Tuesday, 9 November 2021

ಚಂದವ ನೋಡಿರೆ ಗೋಕುಲ ನಂದನ ಮೂರುತಿಯ purandara vittala CHANDAVA NODIRE GOKULA NANDANA MOORUTIYA



ಚಂದವ ನೋಡಿರೆ ಗೋಕುಲ-
ನಂದನ ಮೂರುತಿಯ ||ಪ||

ಅಂದುಗೆ ಪಾಡಗ ಗೆಜ್ಜೆಯ ಧರಿಸಿ
ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ||

ಕೊರಳ ಪದಕ ಹಾರ ಬಿಗಿದು
ತರಳರೆಲ್ಲರ ಕೂಡಿಕೊಂಡು
ಕುರುಳುಗೂದಲು ಅರಳೆಲೆಯ
ಥಳಥಳಿಸುತ ಮೆರೆವ ಕೃಷ್ಣನ ||

ಉಡಿಯ ಘಂಟೆ ಘಳಿಲೆನುತ
ನುಡಿದು ಮೆಲ್ಲನೆ ಪಿಡಿದುಕೊಂಡು
ನಡೆಗೆ ಮಾಲುತ ಸಡಗರದಲಿ
ಬೆಡಗು ಮಾಡಿ ಆಡುವ ರಂಗನ ||

ಬಲು ಅಸ್ಥೈರ್ಯದಿಂದಲಿ
ನಲಿವ ಪುರಂದರವಿಠಲರಾಯ
ಹಲವು ಸುಖವ ನಮಗಿತ್ತು
ಜಲಜಲೋಚನ ಬಾಲಕೃಷ್ಣನ ||
***

pallavi

candava nODire gOkula nandana mUrutiya

anupallavi

anduge pADaga gejjeya darisi dhim dhimikendu kuNiyuva krSNana

caraNam 1

koraLa padaka hAra bigidu taraLarellara kUDi koNDu
kuruLugUdalu araLeleya thaLathaLisuta mereva krSNana

caraNam 2

uDiya kaNDe ghaLilenuta nuDidu mellane piDidukoNDu
naDege mAluta saDagaradali beDagu mADi Aduva rangana

caraNam 3

balu astairyadindali naliva purandara viTTalarAya
halavu sukhava namagitta jalajalOcana bAlakrSNana
***

ರಾಗ ಮುಖಾರಿ. ಅಟ ತಾಳ (raga, taala may differ in audio)

No comments:

Post a Comment