ರಾಗ ಅಮೃತವರ್ಷಿಣಿ ತಾಳ ಆದಿ
ನಿಲ್ಲಬೇಕಯ್ಯ ಕೃಷ್ಣಯ್ಯ ನೀ ||ಪ||
ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ-
ವಲ್ಲಭ ಎನ್ನ ಹೃದಯದಲ್ಲಿ ಸಂತತ ನೀ ||ಅ.ಪ||
ಸುಪ್ಪಾಣಿ ಮುತ್ತಿಟ್ಟು ನೋಡುವೆ, ಸದಾ
ಚಪ್ಪಾಳೆ ತಟ್ಟಿ ನಾ ಪಾಡುವೆ
ಅಪ್ಪಾ ಶ್ರೀ ಕೃಷ್ಣನೆ ಎತ್ತಿ ಮುದ್ದಿಸಿಕೊಂಬೆ
ಸರ್ಪ ಶಯನ ಕೃಪೆ ಮಾಡೆಂದು ಬೇಡುವೆ ||
ಚಂದದ ಹಾಸಿಗೆ ಹಾಸುವೆ , ಪುನುಗು
ಗಂಧ ಕಸ್ತೂರಿಯ ಪೂಸುವೆ
ಅಂದದಿ ಮುತ್ತಿನ ಹಾರ ಹಾಕುವೆ, ಆ-
ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ||
ನೀಲದ ಕಿರೀಟ ನಿನಗಿಡುವೆ, ಬಲು
ಬಾಲಲೀಲೆಗಳನು ಪಾಡುವೆ
ಮಾಲೋಲ ಪುರಂದರ ವಿಠಲನರಾಯನೆ
ನಿಲು ಎನ್ನ ಮನದಲ್ಲಿ ಒಂದೇ ಗಳಿಗೆ||
***
ರಾಗ ಮೋಹನ. ಅಟ ತಾಳ (raga, taala may differ in audio)
rendered by
shrI Ananda rAo, srIrangam
to aid learning the dAsara pada for beginners
Lyrics:
rAga: amRtavarShini
tALa: Adi
nillabEkayya kRShNayya nI |
nillabEkayya mallamardana siri
vallabha ena hRdayadalli santata nI ||
suppANi muttiTTu nODuve sadA
cappALe taTTi nA pADuve |
appA shrI kRShNane etti muddisi kombe
sarpa shayana kRpe mADendu bEDuve || nillabEkayya ... ||
candada hAsige hAsuve punugu
gandha kastUriya pUsuve |
andadi muttina hAra hAkuve Anandadindali
ninna etti muddisi kombe || nillabEkayya ... ||
nIlada kirITa ninagiDuve balu
bAlalIlegaLanu pADuve |
mAlOla purandara viTThala rAyane nillu
enna manadalli ondE galige || nillabEkayya ... ||
***
pallavi
nilla bEkayya krSNayya nI
anupallavi
nilla bEkayya mallamardana siri vallabha ena hrdayadalli santata nI
caraNam 1
suppANi muttiTTu nODuve sadA cappALe taTTi nA pADuve
appA shrI krSNane etti muddisi kombe sarpa shayana krpe mADendu bEDuve
caraNam 2
candada hAsige hAsuve punugu kandha kastUriya pUsuve
andadi muttina hAra hAkuve Anandadindali ninna etti muddisi kombe
caraNam 3
nIlada kirITa ninagiDuve balu bAlalIlegaLanu pADuve
mAlOla purandara viTTalanarAyane nilu enna manadalli onde gaLige
***ನಿಲ್ಲಬೇಕಯ್ಯ ಕೃಷ್ಣಯ್ಯ ನಿಲ್ಲಬೇಕಯ್ಯ/ಪ//
ನಿಲ್ಲಬೇಕು ನೀ ಮಲ್ಲ ಮರ್ಧನ /
ಸಿರಿ ವಲ್ಲಭ ಎನ್ನ ಹೃದಯದಲಿ ಸತತ//ಅ.ಪ//
ಸುಪ್ಪಾಣಿ ಮುತ್ತಿಟ್ಟು ನೋಡುವೆ ಸದಾ/
ಚಪ್ಪಾಳೆ ತಟ್ಟಿ ನಾ ಪಾಡುವೆ //
ಅಪ್ಪ ಶ್ರೀ ಕೃಷ್ಣನೆ ಅಪ್ಪಿ ಮುದ್ದಾಡುವೆ/
ಸರ್ಪ ಶಯನ ಕೃಪೆ ಮಾಡೆಂದು ಬೇಡುವೆ//೧//
ಚ಼ಂದದಿ ಹಾಸಿಗೆ ಹಾಸುವೆ/ ಪುನುಗು /
ಗಂಧ ಕಸ್ತೂರಿ ನಾ ಪೂಸುವೆ /
ಅಂದದಿ ಮುತ್ತಿನ ಹಾರವನ್ಹಾಕುವೆ /ಚಂದದಿಂದಲಿ
ನಿನ್ನ ಎತ್ತಿ ಮುದ್ದಾಡುವೆ//೨//
ನೀಲದ ಕಿರೀಟ ಮಿನಗಿಡುವೆ / ಬಲು/
ಬಾಲಲೀಲೆಗಳ ನಾ ಪಾಡುವೆ /
ಮಾ ಲೋಲ ಪುರಂದರ ವಿಠಲರಾಯನೆ/
ನಿಲ್ಲು ಎನ್ನ ಮನದಲ್ಲಿ ಒಂದು ಕ್ಷಣ//೩//
*****
No comments:
Post a Comment