ರಾಗ ಭೂರಿಕಲ್ಯಾಣಿ ಅಟತಾಳ
ಇತ್ತತ್ತು ಓಡಿ ನೀ ಘಾಸಿಪಡಲು ಬೇಡ
ಎತ್ತೂ ಇಹನು ಕೃಷ್ಣನು ||ಪ||
ಶುದ್ಧಮನದಿಂದ ಇದ್ದ ಎಡೆಯಲಿ
ಬುದ್ಧಿಯ ಅವನಲಿ ನಿಲ್ಲಿಸಬೇಕಯ್ಯ ||ಅ||
ಒಡಲೆಂಬ ಮನೆಯಲ್ಲಿ ನೀನು ಇರುತಿರ್ದಿ
ಕಡಲಶಯನ ಕೃಷ್ಣನು
ಒಡಗೂಡಿ ಮರುತನ್ನ ಮಾಯವ ಮುಂದಿದ್ದು
ತಟಿಯಂತೆ ಪೊಳೆಯುವ ನಿನ್ನ ಎದುರಾಗಿ ||
ಒಂದೆ ಮನದಲಿ ನೆನೆಯಲು ಹೋಗೋದು
ಹಿಂದಿನ ದುಷ್ಕರ್ಮವು
ಸಂದೇಹ ಬೇಡಯ್ಯ ಇರುಳು ಓಡುವುದು
ಚೆನ್ನಾಗಿ ಜ್ಯೋತಿಯ ಒಳಗೆ ತೋರುವುದು ||
ನಾರಾಯಣ ಮುನಿವಂದ್ಯ ನಾರಾಯಣನೆಂದು
ನಾರಿ ದ್ರೌಪದಿಯಳ
ಧೀರ ಪ್ರಹ್ಲಾದಗೆ ತೋರಿದ ಬಗೆಯೆಲ್ಲ
ಸಾರಿ ತಿಳಿಯಬೇಕಣ್ಣ ||
ಸ್ನಾನ ಮಾಡಲು ಒಲಿಯ, ದಾನ ಮಾಡಲು ಒಲಿಯ
ಮೌನ ಮಂತ್ರಗಳಿಗೆ ಒಲಿಯ
ದೀನರಕ್ಷಕಸ್ವಾಮಿ ಮಾನದಿಂ ಸಲಹುವ
ಧೇನಿಪ ಸುಜನರನ್ನ ||
ಕಾಶಿಯಾತ್ರೆಯು ಬೇಡ ಕಾಸು ಕಳೆಯಬೇಡ
ಮೋಸ ಹೋಗದೆ ನೆನೆಯಣ್ಣ
ದೋಷರಹಿತ ತಂದೆ ಪುರಂದರವಿಠಲನ
ಸಾಸಿರ ನಾಮವನ್ನ ||
***
ಇತ್ತತ್ತು ಓಡಿ ನೀ ಘಾಸಿಪಡಲು ಬೇಡ
ಎತ್ತೂ ಇಹನು ಕೃಷ್ಣನು ||ಪ||
ಶುದ್ಧಮನದಿಂದ ಇದ್ದ ಎಡೆಯಲಿ
ಬುದ್ಧಿಯ ಅವನಲಿ ನಿಲ್ಲಿಸಬೇಕಯ್ಯ ||ಅ||
ಒಡಲೆಂಬ ಮನೆಯಲ್ಲಿ ನೀನು ಇರುತಿರ್ದಿ
ಕಡಲಶಯನ ಕೃಷ್ಣನು
ಒಡಗೂಡಿ ಮರುತನ್ನ ಮಾಯವ ಮುಂದಿದ್ದು
ತಟಿಯಂತೆ ಪೊಳೆಯುವ ನಿನ್ನ ಎದುರಾಗಿ ||
ಒಂದೆ ಮನದಲಿ ನೆನೆಯಲು ಹೋಗೋದು
ಹಿಂದಿನ ದುಷ್ಕರ್ಮವು
ಸಂದೇಹ ಬೇಡಯ್ಯ ಇರುಳು ಓಡುವುದು
ಚೆನ್ನಾಗಿ ಜ್ಯೋತಿಯ ಒಳಗೆ ತೋರುವುದು ||
ನಾರಾಯಣ ಮುನಿವಂದ್ಯ ನಾರಾಯಣನೆಂದು
ನಾರಿ ದ್ರೌಪದಿಯಳ
ಧೀರ ಪ್ರಹ್ಲಾದಗೆ ತೋರಿದ ಬಗೆಯೆಲ್ಲ
ಸಾರಿ ತಿಳಿಯಬೇಕಣ್ಣ ||
ಸ್ನಾನ ಮಾಡಲು ಒಲಿಯ, ದಾನ ಮಾಡಲು ಒಲಿಯ
ಮೌನ ಮಂತ್ರಗಳಿಗೆ ಒಲಿಯ
ದೀನರಕ್ಷಕಸ್ವಾಮಿ ಮಾನದಿಂ ಸಲಹುವ
ಧೇನಿಪ ಸುಜನರನ್ನ ||
ಕಾಶಿಯಾತ್ರೆಯು ಬೇಡ ಕಾಸು ಕಳೆಯಬೇಡ
ಮೋಸ ಹೋಗದೆ ನೆನೆಯಣ್ಣ
ದೋಷರಹಿತ ತಂದೆ ಪುರಂದರವಿಠಲನ
ಸಾಸಿರ ನಾಮವನ್ನ ||
***
pallavi
ittattu Odi nI gAsipaDalu bEDa ettU ihanu krSNanu
anupallavi
shuddha manadinda idda eDeyali buddhiya avanali nillisa bEkayya
caraNam 1
oDalemba maneyali nInu irutirdi kaDalashayana krSNanu oDagUDi
marutanna mAyava mundiddu taTiyante poLeyuva ninna edurAgi
caraNam 2
ondE manadali neneyalu hOgOdu hindina duSkarmavu
sandEha bEDayya iruLu Oduvadu cennAgi jyOtiyu oLage tOruvudu
caraNam 3
nArada muni vandya nArAyaNanendu nAri draupadiyaLa
dhIra prahlAdage tOrida bageyella sAri tiLiya bEkaNNa
caraNam 4
snAna mADalu oliya dAna mADalu oliya mauna mntragaLige oliya
dIna rakSaka svAmi mAnadim salahuva dhEnpia sujanarannu
caraNam 5
kAshi yAtreyu bEDa kAsu kaLeyabEDa mOsa hOgade neneyaNNa
dOSa rahita tande purandara viTTalana sAsira nAmavanna
***
No comments:
Post a Comment