Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ದಾರಿದ್ರ್ಯಹರಣ ಪ್ರಾರ್ಥನಾ ಸುಳಾದಿ
ರಾಗ ಭೈರವಿ
ಧ್ರುವತಾಳ
ನಿನ್ನ ಸತಿಯಳಾದ ಸಿರಿಯ ಪದವಿಯ ನೋಡು
ನಿನ್ನ ಮಗನು ಆದ ಅಜನ ಪದವಿಯ ನೋಡು
ನಿನ್ನ ಮೊಮ್ಮಗನಾದ ಹರನ ಪದವಿಯ ನೋಡು
ನಿನ್ನ ಸೇವಕರೊಳು ಇಂದ್ರನ್ನ ಭಾಗ್ಯ ನೋಡು
ನಿನ್ನ ಮಗಳು ಭಾಗೀರಥಿಯ ಭಾಗ್ಯವ ನೋಡು
ನಿನ್ನ ಭಕ್ತರಾದ ಗಂಧರ್ವರ ಭಾಗ್ಯ ನೋಡು
ನಿನ್ನಿಂದಲಿವರನ್ನೆಲ್ಲ ಸೃಷ್ಟಿಸಲಿ ಪಟ್ಟಿತು
ಎನ್ನನು ನೀನು ಹರಿ ಸೃಷ್ಟಿಯ ಮಾಡಲಿಲ್ಲೆ
ತನ್ನ ಮಕ್ಕಳಿಗೆ ತಾಯಿ ಅನಂತದಿದ್ದರನ್ನ
ಮನ್ನಿಸಿ ಒಬ್ಬರನ್ನ ಮನ್ನಿಸದಲೀಹೊಳೆ
ಇನ್ನು ಇವರು ಎಲ್ಲ ಏನಿತ್ತರು ನಿನಗೆ
ಮುನ್ನ ನಾನೇನು ನಿನಗೀಯದಾದೆನೋ ರಂಗ
ಮನ್ನಿಸುವರು ನೀ ಮನ್ನಿಸದಿರೆ ಇವರು
ಕಣ್ಣೆತ್ತಿ ನೋಡರು ನೀ ಕರುಣಿಸದಿರಿನ್ನು
ಮುನ್ನೆ ಇವರ ಉಚ್ಛಿಷ್ಟನ್ನವಾದರು ಎನಗೆ
ಇನ್ನಿತಾದರು ಎನಗೆ ಕಾರಣವಿಲ್ಲವೇನೊ
ನಿನ್ನ ಬೇಡುವ ಸಥೆ ಎಲ್ಲಿಂದ ಬಂತು ಎಂಬೆ
ನಿನ್ನವರು ಕೊಟ್ಟಂಥ ಬಲವು ಎನಗೆ ಇದ್ದು
ಹಣ್ಣು ಉಂಟಾದ ವೃಕ್ಷ ಹಂಬಲಿಸೋರು ಜನರು
ನಿನ್ನಲ್ಲಿಹೋ ಮಾಯಾ ನೀನೆ ಬಲ್ಲೆಯೋ ದೇವಾ
ಘನ್ನ ಮಹಿಮ ಚಲುವ ಗೋಪಾಲವಿಠ್ಠಲ
ನಿನ್ನಂತೆ ಸಾಕುವರು ಇನ್ನೊಬ್ಬರಿಲ್ಲೊ ದೇವ ॥ 1 ॥
ಮಠ್ಯತಾಳ
ಧರಿಯೊಳು ಇದ್ದಂಥ ಪರಿಪರಿ ಕಮಲಗಳು
ಅರಳುವುದಕೆ ಇನ್ನು ಬೇರೆ ಬೇರೆ ರವಿ ವುಂಟೆ
ವರುಷ ಕಾಲಗಳಲ್ಲಿ ಸುರಿಸುವ ಮೇಘಗಳು
ಪರಿಪರಿ ಗ್ರಾಮಕ್ಕೆ ಪರಿಪರಿ ಬೇರುಂಟೆ
ಎರಡೇಳು ಲೋಕಕ್ಕೆ ಧೊರಿ ನೀನಲ್ಲದೆ
ಮರಳಿ ಇನ್ನೊಂದು ದೇವರ ನಾ ಕಾಣೆ
ಕರುಣಾಕರ ರಂಗ ಗೋಪಾಲವಿಠ್ಠಲ
ಮೊರೆಹೊಕ್ಕೆನೊ ಕಾಯೋ ಬಿರಿದುಳ್ಳ ದೇವಾ ॥ 2 ॥
ತ್ರಿಪುಟತಾಳ
ಪಿಡಿಯದೆ ಎನ್ನ ಕರವ ಸಡಿಲ ಬಿಟ್ಟರೆ ಇನ್ನು
ಪೊಡವಿಯೊಳಗೆ ನಿನ್ನ ಒಬ್ಬರು ಮೆಚ್ಚರು
ಮಡದಿ ಪತಿಯರು ಕೂಡಿ ಪಡೆದು ಬಂದ ಶಿಶುವು
ಬಡದಾಡಿದೋಪಾದಿ ನಿನಗೆ ನನಗೆ ನ್ಯಾಯ
ಕೆಡಿವ್ಯಾಟ ಬಿದ್ದರೆ ಬಿಡಿಸುವರಿಲ್ಲವು
ಪಿಡಿಸೋ ನಿನ್ನ ಪಾದ ಎಂದೆಂದಿಗೆ
ಪೊಡವಿಯೊಳಗೆ ಇನ್ನು ನಿನಗೆ ಸರಿ ಆರಿಲ್ಲ
ದೃಢವಾಗಿ ನೀನಲ್ಲದೆನಗಿನ್ನು ಗತಿಯಿಲ್ಲ
ಬಿಡದೆ ಎನ್ನಲ್ಲಿ ನೀ ಪಡೆದಂಥ ಸುತರನ್ನು
ಕೊಡುವೆ ನಿನಗೆ ತಡಿಯದಲೆ ಇನ್ನು
ತುಡಗುತನವ ಬಿಡಿಸು ಕೆಡಿಸದೆ ಎನ್ನ ಕಂಡ -
ಕಡೆ ವಿಷಯಗಳಿಗೆ ಎರಗಿಸದೆ
ಬಡವನೆಂದು ಎನ್ನ ಕಡೆ ಕಣ್ಣು ನೋಡದಿರೆ
ಬಡವ ನಾನಲ್ಲ ನಿನ್ನೊಡತಿಗೆ ಪಡಿದೊತ್ತು
ಕಡಲಶಯನ ರಂಗ ಗೋಪಾಲವಿಠ್ಠಲ
ಕಡುದೀನ ರಕ್ಷಕ ನಿಮ್ಮ ನಾಮಾ ॥ 3 ॥
ಅಟ್ಟತಾಳ
ಊರ ಔತನ ಹೇಳಿ ಸಾರಿ ಡಂಗುರ ಹೊಯಿಸಿ
ಧೀರರಾಯರಿಗೆಲ್ಲ ಸಾರ ಷಡ್ರಸವಿತ್ತು
ತಿರುಗಿ ತಿರುಗಿ ಇನ್ನು ಬೀರುತ್ತ ಉಣಿಸೋಗೆ
ದ್ವಾರದಲೊಬ್ಬ ಮಾಧಕಾರದವನು ಬಂದು
ಆರಿವರಿದರಿನ್ನು ಹಾರಿ ಸಾಕುವರುಂಟೆ
ಕಾರುಣ್ಯಮೂರುತಿ ಕರುಣದಿಂದಲಿ ಕೇಳು
ನೀರೋಳಗಿನ ಮತ್ಸ್ಯ ನೀರೇ ಬಯಸುವವು
ಘೋರ ಅರಣ್ಯಕ್ಕೆ ಹಾರೈಸಬಲ್ಲವೆ
ಮಾರಜನಕ ನಮ್ಮ ಗೋಪಾಲವಿಠ್ಠಲ
ಸೇರಿಸೋ ನಿನ್ನನು ಸೇರಿದವರ ಬಳಿಯಾ ॥ 4 ॥
ಆದಿತಾಳ
ಒಂದೆ ಬೇಡುವೆ ನಿನ್ನ ಒಂದೆ ದೇವನೆ ಕೇಳು
ಒಂದೆ ಮನವು ಕೊಡು ವಂದಿಸೆ ನಿನ್ನನ್ನು
ಹಿಂದಾನಂತ ಜನ್ಮದಿ ಮಾಡಿದ ದೋಷ
ಮುಂದಾಗುವ ಅನಂತ ದೋಷಗಳಿಗೆ
ಒಂದು ಬಾರೆನ್ನ ನಿನ್ನ ಸ್ಮರಣೆ ಮರಿಸದೆ
ಚೆಂದದಿ ನಿಂತು ಆನಂದದಿ ಪೊರೆಯೊ
ಬಂದೆನು ನಾನಿತ್ತ ಬರಬಾರದೆ ಇನ್ನು
ನೊಂದೆನು ನಾ ಬಲು ಬಂಧಾನ ಸಿಲ್ಕಿನ್ನು
ತಂದದಕೆ ಎನ್ನ ತಂದು ಕಾರ್ಯ ಮಾಡಿಸಿ
ಪೊಂದಿಸು ನಿನ್ನ ಅರವಿಂದ ಚರಣದಲ್ಲಿ
ಕಂದರ್ಪನಯ್ಯ ಗೋಪಾಲವಿಠ್ಠಲ ಇನ್ನು
ಎಂದೆಂದಿಗೆ ಇನ್ನು ನೀನೆ ನೀನೆ ಗತಿ ॥ 5 ॥
ಜತೆ
ನಿನ್ನ ದಾಸರ ದ್ವಾರವನ್ನು ಕಾಯ್ವರ ಮನೆ
ಕುನ್ನಿ ಎಂದೆನಿಸೆನ್ನ ಗೋಪಾಲವಿಠ್ಠಲ ॥
*************
ಶ್ರೀ ಗೋಪಾಲದಾಸಾರ್ಯ ವಿರಚಿತ ದಾರಿದ್ರ್ಯಹರಣ ಪ್ರಾರ್ಥನಾ ಸುಳಾದಿ
ರಾಗ ಭೈರವಿ ಧ್ರುವತಾಳ
ನಿನ್ನ ಸತಿಯಳಾದ ಸಿರಿಯ ಪದವಿಯ ನೋಡು
ನಿನ್ನ ಮಗನು ಆದ ಅಜನ ಪದವಿಯ ನೋಡು
ನಿನ್ನ ಮೊಮ್ಮಗನಾದ ಹರನ ಪದವಿಯ ನೋಡು
ನಿನ್ನ ಸೇವಕರೊಳು ಇಂದ್ರನ್ನ ಭಾಗ್ಯ ನೋಡು
ನಿನ್ನ ಮಗಳು ಭಾಗೀರಥಿಯ ಭಾಗ್ಯವ ನೋಡು
ನಿನ್ನ ಭಕ್ತರಾದ ಗಂಧರ್ವರ ಭಾಗ್ಯ ನೋಡು
ನಿನ್ನಿಂದಲಿವರನ್ನೆಲ್ಲ ಸೃಷ್ಟಿಸಲಿ ಪಟ್ಟಿತು
ಎನ್ನನು ನೀನು ಹರಿ ಸೃಷ್ಟಿಯ ಮಾಡಲಿಲ್ಲೆ
ತನ್ನ ಮಕ್ಕಳಿಗೆ ತಾಯಿ ಅನಂತದಿದ್ದರನ್ನ
ಮನ್ನಿಸಿ ಒಬ್ಬರನ್ನ ಮನ್ನಿಸದಲೀ ಹೊಳೆ
ಇನ್ನು ಇವರು ಎಲ್ಲ ಏನಿತ್ತರು ನಿನಗೆ
ಮುನ್ನ ನಾನೇನು ನಿನಗೀಯದಾದೆನೋ ರಂಗ
ಮನ್ನಿಸುವರು ನೀ ಮನ್ನಿಸದಿರೆ ಇವರು
ಕಣ್ಣೆತ್ತಿ ನೋಡರು ನೀ ಕರುಣಿಸದಿರಿನ್ನು
ಮುನ್ನೆ ಇವರ ಉಚ್ಛಿಷ್ಟನ್ನವಾದರು ಎನಗೆ
ಇನ್ನಿತಾದರು ಎನಗೆ ಕಾರಣವಿಲ್ಲವೇನೊ
ನಿನ್ನ ಬೇಡುವ ಸಥೆ ಎಲ್ಲಿಂದ ಬಂತು ಎಂಬೆ
ನಿನ್ನವರು ಕೊಟ್ಟಂಥ ಬಲವು ಎನಗೆ ಇದ್ದು
ಹಣ್ಣು ಉಂಟಾದ ವೃಕ್ಷ ಹಂಬಲಿಸೋರು ಜನರು
ನಿನ್ನಲ್ಲಿಹೋ ಮಾಯಾ ನೀನೆ ಬಲ್ಲೆಯೋ ದೇವಾ
ಘನ್ನ ಮಹಿಮ ಚಲುವ ಗೋಪಾಲವಿಠ್ಠಲ
ನಿನ್ನಂತೆ ಸಾಕುವರು ಇನ್ನೊಬ್ಬರಿಲ್ಲೊ ದೇವ ॥ 1 ॥
ಮಠ್ಯತಾಳ
ಧರಿಯೊಳು ಇದ್ದಂಥ ಪರಿಪರಿ ಕಮಲಗಳು
ಅರಳುವುದಕೆ ಇನ್ನು ಬೇರೆ ಬೇರೆ ರವಿಯುಂಟೆ
ವರುಷ ಕಾಲಗಳಲ್ಲಿ ಸುರಿಸುವ ಮೇಘಗಳು
ಪರಿಪರಿ ಗ್ರಾಮಕೆ ಪರಿಪರಿ ಬೇರುಂಟೆ
ಎರಡೇಳು ಲೋಕಕ್ಕೆ ಧೊರೆ ನೀನಲ್ಲದೆ
ಮರಳಿ ಇನ್ನೊಂದು ದೇವರ ನಾ ಕಾಣೆ
ಕರುಣಾಕರ ರಂಗ ಗೋಪಾಲವಿಠ್ಠಲ
ಮೊರೆಹೊಕ್ಕೆನೊ ಕಾಯೋ ಬಿರಿದುಳ್ಳ ದೇವಾ ॥ 2 ॥
ತ್ರಿಪುಟತಾಳ
ಪಿಡಿಯದೆ ಎನ್ನ ಕರವ ಸಡಿಲ ಬಿಟ್ಟರೆ ಇನ್ನು
ಪೊಡವಿಯೊಳಗೆ ನಿನ್ನ ಒಬ್ಬರು ಮೆಚ್ಚರು
ಮಡದಿ ಪತಿಯರು ಕೂಡಿ ಪಡೆದು ಬಂದ ಶಿಶುವು
ಬಡದಾಡಿದೋಪಾದಿ ನಿನಗೆ ನನಗೆ ನ್ಯಾಯ
ಕೆಡಿವ್ಯಾಟ ಬಿದ್ದರೆ ಬಿಡಿಸುವರಿಲ್ಲವು
ಪಿಡಿಸೋ ನಿನ್ನ ಪಾದರವಿಂದ ಎಂದೆಂದಿಗೆ
ಪೊಡವಿಯೊಳಗೆ ಇನ್ನು ನಿನಗೆ ಸರಿ ಆರಿಲ್ಲ
ದೃಢವಾಗಿ ನೀನಲ್ಲದೆನಗಿನ್ನು ಗತಿಯಿಲ್ಲ
ಬಿಡದೆ ಎನ್ನಲ್ಲಿ ನೀ ಪಡೆದಂಥ ಸುತರನ್ನು
ಕೊಡುವೆ ನಿನಗೆ ತಡಿಯದಲೆ ಇನ್ನು
ತುಡುಗುತನವ ಬಿಡಿಸು ಕೆಡಿಸದೆ ಎನ್ನ ಕಂಡ -
ಕಡೆ ವಿಷಯಗಳಿಗೆ ಎರಗಿಸದೆ
ಬಡವನೆಂದು ಎನ್ನ ಕಡೆ ಕಣ್ಣು ನೋಡಿದರೆ
ಬಡವ ನಾನಲ್ಲ ನಿನ್ನೊಡತಿಗೆ ಪಡಿದೊತ್ತು
ಕಡಲಶಯನ ರಂಗ ಗೋಪಾಲವಿಠ್ಠಲ
ಕಡುದೀನ ರಕ್ಷಕ ನಿಮ್ಮ ನಾಮ ॥ 3 ॥
ಅಟ್ಟತಾಳ
ಊರ ಔತಣ ಹೇಳಿ ಸಾರಿ ಡಂಗುರ ಹೊಯಿಸಿ
ಧೀರರಾಯರಿಗೆಲ್ಲ ಸಾರ ಷಡ್ರಸವಿತ್ತು
ತಿರುಗಿ ತಿರುಗಿ ಇನ್ನು ಬೀರುತ್ತ ಉಣಿಸೊಗೆ
ದ್ವಾರದಲೊಬ್ಬ ಮಾಧಕಾರದವನು ಬಂದು
ಆರಿವರಿದರಿನ್ನು ಹಾರಿ ಸಾಕುವರುಂಟೆ
ಕಾರುಣ್ಯಮೂರುತಿ ಕರುಣದಿಂದಲಿ ಕೇಳು
ನೀರೊಳಗಿನ ಮತ್ಸ್ಯ ನೀರೇ ಬಯಸುವವು
ಘೋರ ಅರಣ್ಯಕ್ಕೆ ಹಾರೈಸಬಲ್ಲವೆ
ಮಾರಜನಕ ನಮ್ಮ ಗೋಪಾಲವಿಠ್ಠಲ
ಸೇರಿಸೋ ನಿನ್ನನು ಸೇರಿದವರ ಬಳಿಯಾ ॥ 4 ॥
ಆದಿತಾಳ
ಒಂದೆ ಬೇಡುವೆ ನಿನ್ನ ಒಂದೆ ದೇವನೆ ಕೇಳು
ಒಂದೆ ಮನವು ಕೊಡು ವಂದಿಸೆ ನಿನ್ನನ್ನು
ಹಿಂದಾನಂತ ಜನ್ಮದಿ ಮಾಡಿದ ದೋಷ
ಮುಂದಾಗುವ ಅನಂತ ದೋಷಗಳಿಗೆ
ಒಂದು ಬಾರೆನ್ನ ನಿನ್ನ ಸ್ಮರಣೆ ಮರಿಸದೆ
ಚೆಂದದಿ ನಿಂತು ಆನಂದದಿ ಪೊರೆಯೊ
ಬಂದೆನು ನಾನಿತ್ತ ಬರಬಾರದೆ ಇನ್ನು
ನೊಂದೆನು ನಾ ಬಲು ಬಂಧಾನ ಸಿಲ್ಕಿನ್ನು
ತಂದದಕೆ ಎನ್ನ ತಂದು ಕಾರ್ಯ ಮಾಡಿಸಿ
ಪೊಂದಿಸು ನಿನ್ನ ಅರವಿಂದ ಚರಣದಲ್ಲಿ
ಕಂದರ್ಪನಯ್ಯ ಗೋಪಾಲವಿಠ್ಠಲ ಇನ್ನು
ಎಂದೆಂದಿಗೆ ಇನ್ನು ನೀನೆ ನೀನೆ ಗತಿ ॥ 5 ॥
ಜತೆ
ನಿನ್ನ ದಾಸರ ದ್ವಾರವನ್ನು ಕಾಯ್ವರ ಮನೆ
ಕುನ್ನಿ ಎಂದೆನಿಸೆನ್ನ ಗೋಪಾಲವಿಠ್ಠಲ ॥
**********
No comments:
Post a Comment