Wednesday 4 December 2019

ಗಂಡ ಬಂದ ಹೇಗೆ ಮಾಡಲೇ ಅಯ್ಯಯ್ಯೋ ಪಾಪಿ purandara vittala

ರಾಗ ನಾದನಾಮಕ್ರಿಯ. ಛಾಪು ತಾಳ

ಗಂಡ ಬಂದ ಹೇಗೆ ಮಾಡಲೇ, ಅಯ್ಯಯ್ಯೋ ಪಾಪಿ ||ಪ ||

ಪಂಚಮಹಾ ಪಾತಕಿ ಗಂಡ, ಹೊಂಚಿಕ್ಕಿ ನೋಡಿಕೊಂಡು
ವಂಚನೆಯಿಂದಲಿ ಗುಡುಗು-ಮಿಂಚಿನಂತೆ ಬಂದು ನಿಂತ
ಮಂಚದ ಕೆಳಗಾರು ಹೊಕ್ಕೊಳ್ಳೊ, ನಿಧಿ ಹಿಡಿಸುವಂಥ
ಸಂಚಿಯೊಳಗಾದರು ಕೂಡೆಲೊ, ಧಾನ್ಯದ ದೊಡ್ಡ
ಹಂಚಿನ್ಹರವಿಯಲ್ಲಿ ಅಡಗೆಲೊ ||

ನಾಳೆ ಬಾ ಎಂದ್ಹೇಳಿ ನಾನು, ಕಾಲನೆಲ್ಲ ಕಟ್ಟಿಕೊಂಡೆ
ಬಾಳುವರ ಮಕ್ಕಳಿಗೆ , ಜಾಳಿಗೀ ಹಾಕುವರಾ ಬುದ್ಧಿ
ಕೇಳಿ ಎನ್ನ ಮಾತು ಮೀರಿದ್ಯ, ಎನಗೆ ಇಂಥ
ಧಾಳಿ ತಂದು ತೋರಿದ್ಯ , ನಮ್ಮಿಬ್ಬರನ್ನು
ಗಾಳಿಗಿಟ್ಟು ಸದರ ಮಾಡಿದ್ಯ ||

ಮುಟ್ಟಬೇಡೆಂದು ನಾನು, ಮೊಟ್ಟಮೊದಲೇ ಹೇಳಿ ಇದ್ದೆ
ಕೆಟ್ಟ ವೇಳೆಯಲ್ಲಿ ಬಂದು, ಕಟ್ಟಿನಲ್ಲಿ ಸಿಲುಕಿದೆಯೊ
ಅಟ್ಟದ ಮೇಲಾದರು ಕೂತುಕೊಳ್ಳೊ, ನಿನ್ನ ಹಿಡಿಸುವಂಥ
ಪೆಟ್ಟಿಗೆಯೊಳಗಾದರು ಹೊಕ್ಕೊಳ್ಳೊ, ಕೈಯಲ್ಲಿ ಕೊಳ್ಳಿ-
ಕಟ್ಟಿಗೆಯಾದರು ಹಿಡಕೊಳ್ಳೊ ||

ಸೀರೆಯನ್ನು ಉಟ್ಟುಕೊಂಡು, ನಾರಿಯಂತೆ ರೂಪ ತೋರಿ
ಮೋರೆ ಮುಸುಕು ಮಾಡಿಕೊಂಡ, ಗಾಳಿ ಸೇರ್ದನಾಗಿ ಪೋದ
ಈ ರೀತಿಗಿನ್ನ್ಹೇಗೆ ಮಾಡಲೊ, ಮುಂಜಾನೆಯೆದ್ದು
ಮೋರೆಯನ್ನು ಹೇಗೇ ತೋರಲೊ, ಸರಿ ನಾರಿಯರ ಕೂಡಿ
ನೀರಿಗೆ ಇನ್ಹೇಗೆ ಹೋಗಲೊ ||

ಹಾದರ ಎಂಬೋದು ಹರಿಗುಂಟೆ ಕಾಣೆ ಬ್ರಾಹ್ಮರಿಗೆ
ಹೋದ ಬುದ್ಧಿಗಾಗಿ ಇನ್ನು, ಖೇದಬಟ್ಟರೇನೊ ಮುಂದೆ
ಹಾದಿ ತೋರೋ ಪುರಂದರವಿಠಲ, ನಿನ್ನ ನಂ-
ಬಿದೆನು ಈಗ ನಾನು ಹಡೆದ ಮಕ್ಕಳನೆಲ್ಲ ಸಾಧಿಸಿ ನಿನ್ನೀ
ಪಾದಕೆ ಅರ್ಪಿಸಿಹನೊ ರಂಗಯ್ಯ ||
***

pallavi

gaNDa banda hEge mADale ayyayyO pApi

caraNam 1

pancamahA pAtaki gaNDa honcikki nODikoNDu vancaneyindali guDugu
mincinante bandu ninta mancada keLagAruhokkoLLo nidhi hiDisuvantha
sanciyoLagAdaru kUDelo dhAnyada doDDa hancinharaviyalli aDagelo

caraNam 2

nALe bA endhELi nAnu kAlanella kaTTikoNDe bALuvara makkaLige
jALigI hAkuvarA buddhi kELi enna mAtu mIridya enage intha dhALiyannu
tandu tOridya nammibbarannu gLigiTTu stara mADitya

caraNam 3

muTTabEDendu nAnu moTTamodale hELi idde keTTa vELeyalli bandu
kaTTinalli silukideyo aTTada mElAdaru kUtukoLLo ninna hiDisuvantha
peTTigeyoLagAdiru hokkoLLo kaiyalli koLLi kaTTigeyAdaru hiDakoLLo

caraNam 4

sIreyannu uTTUkoNDu nAriyante rUpa tOri mOre musuku mADikoNDa
gALi sErdanAgi pOda I rItiginnEhge mADalo mujnAneyeddu moreyannu
hEgE tOralo sari nAriyara kUDi nIrige inhEge hOgalo

caraNam 5

hAdara embOdu hari guNTe kANe brAhmarige hOda buddhigAgi
innu khEdabaTTarEno munde hAdi tOrO purandara viTTala ninna
nambidenu Iga nAnu pAdake arpisihano rangayya
***

No comments:

Post a Comment