Friday, 17 December 2021

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯದೊಡ್ಡದೋ purandara vittala NIMMA BHAAGYA DODDADO NAMMA BHAAGYA DODDADO





ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪಲ್ಲವಿ ||
ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ || ಅಪ ||

ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ || ೧ ||

ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಳುಸಿಮಾಲೆಗಿನ್ನು ಆರ ಅಂಜಿಕಿಲ್ಲವಯ್ಯ || ೨ ||

ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ || ೩ ||

ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಾಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ || ೪ ||

ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು || ೫ ||
***

pallavi

nimma bhAgya doDDado namma bhAgya doDDado

anupallavi

sammatinda nAvu nIvu sATi mADi nODuva banni

caraNam 1

hEma honnu haNagaLige hEraLa bhayagaLUNDu rAmanAma dravyakinnu yAra bhayavillavayya

caraNam 2

kaDaga kaNDa mAlegaLige kaLLara anjikeyiNTu aDavi tuLasi mAlEkinnu Ara anjikeyillavayya

caraNam 3

vyApAra udyOgakinnu vyAkuladda bhayavuNTu gOpLada vrttikinnu koDave yAradillavayya

caraNam 4

saraku bella tuppa dhAnya savedItemba cinteyuNTu hari nAmAmrtake innu yAva cinteyillavayya

caraNam 5

nimma bhAgya lakSmIdEvi namma bhAgya nArAyaNanu namma nimma bhAgyadoDeya purandara viTTalanu
****

[ವಿಜಯನಗರದ ಅರಸ ಕೃಷ್ಣದೇವರಾಯನು ಪುರಂದರದಾಸರ ವೈರಾಗ್ಯವನ್ನು
ಪರೀಕ್ಷಿಸಬೇಕೆಂದು ಮನಸ್ಸು ಮಾಡಿ, ಅವರೊಂದಿಗೆ ಮಾತಾಡುತ್ತಿರುವಾಗ ಈ ಪದ ಮೈದಳೆಯಿತೆಂದು ಪ್ರತೀತಿ]
ಸಮ್ಮತಿಂದ - ಪರಸ್ಪರ ಒಡಂಬಡಿಕೆಯಿಂದ.
ಹೇಮ ಹೊನ್ನು - ಈ ಚರಣಕ್ಕೆ ಪಾಠಾಂತರವಿದೆ
"ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು
ಪನ್ನಗಶಯನನ ನಾಮಕೆ ಯಾರಂಜಿಕೆ ಇಲ್ಲವೋ"
ವ್ಯಾಕುಲ - ಲಾಭನಷ್ಟಗಳ ಎಣಿಕೆ
[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
*****

ರಾಗ ಪಂತುವರಾಳಿ/ತಾಳ ಆದಿ (raga, taala may differ in audio)

Nimma bagya doddado namma bagya doddado||pa||

Sammatinda navu nivu sati madi noduva||a.pa||

Hema honnu hanagalige herala bayagaluntu
Ramanama dravyakinnu yara Bayavillavayya||1||

Kadaga kanthamalegalige kallara anjikeyuntu
Adavi tulasimaleginnu ara anjikillavayya||2||

Vyapara udyogakinnu vyakulada bayavuntu
Gopalada vruttiginnu godave yaradillavayya||3||

Saraku bella tuppa dhanya saveditemba cinteyuntu
Harinamamrutake innu yava cinteyillavayya||4||

Nimma bagya lakshmidevi namma bagya narayananu
Namma nimma bagyadodeya purandaravithalanu||5||
***

ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ಸುಮ್ಮನೆ ಇಬ್ಬರೂ ಕೂಡಿ ಸಾಟಿ ಮಾಡಿ ನೋಡುವ ||ಪ||

ಸರಕು ಬೆಲ್ಲ ತುಪ್ಪ ಧಾನ್ಯ, ಸವೆದೀತೆಂಬ ಚಿಂತೆಯುಂಟು

ಹರಿನಮಾಮೃತಸಾರಕ್ಕೆ ಆರ ಅಂಜಿಕೆ ಇಲ್ಲವಯ್ಯ ||

ವ್ಯಾಪಾರ ಉದ್ಯೋಗಕಿನ್ನು ಅಪಾರ ಅಂಜಿಕೆಯುಂಟು

ಗೋಪಾಳ ಬೇಡುವುದಕ್ಕೆ ಯಾರ ಅಂಜಿಕೆ ಇಲ್ಲವಯ್ಯ||

ಕಡಗ ಕಂಠಮಾಲೆಗಿನ್ನು ತುಡುಗರ ಅಂಜಿಕೆಯುಂಟು

ಅಡವೀ ತುಳಸಿಮಾಲೆಗಿನ್ನು ಯಾರ ಅಂಜಿಕೆ ಇಲ್ಲವಯ್ಯ||

ಹೆಣ್ಣು ಹೊನ್ನು ಮಣ್ಣುಗಳಿಗೆ ಕಣ್ಣಿಡುವರಂಜಿಕೆಯುಂಟು

ಪನ್ನಗಶಯನನ ನಾಮಕಾರ ಅಂಜಿಕೆ ಇಲ್ಲವಯ್ಯ ||

ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ

ನಮ್ಮ ಪುರಂದರವಿಠಲನ ಅನುದಿನ ಸ್ಮರಿಸುವುದಯ್ಯ ||

ವಿಜಯನಗರದ ಅರಸ ಶ್ರೀಕೃಷ್ಣದೇವರಾಯನು ಪುರಂದರದಾಸರನ್ನು ಭೇಟಿಯಾದಾಗ ಪುರಂದರದಾಸರು ಇದನ್ನು ರಚಿಸಿದರಂತೆ 

**********


ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ
ಸಮ್ಮತಿಯಲಿ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ ||ಪ||

ಸರಕು ಬೆಲ್ಲ ತುಪ್ಪ ಧಾನ್ಯ, ಸವೆಯಿತೆಂಬ ಚಿಂತೆಯುಂಟು
ಹರಿಯ ನಾಮಾಮೃತಕೆ ಇನ್ನು ಯಾವ ಚಿಂತೆ ಇಲ್ಲವಯ್ಯ ||

ಹೇಮ ಹೊನ್ನು ಹಣಗಳಿಗೆ ಹೇರಳದ ಭಯಗಳುಂಟು
ರಾಮನಾಮ-ದ್ರವ್ಯಕಿನ್ನು ಯಾವ ಭಯವು ಇಲ್ಲವಯ್ಯ ||

ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ನಮ್ಮ ಪುರಂದರವಿಠ್ಠಲ ||
**********


ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯದೊಡ್ಡದೋ ||ಪ||
ಸಮ್ಮತಿಂದ ನಾವು ನೀವು ಸಾಟಿ ಮಾಡಿನೋಡುವ ಬನ್ನಿ ||ಅ.ಪ||

ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕ್ಕಿನ್ನು ಯಾರ ಭಯವಿಲ್ಲವಯ್ಯ ||1||

ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಳಸಿಮಾಲೆಗಿನ್ನು ಆರಅಂಜಿಕೆ ಇಲ್ಲವಯ್ಯ ||2|| 

ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆಯಾರದಿಲ್ಲವಯ್ಯ ||3||

ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಮೃತಕೆ ಇನ್ನು ಯಾವಚಿಂತೆಯಿಲ್ಲವಯ್ಯ ||4||

ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರ ವಿಠಲನು ||5||
***********


ನಿಮ್ಮ ಭಾಗ್ಯ ದೊಡ್ಡದೋ, ನಮ್ಮ ಭಾಗ್ಯ ದೊಡ್ಡದೊ?
ನಿಮ್ಮ ಭಾಗ್ಯ ಲಕ್ಷ್ಮೀ-ದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ಪುರಂದರವಿಠಲನ ಅನುದಿನ ಸ್ಮರಿಸುವುದಯ್ಯ ||
ಹರಿದಾಸರುಗಳಿಗೆ ಹರಿಯೇ ಸಕಲ ಸರ್ವಸ್ವ. ಪ್ರಾಪಂಚಿಕವಾದ ಯಾವುದೇ ಆಸೆ ಆಕಾಂಕ್ಷೆಗಳಿಲ್ಲದ ಪಾರಮಾರ್ಥಿಕಕ್ಕೆ ಮಾತ್ರ ಅವರ ಬದುಕು ಸೀಮಿತ. ಭಗವನ್ನಾಮ ಸ್ಮರಣೆಯೇ ಅವರ ಉಸಿರು. ಗುಡಿ ಗುಂಡಾರಗಳೇ ಅವರ ಅರಮನೆ.ತೀರ್ಥ ಪ್ರಸಾದಗಳೇ ಮೃಷ್ಟಾನ್ನ ಭೋಜನ.ಹಾಗಾಗಿ ಅವರಿಗೆ ಕಳ್ಳ ಕಾಕರ ಭಯವಿಲ್ಲ.ಇದನ್ನು ಈ ಕೀರ್ತನೆಯಲ್ಲಿ ದಾಸರು ಸೊಗಸಾಗಿ ಹೇಳಿರುವರು.
ನವಕೋಟಿ ನಾರಾಯಣರಾಗಿದ್ದ ಶ್ರೀನಿವಾಸ ನಾಯಕರು ದಾಸದೀಕ್ಷೆ ಪಡೆದು ಪುರಂದರದಾಸರಾದ ಮೇಲೆ ಅವರ ಜೀವನ ಹೇಗಿರಬಹುದೆಂದು ನೋಡುವ ಬಯಕೆಯಿಂದ ವಿಜಯನಗರ ಸಾಮ್ರಾಜ್ಯದ ಅರಸರಾಗಿದ್ದ ಶ್ರೀಕೃಷ್ಣ ದೇವರಾಯ ದಾಸರಲ್ಲಿಗೆ ಬರುವನು.ಆಗ ಅರಸನು ದಾಸರಿಗೆ, ನಿಮ್ಮಲ್ಲಿದ್ದ ಸಕಲ ಸಿರಿ ಸಂಪತ್ತನ್ನು ದಾನಮಾಡಿದಿರಿ,
ಮುಂದೆ ನಿಮ್ಮ ಜೀವನ ನಿರ್ವಹಣೆ ಹೇಗೆ? ಭಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದಾಗ
ದಾಸರು ಈ ಕೃತಿಯ ಮೂಲಕ ಉತ್ತರಿಸಿದ್ದಾರೆ. ನಮ್ಮಿಬ್ಬರಲ್ಲಿ ಯಾರ ಭಾಗ್ಯ ದೊಡ್ಡದು ಎಂಬುದನ್ನು ತುಲನೆ ಮಾಡಿ ನೋಡೋಣ ಬನ್ನಿ ಎಂದು ಶ್ರೀಕೃಷ್ಣ ದೇವರಾಯನನ್ನು ಆಹ್ವಾನಿಸುವರು.
ನಿಮಗಾದರೆ ದವಸ ಧಾನ್ಯಗಳು,ತುಪ್ಪ ಇತ್ಯಾದಿಗಳು ಖಾಲಿಯಾಗುವುದು,
ಮತ್ತೆ ಅದರ ಸಂಗ್ರಹಣೆ ಬಗ್ಗೆ ಚಿಂತೆಯಿರುವುದು. ಆದರೆ ಹರಿನಾಮ ಸ್ಮರಣೆಯಲ್ಲೇ ಜೀವನ ಕಳೆಯುವ ಹಾಗೂ ಸವಿದಷ್ಟೂ ಸವೆಯದ ಹರಿನಾಮಾಮೃತ ಸವಿಯುವ ನಮಗೆ ಯಾವ ಚಿಂತೆಯೂ ಇಲ್ಲವೆನ್ನುವರು.
ವ್ಯಾಪಾರ ವಹಿವಾಟು ಗಳಿಗೆ ನಷ್ಟದ ಅಂಜಿಕೆಯಿರುವುದು.
ಮಧುಕರ ವೃತ್ತಿಯಿಂದ ಜೀವನ ಮಾಡುವ ನಮಗೆ ಇನ್ಯಾವ ಚಿಂತೆ.?
ಕೈಗಳಿಗೆ ಚಿನ್ನದ ಕಡಗ,ಕುತ್ತಿಗೆಗೆ ಚಿನ್ನ ವಜ್ರ ವೈಡೂರ್ಯಗಳ ಸರಮಾಲೆಗಳನ್ನು ಧರಿಸುವ ನಿಮಗೆ ಕಳ್ಳ ಕಾಕರ ಹೆದರಿಕೆ...ತುಳಸೀಮಾಲೆ ಭರಿಸುವ ನಮಗೆ ಯಾರ ಯಾವ ಅಂಜಿಕೆಯೂ ಇಲ್ಲ.
ಹೆಣ್ಣು ಹೊನ್ನು ಮಣ್ಣುಗಳ ಹೊಂದಿರುವವರಿಗೆ ಅವುಗಳ ಸುರಕ್ಷೆಯ ಚಿಂತೆ.ಭಗವಂತನ ನಾಮಸ್ಮರಣೆಗೆ ಯಾವ ಅಂಜಿಕೆ ಚಿಂತೆಯೂ ಇಲ್ಲ.
ನಿಮ್ಮಭಾಗ್ಯ, ಬಲ ಹಾಗೂ ಒಡತಿ ಲಕ್ಷ್ಮೀದೇವಿ, ನಮ್ಮ ಭಾಗ್ಯ ಬಲ,ಶಕ್ತಿ ಎಲ್ಲವೂ ಲಕ್ಷ್ಮೀದೇವಿಗೇ ಒಡೆಯನಾದ ಶ್ರೀಮನ್ನಾರಾಯಣನು. ನಿಮ್ಮ ಅರಸಿಯ ಅರಸು ನಮ್ಮರಸ.ಅನುದಿನವೂ ಅನುಕ್ಷಣವೂ ಪುರಂದರವಿಠಲನನ್ನು ಸ್ಮರಿಸಿ ಭಜಿಪುದೆ ನಮ್ಮ ಸೌಭಾಗ್ಯ ಎಂದು ದಾಸರು ಕೃಷ್ಣದೇವರಾಯನಿಗೆ ಹೇಳುವರು.
ಈ ಕೀರ್ತನೆಯಲ್ಲಿ ದಾಸರು ಲೌಕಿಕದ ನಶ್ವರತೆಯನ್ನೂ ಪಾರಮಾರ್ಥಿಕದ ಮಹತ್ವವನ್ನೂ ಸೊಗಸಾಗಿ ತಿಳಿಸಿದ್ದಾರೆ.
ಲೌಕಿಕದಿಂದ ಚಿಂತೆ,ಆಂಜಿಕೆ ಉಂಟಾದರೆ ಪರಮಾತ್ಮನ ಪಾದಸ್ಮರಣೆಯಿಂದ ನಿಶ್ಚಿಂತೆ ನೆಮ್ಮದಿ ದೊರೆವುದು ಎಂಬುದು ಕೀರ್ತನೆಯ ಸಂದೇಶ.

 ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
***********

No comments:

Post a Comment