Audio by Sri. Madhava Rao
Raaga Pahaadi
ರಾಗ ಸೌರಾಷ್ಟ್ರ ಛಾಪು ತಾಳ
ನಿಲ್ಲೊ ನಿಲ್ಲೊ ಮೋಹನಾಂಗ
ನಿಂತೆವಲ್ಲವೊ ನಿನ್ನ ಸಂಗ
ಒಲ್ಲೆವೊ ನಾ ನಿನ್ನ ಅಂಗ
ಬಣ್ಣಗಾರ ಶ್ರೀರಂಗ ||
ಚರಣಸೇವೆಗೆ ದಯಮಾಡೊ
ಚೆನ್ನಾಗಿ ಮಾತನಾಡೊ
ಕರುಣಕಟಾಕ್ಷದಿ ನೋಡೊ
ಕಸ್ತೂರಿರಂಗ ನೀ ಕೂಡೊ ||
ಗಂಧಕಸ್ತೂರಿ ಗೀರುನಾಮ
ಘಮಘಮಿಸುವ ರಂಗಧಾಮ
ಚಂದ್ರಪೂರ್ಣವದನ ಕಾಮ
ಚೆಲ್ಲಾಡುವ ನಿಸ್ಸೀಮ ||
ಮಧುವೆಂಬೊ ಮಲ್ಲನ ಗೆದ್ದು
ಮಾವ ಕಂಸನ ಅಳಿದೆಂದು
ಚತುರೆ ಗೋಪಿಯರ ಕೂಡೆಂದು
ಸಂಕರ್ಷಣ ನೀನೆಂದು ||
ಮಾನಿನಿಯರೆಲ್ಲರು ಕೂಡಿ
ಮಾನಬಿಟ್ಟೇವು ನಿನ್ನನು ಬೇಡಿ
ಮನೆಯ ಮರೆತು ಬಂದೇವು ಓಡಿ
ಮನ್ನಿಸೆಮ್ಮನು ದಯಮಾಡಿ ||
ನಿನ್ನನ್ನೆ ನಂಬಿದ್ದೆವಲ್ಲ
ನೀನಲ್ಲದೆ ಅನ್ಯತ್ರವಿಲ್ಲ
ಮನ್ನಿಸೊ ಪ್ರಾಣವತ್ಸಲ್ಲ
ಶ್ರೀ ಪುರಂದರವಿಠಲ್ಲ ||
***
pallavi
nillo nillo mOhanAnga nintevallalo ninna sanga
anupallavi
ollevo nA ninna anga baNNagAra shrIranga
caraNam 1
caraNa sEveke daya mADo cennAgi mAtanADo karuNa kaTAkSadi nODo kastUri ranga nI kUDo
caraNam 2
gandha kastUri girunAma ghamakhamisuva rangadhAma candra pUrNa vadana kAma cellADuva nissIma
caraNam 3
madhuvembo mallana geddu mAva kamsana aLidendu cature gOpiyara kUDendu sankarSaNa nInendu
caraNam 4
mAniniyarellaru kUDi mAna biTTEvu ninnanu bEDi maneya maredu bandEvu Odi mannisemmanu daya mADi
caraNam 5
ninnanne nambiddevalla nInallade anyatravilla manniso prANa vatsalla shrI purandara viTTalla
***
No comments:
Post a Comment