Saturday, 4 December 2021

ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ankita gopalakrishna vittala MADHWAMUNIYE ENNA UDDHARISINNA MADHWACHARYA STUTIH



ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ||ಪ||


ಸದ್ಗುರುವೆ ನಿನ್ನ ಪದ್ಮಪಾದಗಳಿಗೆ

ಬಿದ್ದು ಮುಗಿವೆ ಕರ ಸದ್ವೈಷ್ಣವ ಮಣಿ ||ಅ.ಪ||


ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ

ಸಿರಿವರನಲಿ ಜನಿಸಿ ವಾಯುವೆಂದೆನಿಸಿ

ಸುರರೆಲ್ಲ ಮೊರೆಯಿಡೆ ಹರಿಯವತರಿಸಿ

ಹರಿಯ ಸೇವೆಗೆ ನೀ ಮಾರುತಿ ಎನಿಸಿ

ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು

ದುರುಳನ ಪುರ ಸುರಮುಖನಿಗರ್ಪಿಸಿದೆ ||೧||


ಚಂದ್ರವಂಶದಲಿ ಬಂದ್ಯೊ ಬಲಶಾಲಿ

ನಂದಕಂದನ ಲೀಲೆ ಅಂದ ಪಾಡುತಲಿ

ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ

ಅಂದು ಕೌರವರಲಿ ನಿಂದ್ಯೊ ದ್ವೇಷದಲಿ

ಇಂದುಮುಖಿಗೆ ಸೌಗಂಧಿಕ ಇತ್ತು ಕುರು

ನಂದನ ವಂಶವನಂದು ಛೇದಿಸಿದೆ ||೨||


ದುರುಳರೆಲ್ಲರು ಬಂದು ಕಲಿಯುಗದಿ ನಿಂದು

ಹರಿಯು ನರನು ಒಂದು ಅರುಹಲಿಂತೆಂದು

ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು

ಸಿರಿವರ ಪೊರೆಯೆಂದು ಮೊರೆಯಿಡಲಂದು

ಹರಿ ನಿನಗರುಹಲು ಧರೆಯಲ್ಲಿಗೆ ಬಂದು

ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ ||೩||


ಪರಮಾಯಿಗಳ ಮತ ತರಿದು ಕೆಡಹುತ್ತ

ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ

ತರತಮ್ಯ ಸತ್ಯವೆನುತ ಪಂಚಭೇದೆನುತ

ಸಿರಿರಮಣಗೆ ನರಭೃತ್ಯನೆನ್ನುತ್ತ

ಪರಿ ಪರಿ ಬೋಧಿಸಿ ದುರುಳರ ಛೇಡಿಸಿ

ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ ||೪||


ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ

ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ

ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ

ಶ್ರೇಷ್ಠನೆ ಗೋಪಾಲಕೃಷ್ಣವಿಠಲ

ಇಷ್ಟು ತಿಳಿಸುತ ಅಷ್ಟದಳದಲಿ

ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ ||೫||

***


Madhvamuniye enna uddharisinna ||pa||


Sadguruve ninna padmapadagalige

biddu mugive kara sadvaishnava mani ||a.pa||


Varakalpa kalpadali hariya mechchisi

sirivaranali janisi vayuvendenisi

surarella moreyide hariyavatarisi

hariya sevege ni maruti enisi

sharadhi langhisi ungura sitege ittu

durulana pura suramukhanigarpiside ||1||


Chandravanshadali bandyo balashali

nandakandana lile anda padutali

banditu kalaha alli dvandva bhagadali

andu kauravarali nindyo dveshadali

indumukhige saugandhika ittu kuru

nandana vanshavanandu chediside ||2||


Durularellaru bandu kaliyugadi nindu

hariyu naranu ondu aruhalintendu

surarella balunondu kshirabdhige bandu

sirivara poreyendu moreyidalandu

hari ninagaruhalu dhareyallige bandu

sura bhu sreshtanudaradali janiside ||3||


Paramayigala mata taridu kedahutta

hari sarvottamenuta dhareyol sarutta

taratamya satyavenuta panchabhedenuta

siriramanage narabhrutyanennutta

pari pari bodhisi durulara chedisi

sarasijakshage balu sammatanenisi ||4||


Vaishnavagrani lile pelalalavalla

jishnusakhana lile nudisenage solla

kastapadutihenalla karunavekilla

sreshthane gopalakrishnavittala

istu tilisuta astadaladali

sreshthadi pujipa guttu torenage ||5||

***


ಮಧ್ವಮುನಿಯೆ ಎನ್ನ ಉದ್ಧರಿಸಿನ್ನ ಪ.


ಸದ್ಗುರುವೆ ನಿನ್ನ ಪದ್ಮಪಾದಗಳಿಗೆ

ಬಿದ್ದು ಮುಗಿವೆ ಕರ ಸದ್ವೈಷ್ಣವ ಮಣಿ ಅ.ಪ.


ವರಕಲ್ಪ ಕಲ್ಪದಲಿ ಹರಿಯ ಮೆಚ್ಚಿಸಿ

ಸಿರಿವರನಲಿ ಜನಿಸಿ ವಾಯುವೆಂದೆನಿಸಿ

ಸುರರೆಲ್ಲ ಮೊರೆಯಿಡೆ ಹರಿಯವತರಿಸಿ

ಹರಿಯ ಸೇವೆಗೆ ನೀ ಮಾರುತಿ ಎನಿಸಿ

ಶರಧಿ ಲಂಘಿಸಿ ಉಂಗುರ ಸೀತೆಗೆ ಇತ್ತು

ದುರುಳನ ಪುರ ಸುರಮುಖನಿಗರ್ಪಿಸಿದೆ 1

ಚಂದ್ರವಂಶದಲಿ ಬಂದ್ಯೊ ಬಲಶಾಲಿ

ನಂದಕಂದನ ಲೀಲೆ ಅಂದ ಪಾಡುತಲಿ

ಬಂದಿತು ಕಲಹ ಅಲ್ಲಿ ದ್ವಂದ್ವ ಭಾಗದಲಿ

ಅಂದು ಕೌರವರಲಿ ನಿಂದ್ಯೊ ದ್ವೇಷದಲಿ

ಇಂದುಮುಖಿಗೆ ಸೌಗಂಧಿಕ ಇತ್ತು ಕುರು

ನಂದನ ವಂಶವನಂದು ಛೇದಿಸಿದೆ 2

ದುರುಳರೆಲ್ಲರು ಬಂದು ಕಲಿಯುಗದಿ ನಿಂದು

ಹರಿಯು ನರನು ಒಂದು ಅರುಹಲಿಂತೆಂದು

ಸುರರೆಲ್ಲ ಬಲುನೊಂದು ಕ್ಷೀರಾಬ್ಧಿಗೆ ಬಂದು

ಸಿರಿವರ ಪೊರೆಯೆಂದು ಮೊರೆಯಿಡಲಂದು

ಹರಿ ನಿನಗರುಹಲು ಧರೆಯಲ್ಲಿಗೆ ಬಂದು

ಸುರ ಭೂ ಶ್ರೇಷ್ಠನುದರದಲಿ ಜನಿಸಿದೆ 3

ಪರಮಾಯಿಗಳ ಮತ ತರಿದು ಕೆಡಹುತ್ತ

ಹರಿ ಸರ್ವೋತ್ತಮೆನುತ ಧರೆಯೊಳ್ ಸಾರುತ್ತ

ತರತಮ್ಯ ಸತ್ಯವೆನುತ ಪಂಚಭೇದೆನುತ

ಸಿರಿರಮಣಗೆ ನರಭೃತ್ಯನೆನ್ನುತ್ತ

ಪರಿ ಪರಿ ಬೋಧಿüಸಿ ದುರುಳರ ಛೇಡಿಸಿ

ಸರಸಿಜಾಕ್ಷಗೆ ಬಲು ಸಮ್ಮತನೆನಿಸಿ 4

ವೈಷ್ಣವಾಗ್ರಣೀ ಲೀಲೆ ಪೇಳಲಳವಲ್ಲ

ಜಿಷ್ಣುಸಖನ ಲೀಲೆ ನುಡಿಸೆನಗೆ ಸೊಲ್ಲ

ಕಷ್ಟಪಡುತಿಹೆನಲ್ಲ ಕರುಣವೇಕಿಲ್ಲ

ಶ್ರೇಷ್ಠನೆ ಗೋಪಾಲಕೃಷ್ಣವಿಠಲ

ಇಷ್ಟು ತಿಳಿಸುತ ಅಷ್ಟದಳದಲಿ

ಶ್ರೇಷ್ಠದಿ ಪೂಜಿಪ ಗುಟ್ಟು ತೋರೆನಗೆ 5

****

 

No comments:

Post a Comment