Audio by Mrs. Nandini Sripad
ಶ್ರೀ ವಾದಿರಾಜ ಗುರುಸಾರ್ವಭೌಮ ವಿರಚಿತ
ಶ್ರೀರಾಮ ಮಹಿಮಾ ಸುಳಾದಿ
(ಐತಿಹಾಸಿಕ ರಾಮಾಯಣ ಸಂಗ್ರಹ ಕಥಾ)
ರಾಗ ಕಲ್ಯಾಣಿ
ಧ್ರುವತಾಳ
ದಶರಥ ನಂದನ ಋಷಿಯಾಗ ಸಂರಕ್ಷಣ
ಶಶಿಮುಖಿ ಶಾಪ ವಿಮೋಚನ ಪಶುಪತಿ ಧನುಭಂಜನ
ಬಿಸಜನೇತ್ರ ಜಾನಕಿ ಕುಶಲ ಮನೋರಂಜನ ಪ -
ರಶುರಾಮ ಗರ್ವನಾಶ ಅಸುರ ಸಂಹಾರಕ
ದಶರಥಾಜ್ಞಾಧಾರಕ ದಶ ಶಿರೋಭಗಿನಿ ಶಿಕ್ಷಕ
ರಸಿಕ ಸುಗ್ರೀವ ಪೋಷಣ ರೌದ್ರವತಿ ನಿಗ್ರಹಣ
ಅಸಮ ಸೇತು ಬಂಧನ ಅರಿಮದ ಖಂಡನ
ಶಶಿನಿಕರ ಲಾವಣ್ಯ ಶ್ರೀಮುದ್ದು ಹಯವದನ ॥ 1 ॥
ಮಟ್ಟತಾಳ
ಲಂಕಾನಗರ ಪರಿಸ್ತರಣ ವಾಲಸ್ಯಗೈಯದೆ ಮಾಡಿದ ಹನುಮ
ಹುಂಕರಿಪ ಕುಂಭಕರ್ನನ ಹೊಡೆದು ಕೆಡುಹಿದಂಥ ಜಾಣ ನಿ -
ಶ್ಶಂಕ ಮುದ್ದು ಹಯವದನ ಶರಣು ಹೊಕ್ಕೆ ಕಾಯೋ ಎನ್ನ ॥ 2 ॥
ತ್ರಿವಿಡಿತಾಳ
ದಶಶಿರ ಛೇದನ ಧರಣಿ ಭಯಹರಣ
ಕುಶಲಗಂಧಿನಿ ಗ್ರಹಣ ಕೋವಿದ ಭರತ ಪ್ರಾಣ
ನಿಶಿಚರ ವಿಭೀಷಣಾರಿಷ್ಟ ಪರಿಹರಣ
ಶಶಿಮಂಡಲ ಭೂಷಣ ಶ್ರೀಮುದ್ದು ಹಯವದನ ॥ 3 ॥
ಅಟ್ಟತಾಳ
ಅಯೋಧ್ಯಪುರಿಗಾಗತ ಅನುಜ ಮುನಿಸ್ತೋಮ ಗೀತ
ಪ್ರೀಯ ಪಟ್ಟಾಭಿಷೇಕಿತ ಪತಿ ಸೀತಾ ಸಮೇತ
ಶ್ರೀಪವನಸುತಪಾಲ ಶ್ರೀವೇದಗೀತ ಲೋಲ
ಭಯಹರ ಹಯವದನ ಭಕ್ತ ಜನಮೋಹನ ॥ 4 ॥
ಆದಿತಾಳ
ಭೂದೇವಿ ಮನೋಹರ ಭೂಷಿತ ಪ್ರೀಯಕರ
ಸಾಧು ಬೋಧಾನಂದ ಸಜ್ಜನಾನಂದ
ವಾದಿ ರಾಜಗೊಲಿದ ಸೋಮನಿಸ್ಸೀಮ
ಮೋದಿತ ಬುಧ ಜನ ಮುದ್ದು ಹಯವದನ ॥ 5 ॥
ಜತೆ
ಮುದ್ದು ಹಯವದನ ದೇವ ಮಾಮವ ಸರ್ವಾ -
ರಾಧ್ಯ ಶ್ರೀರಾಘವ ರಾಜಾಧಿರಾಜ ॥
***********
Audio by Mrs. Nandini Sripad
********
No comments:
Post a Comment