Saturday, 14 December 2019

ದಾಸರಾಯ ಎನ್ನ ಬೆಂಬಿಡದಲೆ ankita jagannatha vittala

ಜಗನ್ನಾಥದಾಸರು
ದಾಸರಾಯಾ ಎನ್ನ |
ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ

ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು
ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ |
ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ |
ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ1

ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ |
ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ |
ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ 2

ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ
ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ |
ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ
ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | 3

ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ |
ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ |
ಪರಿಯಂತ | ದಾಸರಾಯಾ | ಪರಿ
ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ 4

ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ
ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ |
ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು
ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | 5

ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ
ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ |
ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ
ಪಂಕವ ದಾಟ ಪರೇಶನನೈದಿದೆ | ದಾಸರಾಯಾ 6

ಪರಿಯಂತ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ |
ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ
ಅನುಭವೋಪಾಸನೆ ಏನು ತಿಳಿಯದು ದಾಸರಾಯಾ 7

ಕಮಲ ಧ್ಯಾನ ದಾಸರಾಯಾ |
ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ
ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ |
ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ 8

ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ |
ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ |
ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ
ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ 9
*********

No comments:

Post a Comment