ಕೊಟ್ಟಸಾಲವ ಕೊಡದೆ ಭಂಡಾಟ ಮಾಡುತಾನೆ ||ಪ||
ಎಷ್ಟು ಬೇಡಿದರೆನ್ನ ಪೋಯೆನ್ನುತಾನೆ ||ಅ||
ಭರದಿ ಕೇಳಲು ಜಲದಿ ಕಣ್ಣು ಬಾಯ ಬಿಡುತಾನೆ
ತರುಬಿ ಕೇಳಲು ಕಲ್ಲು ಹೊತ್ತೈತಾನೆ
ಉರುಬಿ ಕೇಳಲು ಊರು ಅಡವಿಯೊಳಗಿರುತಾನೆ
ಇರುಳು ಹಗಲಲ್ಲಿ ಕಾಣಿಸಿಕೊಳ್ಳುತಾನೆ ||
ಕಂಡು ನಿಲ್ಲಿಸಲೆಂದು ಕಾಲಿನಲ್ಲಿ ನಿಲ್ಲುತಾನೆ
ಕೊಂಡ ಸಾಲಕೆ ಕೊಡಲಿ ಪಿಡಿಯುತಾನೆ
ಉಂಡರಾಣೆಯೆನಲು ಉಪವಾಸವೈಧಾನೆ
ಭಂಡುತನದಲಿ ಠಕ್ಕು ನಡೆಸ್ಯಾಡುತಾನೆ ||
ಕೆಟ್ಟು ಬೈಯಲು ಲಜ್ಜೆ ಹೇವವನು ತೊರೆವುತಾನೆ
ಕೊಟ್ಟು ಹೋಗೆನಲು ಕಲಿಯಾಗುತಾನೆ
ಸೃಷ್ಟಿಗೊಡೆಯ ಶ್ರೀರಂಗಪಟ್ಟಣದ ಪುರಂದರ-
ವಿಟ್ಠಲೇಶನು ನಮ್ಮ ಪಶ್ಚಿಮದ ರಂಗನಾಥ ||
****
ರಾಗ ಕೇದಾರಗೌಳ ಝಂಪೆತಾಳ (raga, taala may differ in audio)
pallavi
koTTa sAlava koDade bhaNDATa mADutne
anupallavi
eSTu bEDidarenna pOyennutAne
caraNam 1
bharadi kELalu jaladi kaNNu bAyi biDutAne turubi kELalu kallu hottaidAne
urubi kELalu Uru aDaviyoLagirutAne iruLu hagalalli kANisi koLLutAne
caraNam 2
kaNDu nillisadondu kAlinalli nillutAne koNDa sAlage koDali piDivutAne
uNDarANeyenlu upavAsavathAne bhaNDatanadali dhakku naDesyADutAne
caraNam 3
keTTu baiyalu lajje hEvavanu torevutAne koTTu hOgenalu kaliyAgutAne shrSTi-
goDeya shrIranga paTTaNada purandara viTTalEshanu namma pashcimada ranganAtha
***
No comments:
Post a Comment