Wednesday, 4 December 2019

ಕಲ್ಯಾಣಂ ತುಳಸಿ ಕಲ್ಯಾಣಂ‌ ಕಲ್ಯಾಣವೇ ನಮ್ಮ purandara vittala KALYANAM TULASI KALYANAM


1st Audio by Sri. Madhava Rao





ಕಲ್ಯಾಣಂ ತುಳಸಿ ಕಲ್ಯಾಣಂ
ಕಲ್ಯಾಣಂ ತುಳಸಿ ಕಲ್ಯಾಣಂ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||ಕಲ್ಯಾಣಂ..||

ಅಂಗಳದೊಳಗೆಲ್ಲ ತುಳಸಿಯ ವನ ಮಾಡಿ
ಶೃಂಗಾರ ಮಾಡಿ ಶೀಘ್ರದಿಂದ|
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ನೆಲೆಸಿದನು||ಕಲ್ಯಾಣಂ..||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆ ಪುಷ್ಪದಿಂದ|
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು||ಕಲ್ಯಾಣಂ..||

ಉತ್ತಾನ ದ್ವಾದಶಿ ದಿವಸದಿ ಕೃಷ್ಣಗೆ
ಉತ್ತಮ ತುಳಸಿಗೆ ವಿವಾಹವ|
ಚಿತ್ತ ನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿಯೀವ ಪುರಂದರ ವಿಠಲ||ಕಲ್ಯಾಣಂ..||
***

Kalyaanam tulasi kalyaanam || pa ||
Kalyaanave namma shreekrushna tulasige |
Ballida shreevaasudevanige || a.pa. ||

Angaladolagellaa tulasiya vana maadi |
Shreengaarava maadi sheegradimda ||
Kangala paapava pariharisuva muddu |
Ranga bandilli nelesihanu || 1 ||

Mindu madiyanuttu | sandehava bittu |
Tandu shreegandhaakshategalindaa |
Sindhu shayanana vrundaavanadi poojise |
Kundada bhaagyava kodutihalu || 2 ||

Bhakshya bhojyangala naivedyavanittu |
Lakshya battiya deepava hacci ||
Adhokshaja sahita vrumdaavanadi poojise |
Saakshaat mokshava kodutihalu || 3 ||

Utthaana dwaadasi divasadimdali |
Shreekrushna uttama tulasige vivaahava |
Chitta nirmalaraagi maadidavarige |
Uttama gati eeva purandara vithala || 4 ||
***

pallavi

kalyANam tulasi kalyANam

anupallavi

kalyANavE namma krSNa shrI tulasige ballida shrI vASudEvanige

caraNam 1

angaLadoLagella tulasiya vana mADi shrngArava mADi shIgradinda
kangaLa pApava pariharisuva muddu ranga bandalli tA nelisidanu

caraNam 2

mindu maDiyanuTTu sandEhava biTTu tanda shrI gandhAkSategaLinda
sindhu shayanana vrndAvanadi pUjise kundada bhAgyava koDutihaLu

caraNam 3

bhakSya bhOjyangaLa naivEdyavanittu lakSa battiya dIpava hacci
adhOkSaja sahita vrndAvana pUjise sakSAt mOkSava koDutihaLu

caraNam 4

uddhAna dvAdashi divasadindali krSNa uttama tulasige vivAha
citta nirmalarAgi mADidavarige uttama gati Iva purandara viTTala
***

ಕಲ್ಯಾಣಂ ತುಳಸಿ ಕಲ್ಯಾಣಂ                      ||ಪ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ                       ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ
ಮುದ್ದುರಂಗ ಬಂದಲ್ಲಿ ತಾ ನೆಲೆಸಿದನು          ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು                 ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು              ||೩||

ಉತ್ಥಾನ ದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ           ||೪||
***

ರಾಗ ಸೌರಾಷ್ಟ್ರ , ಆದಿತಾಳ (raga, taala may differ in audio)



ಕಲ್ಯಾಣಂ #ತುಳಸಿ #ಕಲ್ಯಾಣಂಕಲ್ಯಾಣಂ ತುಳಸಿ ಕಲ್ಯಾಣಂ‌ ll

ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆಬಲ್ಲಿದ ಶ್ರೀ ವಾಸುದೇವನಿಗೆ ll ಕಲ್ಯಾಣಂ ll
ಅಂಗಣದೊಳಗೆಲ್ಲ ತುಳಸಿಯ ವನ ಮಾಡಿ

ಶೃಂಗಾರ ಮಾಡಿ ಶೀಘ್ರದಿಂದ l

ಕಂಗಳ ಪಾಪವ ಪರಿಹರಿಸುವ 

ಮುದ್ದುರಂಗ ಬಂದಲ್ಲಿ ನೆಲೆಸಿದನು ll ಕಲ್ಯಾಣಂ ll


ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು

ತಂದ ಶ್ರೀ ಗಂಧಾಕ್ಷತೆ ಪುಷ್ಪದಿಂದ l

ಸಿಂಧು ಶಯನನ ವೃಂದಾವನದಿ 

ಪೂಜಿಸೆಕುಂದದ ಭಾಗ್ಯವ ಕೊಡುತಿಹಳು ll ಕಲ್ಯಾಣಂ ll


ಭಕ್ಷ್ಯ ಭೋಜಂಗಳ ನೈವೇದ್ಯವನಿತ್ತು l

ಲಕ್ಷ ಬತ್ತಿಯ ದೀಪವ ಹಚ್ಚಿ ll

ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ l

ಸಾಕ್ಷಾತ್ ಮೋಕ್ಷವ ಕೊಡುತಿಹಳು ll ಕಲ್ಯಾಣಂ ll


ಉತ್ಥಾನ ದ್ವಾದಶಿ ದಿವಸದಿ ಕೃಷ್ಣಗೆ

ಉತ್ತಮ ತುಳಸಿಗೆ ವಿವಾಹವ l

ಚಿತ್ತ ನಿರ್ಮಲವಾಗಿ ಮಾಡಿದವರಿಗೆ

ಉತ್ತಮ ಗತಿಯೀವ #ಪುರಂದರ #ವಿಠಲ ll ಕಲ್ಯಾಣಂ ll

******

No comments:

Post a Comment