Saturday, 4 December 2021

ನಿನ್ನ ಮಗನ ಗಾಳಿ ಘನವಮ್ಮ ಕರೆದು ರಂಗಗೆ ಬುದ್ಧಿ purandara vittala NINNA MAGANA GAALI GHANAVAMMA KAREDU RANGAGE BUDDI




ನಿನ್ನ ಮಗನ ಘಾಳಿ ಘನವಮ್ಮ ||ಪ|| 

ಕರೆದು ರಂಗಗೆ ಬುದ್ಧಿ ಪೇಳೇ ಗೋಪ್ಯಮ್ಮ ||ಅಪ|| 

ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ, 
ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ || 
ಕೋಲ ತಂದು ಕೊಲ್ಲ ಪೋದರೆ ಅಮ್ಮ ಲೀಲೆಯಿಂದ ಓಡಿ ಪೋದನಮ್ಮ ||೧|| 

ಮೊಸರು ಕಡೆವಲ್ಲಿ ಇವನ ಘಾಳಿ ಘನವಮ್ಮ, 
ಶಿಶುವಿನ ಕೈಲಿ ಬೆಣ್ಣೆ ಉಳಿಯಗೊಡನಮ್ಮ || 
ಮೊಸರು ಮಾರುವರು, ಮೊರೆ ಇಡುವರಮ್ಮ ಶಶಿಮುಖಿಯರು ಹೀಗೆ ದೂರುವರಮ್ಮ ||೨|| 

ಊರೊಳು ಬರಲೀಸ ಕೇರಿಯೊಳು ಬರಲೀಸ ಈರೇಳು ಲೋಕಕೆ ಒಡೆಯ ತಾನಂತೆ || 
ಧೀರ ಶ್ರೀ ಪುರಂದರ ವಿಠಲರಾಯನ ಕೇರಿ ಬಸವನ ಮಾಡಿಬಿಟ್ಟೆ ಗೋಪ್ಯಮ್ಮ ||೩|| 
***

ninna magana GALi Ganavamma ||pa|| 
karedu raMgage buddhi pELE gOpyamma ||apa|| 

hAlu kAyuvalli ivana GALi Ganavamma, 
kAlu taMdu kElinoLage addi pOdanamma || 
kOla taMdu kolla pOdare amma lIleyiMda ODi pOdanamma ||1|| 

mosaru kaDevalli ivana GALi Ganavamma, 
SiSuvina kaili beNNe uLiyagoDanamma || 
mosaru mAruvaru, more iDuvaramma SaSimuKiyaru hIge dUruvaramma ||2|| 

UroLu baralIsa kEriyoLu baralIsa IrELu lOkake oDeya tAnaMte || 
dhIra SrI puraMdara viThalarAyana kEri basavana mADibiTTe gOpyamma ||3||
***

pallavi

ninna magana gALi ghanavamma karedu rangage buddhi pELe gOpyamma

caraNam 1

hAlu kAyuvalli ivana kALi ghanavamma kAlu tandu gElinoLage addi pOdanamma
kOla tandu kolla pOdare amma lIleyinda Odi pOdanamma

caraNam 2

mosaru kaDevalli ivana kALi ghanavamma shishuvina kaili beNNe uLikoDanamma
mosaru mAruvaru moreyiDuvaramma shashi mukhiyaru hIge dUruvaramma

caraNam 3

UroLu baralIsa kEriyoLu suLiyalIsa IrELu lOkakke oDeya tAnante
dhIra shrI purandara viTTalarAyana kEri basavana mADi biTTe gOpyamma
***


ನಿನ್ನ ಮಗನ ಗಾಳಿ ಘನವಮ್ಮ
ಕರೆದು ರಂಗಗೆ ಬುದ್ಧಿ ಪೇಳೆ ಗೋಪ್ಯಮ್ಮ ||ಪ||

ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ
ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ
ಕೋಲತಂದು ಕೊಲ್ಲಪೋದರೆ
ಅಮ್ಮ ಲೀಲೆಯಿಂದ ಓಡಿ ಪೋದನಮ್ಮ ||

ಮೊಸರು ಕಡೆವಲ್ಲಿ ಇವನ ಗಾಳಿ ಘನವಮ್ಮ
ಶಿಶುವಿನ ಕೈಲಿ ಬೆಣ್ಣೆ ಉಳಿಗೊಡನಮ್ಮ
ಮೊಸರು ಮಾರುವರು ಮೊರೆಯಿಡುವರಮ್ಮ
ಶಶಿಮುಖಿಯರು ಹೀಗೆ ದೂರುವರಮ್ಮ ||

ಊರೊಳು ಬರಲೀಸ ಕೇರಿಯೊಳು ಸುಳಿಯಲೀಸ
ಈರೇಳು ಲೋಕಕ್ಕೆ ಒಡೆಯ ತಾನಂತೆ
ಧೀರ ಶ್ರೀಪುರಂದರವಿಟ್ಠಲರಾಯನ
ಕೇರಿ ಬಸವನ ಮಾಡಿ ಬಿಟ್ಟೆ ಗೋಪ್ಯಮ್ಮ ||
***

ರಾಗ ಬಿಲಹರಿ ಛಾಪುತಾಳ  (raga tala may differ in audio)

No comments:

Post a Comment