Friday, 17 December 2021

ಕರುಣಿಸೋ ರಂಗಾ ಕರುಣಿಸೋ purandara vittala KARUNISO RANGA KARUNISO

ರಾಗ ಮೋಹನ    ರೂಪಕ ತಾಳ 







y
ಕರುಣಿಸೋ ರಂಗ ಕರುಣಿಸೋ 
ಕೃಷ್ಣ ಕರುಣಿಸೋ ರಂಗ ಕರುಣಿಸೋ| 
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| 

ರುಕುಮಾಂಗದನಂತೆ ವ್ರತವ ನಾನರಿಯೆ | 
ಶುಕಮುನಿಯಂತೆ ಸ್ತುತಿಸಲು ಅರಿಯೆ | 
ಬಕವೈರಿಯಂತೆ ಧ್ಯಾನವ ಮಾಡಲರಿಯೇ| 
ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧||

ಗರುಡನಂದದಿ ಪೊತ್ತು ತಿರುಗಲು ಅರಿಯೆ | 
ಕರಿಯಲು ಅರಿಯೆ ಕರಿರಾಜ ನಂತೆ | 
ವರಕಪಿಯಂತೆ ದಾಸ್ಯವ ಮಾಡಲರಿಯೇ | 
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ ||೨||


ಬಲಿಯಂತೆ ದಾನವ ಕೊಡಲು ಅರಿಯೆ | 
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | 
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | 
ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ ||೩||
***

dhanyasi – ata (raga tala may differ in audio)

Karuniso Ranga Karuniso Krishna
Karuniso Ranga Karuniso
Hagalu Irulu Ninna Samrane Mareyadanthe || Karuniso ||

Rukmangadanante Vrathava Naanariye
Shuka Muniyanthe Struthisalu Ariye
Bakavairiyenthe Dhyanava Maadalariye
Devakiyanthe Muddisaloo Ariye Krishna || Karuniso ||

Garudanandadi Pottu Thirugalu Ariye
Kariyalu Ariye Kari Raajanante
Vara Kapiyanthe Daasyava Maadalariye
Siriyante Neredu Mohisalu Ariye Krishna || Karuniso ||

Baliyante Daanava Kodalu Ariye
Bhakthi Cheluvanariye Prahalladanante
Varisalu Ariye Arjunanante Sakhanaagi
Salaho Devara Deva Salaho Devara Deva
Purandara Vittala Sri Purandara Vittala || Karuniso ||
***


P: karuniSO rangA karuNisO

 

A: iruLu hagalu ninna smaraNe odaguvante

 

C1: rukumAngadanante vratava nAnariye Sukamuniyante stutisalariye

      bakavairiyante dhyAnava mADalariye dEvakiyante etti muddisalariye krishA

 

C2:  garuDanante pottu tirugalariyeno kareyalariye karirAjanate

      Varakapiyante sEveya mAdalariyeno siriyante neredu mOhisalariyeno KrishnA

 

C3: baliyante dAnava koDalariyeno chalavanariye prahlAdanante

     olisalAre arjunanante sakhanAgi salahO dEvaradEva purandaravitala
***
 

Meaning:

P: Be kind O ranga, be kind (bless me)

 

A: so that I remember you day and night

 

C1: I don’t know to do penance like rukumAngada, nor can I praise you like sage Shuka

      I cannot concentrate like a crane ( reference to cranes remaining still to catch fish), nor can I hug you like dEvaki

 

C2:  I cannot go round with you on my back like garuda does, nor can I call you like the elephant king.

      I cannot serve you {dedicatedly) like the celebrated monkey, nor can I love you like your wife siri.

 

C3:  I cannot give gifts like the king Bali, nor I have unbridled confidence (in you) like prahlada

      I cannot impress you by becoming a friend (of yours) like arjuna, O purandaravithala you must protect me.
***

ಕರುಣಿಸೋ ರಂಗಾ ಕರುಣಿಸೋ | 
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ||

 ರುಕುಮಾಂಗದನಂತೆ ವ್ರತವ ನಾನರಿಯೆನು| 
ಶುಕ ಮುನಿಯಂತೆ ಸ್ತುತಿಸಲು ಅರಿಯೆ|
ಬಕವೈರಿಯಂತೆ ಧ್ಯಾನವ ಮಾಡಲರಿಯೆ|
ದೇವಕಿಯಂತೆ ಮುದ್ದಿಸಲರಿಯೆನು|| 

 ಗರುಡನಂದದಿ ಪೊತ್ತು ತಿರುಗಲು ಅರಿಯೆ| 
ಕರೆಯಲು ಅರಿಯೆ ಕರಿರಾಜನಂತೆ|
ವರ ಕಪಿಯಂತೆ ದಾಸ್ಯವ ಮಾಡಲರಿಯೆ| 
ಸಿರಿಯಂತೆ ನೆರೆದು ಮೋಹಿಸಲರಿಯೆ 

 ಬಲಿಯಂತೆ ದಾನವ ಕೊಡಲು ಅರಿಯೆನು |
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ|
ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ|
ಸಲಹೋ ದೇವರ ದೇವ ಪುರಂದರವಿಠ್ಠಲ||
**********

ಪುರಂದರದಾಸರು

ಕರುಣಿಸೋ ರಂಗಾ ಕರುಣಿಸೋ ಪ

ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪ

ರುಕುಮಾಂಗದನಂತೆ ವ್ರತವನಾನರಿಯೆನುಶುಕಮುನಿಯಂತೆ ಸ್ತುತಿಸಲರಿಯೆ ||
ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನು ರಂಗಾ 1

ಗರುಡನಂತೆ ಪೊತ್ತು ತಿರುಗಲರಿಯೆ ನಾನುಕರಿರಾಜನಂತೆ ಕರೆಯಲರಿಯೆ ||
ಮರಕಪಿಯಂತೆ ಸೇವೆಯ ಮಾಡಲರಿಯೆನುಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2

ಬಲಿಯಂತೆ ದಾನವ ಕೊಡಲರಿಯೆನು ಭಕ್ತಿಛಲವನರಿಯೆ ಪ್ರಹ್ಲಾದನಂತೆ ||
ಒಲಿಸಲರಿಯೆ ಅರ್ಜುನನಂತೆ 
ಸಖನಾಗಿಸಲಹೋ ದೇವರದೇವಪುರಂದರವಿಠಲ3
***

1 comment:

  1. Namaskar... Devara anugraha tamma mele sada erali.

    ReplyDelete