Saturday 25 December 2021

ನಂದೇನದೋ ಇಲ್ಲಿ ನಿಂದೇ ಇದೆಲ್ಲವೂ ankita venkata vittala NANDENADO ILLI NINDE IDELLAVOO







                                         
ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||
ನಂದನಂದನ ಗೋವಿಂದ ಹರಿಕೃಷ್ಣ ||ಅಪ||

ಜನನ ಮರಣ ನಿಂದೇ ಜನ್ಮಸಾಧನ ನಿಂದೇ 
ಅನುಕೂಲದರವು ನಿಂದೇ 
ತನುಮನವೂ ನಿಂದೇ ಕಾಯ ದೊರೆವುದೂ ನಿಂದೇ 
ಚಿನುಮಯರೂಪನೇ ಅನುಮಾನವ್ಯಾತಕಯ್ಯಾ ||೧||

ಕಾಯಕಷ್ಟವು ನಿಂದೇ ದೇಹದ ಬಲ ನಿಂದೇ 
ನ್ಯಾಯ ಅನ್ಯಾಯವೂ ನಿಂದೇ 
ಬಾಯಿಮಾತು ನಿಂದೇ ಬರುವ ಭಾಗ್ಯವು ನಿಂದೇ 
ಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨||

ಯಾತ್ರೆ ತೀರ್ಥವು ನಿಂದೇ ಕ್ಷೇತ್ರದ ಫಲ ನಿಂದೇ 
ಸತ್ಪಾತ್ರ ದಾನ ನೇಮ ನಿಂದೇ 
ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠ್ಠಲ 
ಸ್ತೋತ್ರ ಮಾಳ್ಪುದು ವಿಚಿತ್ರ ನಿನ್ನದಯ್ಯಾ ||೩||
***

naMdEnadO svaami niMdE idellavU ||pa||
naMdanaMdana gOviMda harikRuShNa ||apa||

janana maraNa niMdE janmasaadhana niMdE 
anukUladaravu niMdE 
tanumanavU niMdE kaaya dorevudU niMdE 
cinumayarUpanE anumaanavyaatakayyaa ||1||

kaayakaShTavu niMdE dEhada bala niMdE 
nyaaya anyaayavU niMdE 
baayimaatu niMdE baruva bhaagyavu niMdE 
kaayaja pita ninna maayaa tiLiyadayyaa ||2||

yaatre tIrthavu niMdE kShEtrada Pala niMdE 
satpaatra daana nEma niMdE 
dhaatriyoL paripUrNa kShEtra veMkaTaviThThala 
stOtra maaLpudu vicitra ninnadayyaa ||3||
***


just scroll down for other devaranama 

No comments:

Post a Comment