ಮೌದ್ಗಲ್ಯ

ರಾಗ : ವರಾಳಿ           ತಾಳ : ಆದಿ 

ನಾಲಿಗಿದ್ಯಾತಕೆ ಲಕುಮಿಲೋಲನ ನೆನಿಯದೆ

ಮೂಲೋಕದೊಡಿಯಾ ಕೇಶವನ ಗುಣ।

ತಿಳಿದು ಸತತ ಸ್ಮರಣೆ ಮಾಡದೆ ॥ಪ॥


ಅಜ ಶಿವಾದಿ ದಿವಿಜರಿಂದ

ಭಜಿಸಿಕೊಂಬ ಅಖಿಲಮಹಿಮ

ತ್ರಿಜಗ ಕ್ಷಣಕೆ ಶ್ವೇಚ್ಛೆಯಿಂದ

ಸೃಜಿಪನೆಂದು ಸ್ಮರಣೆ ಮಾಡದೆ  ॥೧॥


ಮ್ಯಾಲಿನೇಳು ಲೋಕ ಕೆಳಗಿ

ನೇಳು ಲೋಕ ನಮ್ಮ ಹರಿಗೆ

ಸ್ಥೂಲ ರೂಪವೆಂದು ವೇದ

ಪೇಳುವವೆಂದು ಸ್ಮರಣೆ ಮಾಡದೆ  ॥೨॥


ಉರಗಪರ್ವತದಲಿ ನಿಂದು

ಧರಣಿಯೊಳಗೆ ಭಕುತಜನಕೆ

ಕರದು ಕೊಡುವ ಪ್ರಾಣೇಶವಿಠಲ 

ವರವುಯಂದು ಸ್ಮರಣೆ ಮಾಡದೇ  ॥೩॥

*******


No comments:

Post a Comment