ಇಂದಿರಾರಮಣ ಗೋವಿಂದ ನಿನ್ನಯ ಪಾದ-
ದ್ವಂದ್ವವೆನಗೆ ಸಾಕೆಲೊ ||ಪ||
ಅಂದು ಬ್ರಹ್ಮಾಂಡವ ಸೀಳಿದಂಥ ಪಾದ
ಎಂದೆಂದು ಭಕುತರು ಲಾಲಿಸುವ ನಿನ್ನ ||ಅ||
ನಾರಾಯಣ ನಿನ್ನ ನಾಮವು ಅಜಮಿಳನ
ಘೋರಪಾಪವ ಅಟ್ಟಿತೊ
ಸಾರಿ ನಿನ್ನನು ಭಜಿಪ ಚಾರು ಭಕ್ತರಿಗೆ
ಕೋರಿದ ವರಗಳ ನೀಡುವ ದಾತನೆ ||
ಮುನಿಗಳು ತಮ್ಮ ತಮ್ಮ ಮನವನೆ ನಿಲ್ಲಿಸಿ
ಘನತರ ಮಹಿಮ ನಿನ್ನ
ನೆನೆವುತ್ತಿರಲು ಅವರ ಕಾವಲಾಗಿರುತಿದ್ದೆ
ಅನಾಥರಕ್ಷಕ ಕಾರುಣ್ಯಮೂರುತಿ ||
ಒಂದೆ ಮೂರುತಿಯಾಗಿ ಎಂದು ಇರುವನಾಗಿ
ಪೊಂದಿದೆ ಅನಂತ ರೂಪವೆಲ್ಲ
ಒಂದು ಅರಿಯದ ಎನ್ನ ಕಾಯಬೇಕೋ ಅಣ್ಣ
ತಂದೆ ಪುರಂದರ ವಿಠಲ ರಾಯನೆ ||
****
ರಾಗ ಆರಭಿ ಆದಿತಾಳ (raga tala may differ in audio)
pallavi
indirA ramaNa gOvinda ninnaya pAda dvandvavenage sAkelo
anupallavi
andu brahmANDava sILidantha pAda endendu bhakutaru lAlisuva ninna
caraNam 1
nArAyaNa ninna nAmavu ajamiLana ghOra pApava aTTito sari
ninnaya bhajipa cAru bhaktarige kOrida varagaLa nIDuva dAtane
caraNam 2
munigaLu tamma tamma manavane nillisi ghanatara mahima ninna
nenevuttiralu avara kAvalAgirutidde anAtha rakSaka kAruNya mUruti
caraNam 3
onde mUrutiyAgi endu iruvanAgi pondide anantara rUpavella
ondu ariyada enna kAya bEkO aNNa tande purandara viTTalarAyane
***
No comments:
Post a Comment