Saturday, 14 December 2019

ಕಂಡೆ ಫಂಡರಿರಾಯನ ಸಿರಿಮನ ankita jagannatha vittala

ಜಗನ್ನಾಥದಾಸರು

ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ

ಚಂಡವಿಕ್ರಮ ಕರದಂಡ ಮುನಿಪನೊಲಿ
ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ.

ಮಣಿಮಯ ಮಕುಟ ಮಧುಪನವಿರಪ್ಯರೇ
ಪಣೆಯೊಳಿಟ್ಟ ಕಸ್ತೂರಿ ತಿ¯ಕಾ
ವನÀರುಹ ಉಪಮ ಲೋಚನಯುಗ ಚಂಪಕ
ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ
ಮೊಗದ ಮಂದಹಾಸವ 1

ಕುಂದ ಕೋರಕ ದಶನಾವಳಿಯ ಬಿಂಬಾ
ಅಧರ ಕಳೆಯ
ಕಂಧರ ತ್ರಿವಳಿ ಪುರಂದರ
ಇಭಕರ ಪೋಲುವ ಭುಜಯುಗ ವಿಶಾಲವಾ
ಕರತಳರಸಾಲವ ನಖರ ಮಲ್ಲಿಕಾಸವ 2

ಅತಿವಿಸ್ತøತ ವಕ್ಷಸ್ಥಳವಾ ಸಿರಿ
ಸತಿ ಸದನಾರ್ಕನಂದದಿ ಪೊಳೆವಾ
ಕೌಸ್ತುಭ ದೀಧಿತಿ ವಿಲಸಿತ
ವೈಜಯಂತಿಯ ಉದರ ರೋಮ ಪಂಕ್ತಿಯಾ
ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ 3

ಮುಂಬಿಸಿಲಿನಂತೆ ಕನಕ ಚೈಲಾ ಸುನಿ
ತಂಬದಿ ಪೊಳೆವ ಗೋಲಿಯ ಚೀಲಾ
ಕುಂಬು ಕೋಕನದ ವಿಡಂಬ ಮೇಖಲ ಕದಂಬವ
ಊರು ಕದಳೀ ಜಾನುಗಳಿಂದು ಬಿಂಬನಾ
ಆಚರಿಪ ವಿಡಂಬನಾ 4

ಮಾತಂಗಕರವ ಜಂಘೆಗಳ ಗುಲ್ಫ
ಜಾತಿಮಣಿಕಾಂಗುಲಿ ಸಂಘಗಳ
ಜ್ಯೋತಿ ಬೆಳಗೆ ಜಗನ್ನಾಥ ವಿಠಲ
ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ
ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ 5
*********

No comments:

Post a Comment