Monday, 6 December 2021

ನರಹರಿ ಎನಬಾರದೆ ಬಾರಿ ಬಾರಿಗೀ ಶರೀರವು purandara vittala NARAHARI ENABAARADE BAARI BAARIGI SHAREERAVU



ನರಹರಿ ಎನಬಾರದೆ ||ಪ||

ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು |
ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅಪ||

ದಾರಿದ್ರ್ಯಾದಿ ಭಯವೊಂದು ಇಲ್ಲ | ದಾರಿ ವೈಕುಂಠಕ್ಕೆ ತೋರೋದಲ್ಲ ||
ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವ ಋಷಿಯಾದನು ||೧||

ಜಪತಪದಲ್ಲಿ ಮಾಡು ಮತಿಜಪಿತ ಮಾರ್ಗವಿದು ಕಠಿಣವಲ್ಲ ||
ಶ್ರೀಪತಿಯೆಂದ ದ್ರೌಪದಿಯ ಅಭಿಮಾನವ ಕಾಯಿದ ಶ್ರೀ ನಾಮವು ||೨||

ಮಂಗಳ ಮೂರುತಿಯೆ ಹಿಂಗದೆ ಭಕ್ತಿರಸದಲ್ಲಿ ಮುಳುಗಿದೆ ||
ರಂಗಪುರಂದರ ವಿಠಲರಾಯನ ಉರಗಶಯನನಾದ ನಾಮವು ||೩||
***

narahari enabArade ||pa||

bAri bArigI SarIravu bArad~hAge mADO nAmavu |
GOrisida prahlAdana janakana urava sILida nAmavu ||apa||

dAridryAdi BayavoMdu illa | dAri vaikuMThakke tOrOdalla ||
nArAyaNa nimma nAma uccarisida nArada dEva RuShiyAdanu ||1||

japatapadalli mADu matijapita mArgavidu kaThiNavalla ||
SrIpatiyeMda draupadiya aBimAnava kAyida SrI nAmavu ||2||

maMgaLa mUrutiye hiMgade Baktirasadalli muLugide ||
raMgapuraMdara viThalarAyana uragaSayananAda nAmavu ||3||
***

ರಾಗ ಕಲ್ಯಾಣಿ ಅಟತಾಳ (raga tala may differ in audio)

ನರಹರಿ ಎನಬಾರದೆ ||ಪ||
ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು
ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ||

ದಾರಿದ್ರ್ಯಾದಿ ಭಯವೊಂದು ಇಲ್ಲ , ದಾರಿ ವೈಕುಂಠಕೆ ತೋರೋದಲ್ಲ
ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವಋಷಿಯಾದನು ||

ಜಪತಪದಲಿ ಮಾಡು ಮತಿ, ಜಪಿತ ಮಾರ್ಗವಿದು ಕಠಿನವಲ್ಲ
ಶ್ರೀಪತಿಯೆಂದ ದ್ರೌಪದಿಯ ಅಭಿಮಾನವ ಕಾಯಿದ ಶ್ರೀ ನಾಮವು ||

ಮಂಗಳಮೂರುತಿಯೆ ಹಿಂಗದೆ ಭಕ್ತಿರಸದಲ್ಲಿ ಮುಣುಗಿದೆ
ರಂಗ ಪುರಂದರವಿಠಲರಯನ ಉರಗಶಯನನಾದ ನಮವು ||
***********

No comments:

Post a Comment