ರಾಗ ಮುಖಾರಿ ಝಂಪೆ ತಾಳ
ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು
ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ||
ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ
ತನ್ನಳವನರಿಯದೆ ಧನುವೆತ್ತಲು
ಉನ್ನತದ ಧನು ಎದೆಯ ಮೇಲೆ ಬೀಳಲು, ಬಲು
ಬನ್ನಬಟ್ಟುದ ನೀವು ಕೇಳಿ ಬಲ್ಲಿರಿಯಾ ||
ಕುರುಪನ ಸಭೆಯಲ್ಲಿ ಕೃಷ್ಣ ತಾ
ಬರಲಾಗಿ ಕರೆದು ಮನ್ನಣೆಯ ತಾ ಮಾಡದಿರೆ
ಧರೆಗೆ ಶ್ರೀ ಕೃಷ್ಣನಂಗುಷ್ಠವನೊತ್ತಲು
ಅರಸು ಸಿಂಹಾಸನದಿಂದ ಬಿದ್ದುರುಳಾಡಿದ ||
ಅತಿ ವೇಗದಲಿ ಕೃಷ್ಣ ಸತ್ಯಭಾಮೆ ಕರೆದು
ಸತಿ ಸೀತೆಯಾಗೆಂದು ನೇಮಿಸಲಾಗ
ಮತಿವಂತೆ ಬಗೆ ಬಗೆ ಶೃಂಗಾರವಾದರು
ಸೀತಾ ಸ್ವರೂಪವು ತಾನಾಗಲಿಲ್ಲ ||
ಹನುಮನ ಕರೆಯೆಂದು ಗರುಡನ ಅಟ್ಟಲು
ಮನದಲ್ಲಿ ಕಡು ಕೋಪದಿಂದ ನೊಂದು
ವನಚರ ಬಾಯೆಂದು ಗರುಡ ತಾ ಕರೆಯಲು
ಹನುಮಂತ ಗರುಡನ ತಿರುವಿ ಬೀಸಾಡಿದ ||
ಇಂತಿಂಥ ದೊಡ್ಡವರು ಈ ಪಾಡು ಪಡಲಾಗಿ
ಪಂಥಗಾರಿಕೆ ತರವೆ ಅಲ್ಪ ಜನಕೆ
ಸಂತ ಜನರೊಡೆಯ ನಮ್ಮ ಪುರಂದರ ವಿಠಲನ
ಸಂತತ ಮನದಲಿ ಚಿಂತಿಸಿ ಸುಖಿಸಿರೊ ||
***
ಹೆಮ್ಮೆಯಾಡಲು ಬೇಡಿ, ಹೆಮ್ಮೆ ನೀಡಾಡುವುದು
ಹೆಮ್ಮೆಯಿಂದಲಿ ನೀವು ಕೆಡಬೇಡಿರಯ್ಯ ||ಪ||
ಮುನ್ನೊಮ್ಮೆ ರಾವಣನು ಜನಕನ ಸಭೆಯಲ್ಲಿ
ತನ್ನಳವನರಿಯದೆ ಧನುವೆತ್ತಲು
ಉನ್ನತದ ಧನು ಎದೆಯ ಮೇಲೆ ಬೀಳಲು, ಬಲು
ಬನ್ನಬಟ್ಟುದ ನೀವು ಕೇಳಿ ಬಲ್ಲಿರಿಯಾ ||
ಕುರುಪನ ಸಭೆಯಲ್ಲಿ ಕೃಷ್ಣ ತಾ
ಬರಲಾಗಿ ಕರೆದು ಮನ್ನಣೆಯ ತಾ ಮಾಡದಿರೆ
ಧರೆಗೆ ಶ್ರೀ ಕೃಷ್ಣನಂಗುಷ್ಠವನೊತ್ತಲು
ಅರಸು ಸಿಂಹಾಸನದಿಂದ ಬಿದ್ದುರುಳಾಡಿದ ||
ಅತಿ ವೇಗದಲಿ ಕೃಷ್ಣ ಸತ್ಯಭಾಮೆ ಕರೆದು
ಸತಿ ಸೀತೆಯಾಗೆಂದು ನೇಮಿಸಲಾಗ
ಮತಿವಂತೆ ಬಗೆ ಬಗೆ ಶೃಂಗಾರವಾದರು
ಸೀತಾ ಸ್ವರೂಪವು ತಾನಾಗಲಿಲ್ಲ ||
ಹನುಮನ ಕರೆಯೆಂದು ಗರುಡನ ಅಟ್ಟಲು
ಮನದಲ್ಲಿ ಕಡು ಕೋಪದಿಂದ ನೊಂದು
ವನಚರ ಬಾಯೆಂದು ಗರುಡ ತಾ ಕರೆಯಲು
ಹನುಮಂತ ಗರುಡನ ತಿರುವಿ ಬೀಸಾಡಿದ ||
ಇಂತಿಂಥ ದೊಡ್ಡವರು ಈ ಪಾಡು ಪಡಲಾಗಿ
ಪಂಥಗಾರಿಕೆ ತರವೆ ಅಲ್ಪ ಜನಕೆ
ಸಂತ ಜನರೊಡೆಯ ನಮ್ಮ ಪುರಂದರ ವಿಠಲನ
ಸಂತತ ಮನದಲಿ ಚಿಂತಿಸಿ ಸುಖಿಸಿರೊ ||
***
pallavi
hommeyADalu bEDi hemme nIDADuvudu hemmeyindali nIvu keD bEDirayya
caraNam 1
munnomme rAvaNanu janagaLa sabheyalli tannalavanariyade dhanuvettalu
unnatada dhanu edeya mEle bILalu balu banna baTTuda nIvu kELi balliriyA
caraNam 2
kurupana sabheyalli krSNa tA bharalAgi karedu mannaNeya tA mADadire
dharege shrI krSNananguSTavanottalu arasu simhAsanadinda bidduruLADida
caraNam 3
ati vEgadali krSNa satyabhAme karedu sati sIteyAgendunEmisalkAga
mativante bage bage shrngAravAdaru sItA svarUpavu tAnAgalilla
caraNam 4
hanumana kareyendu garuDana aTTalu manadalli kaDu kOpadinda nondu
vanacarane bArendu garuDa tA kareyalu hanumanta garuDana tiruvi bIsADIda
caraNam 5
indhintha doDDavaru I pADu paDalAgi bandhagArike tarave alpa janake
santa janaroDeya namma purandara viTTalana santata manadali cintisi sukhisiro
***
No comments:
Post a Comment