Wednesday, 11 November 2020

ಹರಿಕಥಾಮೃತಸಾರ ಸಂಧಿ 05 ankita jagannatha vittala ವಿಭೂತಿ ಸಂಧಿ HARIKATHAMRUTASARA SANDHI 5 VIBHUTI SANDHI


Audio by Mrs. Nandini Sripad


ರಚನೆ : ಶ್ರೀ ಜಗನ್ನಾಥ ದಾಸರು 



SANDHI 5 VIBHUTI SANDHI

" ಶ್ರೀತರುಣಿ ವಲ್ಲಭನ ಪರಮ ವಿಭೂತಿರೂಪವ  " ,
ಶ್ರೀ ಜಗನ್ನಾಥದಾಸಾರ್ಯ ವಿರಚಿತ ಹರಿಕಥಾಮೃತಸಾರ , 
 ವಿಭೂತಿ ಸಂಧಿ , ರಾಗ ಮೋಹನ

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||

ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ
ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ
ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ
ಬಗೆಗಳನು ಅರಿತು ಬುಧರಿಂದ||1||

ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು
ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು
ತತ್ತತ್ ಸ್ಥಾನದಲಿ ವೆಗ್ಗಳಿಸಿ
ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು||2||

ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ
ಗೃಹಸ್ಥ ವಟು ಯಜಮಾನ ಸ್ವಪರ ಜನ
ಪೃಥಿವಿ ಜಲ ಶಿಖಿ ಪವನ ತಾರಾಪಥ ನವಗ್ರಹ ಓಗ ಕರಣ ಭತಿಥಿ
ಸಿತ ಅಸಿತ ಪಕ್ಷ ಸಂಕ್ರಮಣ ಅವನ ಅಧಿಷ್ಠಾನ||3||

ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ
ಲಕ್ಷ್ಮೀ ಧವನು ಪ್ರತಿದಿನದಿ ಶಾಲಗ್ರಾಮದೊಳಗೆ ಇಪ್ಪ
ಐದು ಸಾವಿರ ಮೇಲೆ ಮೂವತ್ತು ಐದಧಿಕ ಐನೂರು ರೂಪದಿ
ಭೂಧರಗಳಾಭಿಮಾನಿ ದಿವಿಜರೊಳು ಇಪ್ಪನು ಅನವರತ||4||

ಶ್ರೀರಮಣ ಪ್ರತಿಮೆಗಳೊಳಗೆ ಹದಿಮೂರಧಿಕವಾಗಿಪ್ಪ ಮೇಲೆ
ಐನೂರು ರೂಪವ ಧರಿಸಿ ಇಪ್ಪನು ಆಹಿತ ಅಚಲದಿ
ದಾರುಮಥನವ ಗೈಯೈ ಪಾವಕ ತೋರುವಂತೆ
ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾ ಕಾಲದಲಿ ನೋಳ್ಪರಿಗೆ||5||

ಕರಣ ನಿಯಾಮಕನು ತಾನು ಉಪಕರಣದೊಳಗೆ ಐವತ್ತೆರಡು ಸಾವಿರದ
ಹದಿನಾಲ್ಕು ಅಧಿಕ ಶತ ರೂಪಗಳನು ಧರಿಸಿ
ಇರುತಿಹನು ತದ್ರೂಪ ನಾಮಗಳ ಅರಿತು ಪೂಜಿಸುತಿಹರ ಪೂಜೆಯ ನಿರುತ ಕೈಕೊಂಬ
ತೃಷಾರ್ತನು ಜಲವ ಕೊಂಬಂತೆ||6||

ಬಿಂಬರೂಪನು ಈ ತೆರದಿ ಜಡಪೊಂಬಸಿರ ಮೊದಲಾದ ಸುರರೊಳಗೆ ಇಂಬುಗೊಂಡಿಹನೆಂದು
ಅರಿದು ಧರ್ಮಾರ್ಥ ಕಾಮಗಳ ಹಂಬಲಿಸದೆ ಅನುದಿನದಿ
ವಿಶ್ವಕುಟುಂಬಿ ಕೊಟ್ಟ ಕಣ ಅನ್ನಕುತ್ಸಿತ ಕಂಬಳಿಯೇ
ಸೌಭಾಗ್ಯವೆಂದು ಅವನ ಅಂಘ್ರಿಗಳ ಭಜಿಸು||7||

ವಾರಿಯೊಳಗಿಪ್ಪತ್ತು ನಾಲ್ಕು ಮೂರೆರೆಡು ಸಾವಿರದ ಮೇಲೆ ಮುನ್ನೂರು ಹದಿನೇಳು ಎನಿಪ
ರೂಪವು ಶ್ರೀತುಳಸಿದಳದಿ
ನೂರು ಅರವತ್ತೊಂದು ಪುಷ್ಪದಿ ಮೂರಧಿಕ ದಶ ದೀಪದೊಳು
ನಾನೂರು ಮೂರು ಸುಮೂರ್ತಿಗಳು ಗಂಧದೊಳಗೆ ಇರುತಿಹವು||8||

ಅಷ್ಟದಳ ಸದ್ಹೃದಯ ಕಮಲ ಅಧಿಷ್ಠಿತನು ತಾನಾಗಿ ಸರ್ವ ಉತ್ಕ್ರುಷ್ಟಮಹಿಮನು
ದಳಗಳಲಿ ಸಂಚರಿಸುತ ಒಳಗಿದ್ದು
ದುಷ್ಟರಿಗೆ ದುರ್ಬುದ್ಧಿ ಕರ್ಮ ವಿಶಿಷ್ಟರಿಗೆ ಸುಜ್ಞಾನ ಧರ್ಮ
ಸುಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ||9||

ವಿತ್ತದೇಹಾಗಾರ ದಾರಾಪತ್ಯ ಮಿತ್ರಾದಿಗಳೊಳಗೆ
ಗುಣಚಿತ್ತಬುದ್ಧಿ ಆದಿ ಇಂದ್ರಿಯಗಳೊಳು ಜ್ಞಾನ ಕರ್ಮದೊಳು
ತತ್ತದಾಹ್ವಯನಾಗಿ ಕರೆಸುತ ಸಂಕಲ್ಪ ಅನುಸಾರದಿ
ನಿತ್ಯದಲಿ ತಾ ಮಾಡಿ ಮಾಡಿಪನು ಎಂದು ಸ್ಮರಿಸುತಿರು||10||

ಭಾವದ್ರವ್ಯಕ್ರಿಯೆಗಳು ಎನಿಸುವ ಈ ವಿಧ ಅದ್ವೈತ ತ್ರಯಂಗಳ
ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ
ತಾವಕನು ತಾನೆಂದು ಪ್ರತಿದಿನ ಸೇವಿಸುವ ಭಕ್ತರಿಗೆ
ತನ್ನನೀವ ಕಾವ ಕೃಪಾಳು ಕರಿವರಗೊಲಿದ ತೆರದಂತೆ||11||

ಬಾಂದಳವೆ ಮೊದಲಾದುದರೊಳು ಒಂದೊಂದರಲಿ ಪೂಜಾ ಸುಸಾಧನವೆಂದೆನಿಸುವ
ಪದಾರ್ಥಗಳು ಬಗೆಬಗೆಯ ನೂತನದಿ ಸಂದಣಿಸಿ ಕೊಂಡಿಹವು
ಧ್ಯಾನಕೆ ತಂದಿನಿತು ಚಿಂತಿಸಿ ಸದಾ ಗೋವಿಂದನ ಅರ್ಚಿಸಿ
ನೋಡು ನಲಿನಲಿದಾಡು ಕೊಂಡಾಡು||12||

ಜಲಜನಾಭನ ಮೂರ್ತಿ ಮನದಲಿ ನೆಲೆಗೊಳಿಸಿ ನಿಶ್ಚಲ ಭಕುತಿಯಲಿ
ಚಳಿ ಬಿಸಿಲು ಮಳೆ ಗಾಳಿಗಳ ನಿಂದಿಸದೆ ನಿತ್ಯದಲಿ
ನೆಲೆದೊಳಿಹ ಗಂಧವೇ ಸುಗಂಧವು ಜಲವೆ ರಸ ರೂಪವೆ ಸುದೀಪವು
ಎಲರು ಚಾಮರ ಶಭ್ಧ ವಾದ್ಯಗಳು ಅರ್ಪಿಸಲು ಒಲಿವ||13||

ಗೋಳಕಗಳು ರಮಾ ರಮಣನ ನಿಜ ಆಲಯಗಳು
ಅನುದಿನದಿ ಸಂಪ್ರಕ್ಷಾಲನೆಯೆ ಸಮ್ಮಾರ್ಜನವು ಕರುಣಗಳೆ ದೀಪಗಳು
ಸಾಲು ತತ್ತತ್ ವಿಷಯಗಳ ಸಮ್ಮೇಳನವೇ ಪರಿಯಂಕ
ತತ್ಸುಖದ ಏಳಿಗೆಯೆ ಸುಪ್ಪತ್ತಿಗೆ ಆತ್ಮನಿವೇದನೆ ವಸನ||14||

ಪಾಪಕರ್ಮವು ಪಾದುಕೆಗಳ ಅನುಲೇಪನವು ಸತ್ಪುಣ್ಯ ಶಾಸ್ತ್ರ ಆಲಾಪನವೆ ಶ್ರೀತುಳಸಿ
ಸುಮನೋವೃತ್ತಿಗಳೆ ಸುಮನ
ಕೋಪಧೂಪವು ಭಕ್ತಿ ಭೂಷಣ

ವ್ಯಾಪಿಸಿದ ಸದ್ಬುದ್ಧಿ ಛತ್ರವು ದೀಪವೇ ಸುಜ್ಞಾನ ಆರಾರ್ತಿಗಳೆ ಗುಣಕಥನ||15||

ಮನ ವಚನ ಕಾಯಿಕ ಪ್ರದಕ್ಷಿಣೆ ಅನುದಿನದಿ ಸರ್ವತ್ರ ವ್ಯಾಪಕ ವನರುಹೇಕ್ಷಣಗೆ
ಅರ್ಪಿಸುತ ಮೋದಿಸುತಲಿರು ಸತತ
ಅನುಭವಕೆ ತಂದುಕೋ ಸಕಲ ಸಾಧನಗಳೊಳಗೆ ಇದೆ ಮುಖ್ಯ
ಪಾಮರ ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗೆ ಅಲ್ಲದಲೆ||16||

ಚತುರ ವಿಧ ಪುರುಷಾರ್ಥ ಪಡೆವರೆ ಚತುರದಶಲೋಕಗಳ ಮಧ್ಯದೊಳು
ಇತರ ಉಪಾಯಗಳು ನೋಡಲು ಸಕಲ ಶಾಸ್ತ್ರದಲಿ
ಸತತ ವಿಷಯ ಇಂದ್ರಿಯಗಳಲಿ ಪ್ರವಿತತನೆನಿಸಿ ರಾಜಿಸುವ ಲಕ್ಷ್ಮೀಪತಿಗೆ
ಸರ್ವ ಸಮರ್ಪಣೆಯೇ ಮಹಾಪೂಜೆ ಸದುಪಾಯ||17||

ಗೋಳಕವೇ ಕುಂಡ ಅಗ್ನಿ ಕರಣವು ಮೇಲೊದಗಿ ಬಹುವಿಷಯ ಸಮಿಧೆಯು
ಗಾಳಿ ಯತ್ನವು ಕಾಮ ಧೂಪವು ಸನ್ನಿಧಾನ ಅರ್ಚಿ
ಮೇಳನವೇ ಪ್ರಜ್ವಾಲೆ ಕಿಡಿಗಳು ತೂಳಿದ ಆನಂದಗಳು
ತತ್ತತ್ಕಾಲ ಮಾತುಗಳು ಎಲ್ಲ ಮಂತ್ರ ಅಧ್ಯಾತ್ಮ ಯಜ್ಞವಿದು||18||

ಮಧು ವಿರೋಧಿಯ ಪಟ್ಟಣಕೆ ಪೂರ್ವದ ಕವಾಟಗಳು ಅಕ್ಷಿನಾಸಿಕವದನ
ಶ್ರೋತೃಗಳು ಎರಡು ದಕ್ಷಿಣ ಉತ್ತರದ್ವಾರ
ಗುದೋಪಸ್ಥಗಳು ಎರಡು ಪಶ್ಚಿಮ ಕದಗಳು ಎನಿಪವು
ಷಟ್ ಸರೋಜವೆ ಸದನ ಹೃದಯವೇ ಮಂಟಪ ತ್ರಿಗುಣoಗಳೆ ಕಲಶ||19||

ಧಾತುಗಳೇ ಸಪ್ತ ಆವರಣ ಉಪವೀಧಿಗಳೇ ನಾಡಿಗಳು ಮದಗಳು ಯೂಥಪಗಳು
ಸುಷುಮ್ನನಾಡಿಯೇ ರಾಜಪಂಥಾನ
ಈ ತನೂರುಹಗಳೇ ವನಂಗಳು ಮಾತರಿಶ್ವನು ಪಂಚರೂಪದಿ
ಪಾತಕಿಗಳೆಂಬ ಅರಿಗಳನು ಸಂಹರಿಪ ತಳವಾರ||20||

ಇನ ಶಶಾಂಕಾದಿಗಳು ಲಕ್ಷ್ಮೀವನಿತೆ ಅರಸನ ದ್ವಾರ ಪಾಲಕರೆನಿಸುತ ಇಪ್ಪರು
ಮನದ ವೃತ್ತಿಗಳೇ ಪದಾತಿಗಳು
ಅನುಭವಿಪ ವಿಷಯoಗಳೇ ಪಟ್ಟಣಕೆ ಬಪ್ಪ ಪಸಾರಗಳು
ಜೀವನೇ ಸುವರ್ತಕ ಕಷ್ಟಗಳ ಕೈಕೊಂಬ ಹರಿ ತಾನು||21||

ಉರುಪರಾಕ್ರಮನ ಅರಮನಿಗೆ ದಶಕರಣಗಳೆ ಕನ್ನಡಿಯ ಸಾಲುಗಳು
ಅರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು
ಮರಳಿ ಬೀಸುವ ಶ್ವಾಸಗಳು ಚಾಮರ ವಿಲಾಸಿನಿ ಬುದ್ಧಿ
ದಾಮೋದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು||22||

ಮಾರಮಣನ ಅರಮನೆಗೆ ಸುಮಹಾ ದ್ವಾರವೆನಿಸುವ ವದನಕೆ
ಒಪ್ಪುವ ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು
ಊರಿ ನಡೆವ ಅಂಘ್ರಿಗಳು ಜಂಘೆಗಳು ಊರು ಮಧ್ಯ ಉದರ ಶಿರಗಳು
ಆಗಾರದ ಉಪ್ಪರಿಗೆಗಳು ಕೋಶಗಳು ಐದು ಕೋಣೆಗಳು||23||

ಈ ಶರೀರವೇ ರಥ ಪಟಾಕ ಸುವಾಸಗಳು ಪುಂಡ್ರಗಳು ಧ್ವಜ
ಸಿಂಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ಪಾಶ
ಗುಣ ದಂಡತ್ರಯಗಳು ಶುಭಾಶುಭದ್ವಯ ಕರ್ಮ ಚಕ್ರ
ಮಹಾಸಮರ್ಥ ಅಶ್ವಗಳು ದಶಕರಣoಗಳು ಎನಿಸುವುವು||24||

ಮಾತರಿಶ್ವನು ದೇಹರಥದೊಳು ಸೂತನಾಗಿಹ ಸರ್ವಕಾಲದಿ
ಶ್ರೀತರುಣಿ ವಲ್ಲಭ ರಥಿಕನು ಎಂದರಿದು ನಿತ್ಯದಲಿ
ಪ್ರೀತಿಯಿಂದಲಿ ಪೋಷಿಸುತ ವಾತಾತಪ ಆದಿಗಳಿಂದ ಅವಿರತ
ಈ ತನುವಿನೊಳು ಮಮತೆ ಬಿಟ್ಟವನೇ ಮಹಾಯೋಗಿ||25||

ಭವವೆನಿಪ ವನಧಿಯೊಳು ಕರ್ಮ ಪ್ರವಹದೊಳು ಸಂಚರಿಸುತಿಹ
ದೇಹವೆ ಸುನಾವೆಯ ಮಾಡಿ ತನ್ನವರಿಂದ ಒಡಗೂಡಿ
ದಿವಸ ದಿವಸಗಳಲ್ಲಿ ಲಕ್ಷ್ಮೀಧವನು ಕ್ರೀಡಿಪನು ಎಂದು ಚಿಂತಿಸೆ
ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವ ಈವ||26||

ಆಪಣಾಲಯಗಳ ಪದಾರ್ಥವು ಸ್ತ್ರೀಪುರುಷರ ಇಂದ್ರಿಯಗಳಲಿ
ದೀಪ ಪಾವಕರೊಳಗೆ ಇದುವ ತೈಲಾದಿ ದ್ರವ್ಯಗಳ
ಆ ಪರಮಗೆ ಅವದಾನವು ಎಂದು ಪದೇಪದೇ ಮರೆಯದಲೆ ಸ್ಮರಿಸುತ
ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ||27||

ವಾರಿಜ ಭವಾಂಡವೆ ಸುಮಂಟಪ ಮೇರುಗಿರಿ ಸಿಂಹಾಸನವು ಭಾಗೀರಥಿಯೇ ಮಜ್ಜನವು
ದಿಕ್ವಸ್ತ್ರಗಳು ನುಡಿ ಮಂತ್ರ
ಭೂರುಹಜ ಫಲಪುಷ್ಪ ಗಂಧ ಸಮೀರ ಶಶಿ ರವಿ ದೀಪ
ಭೂಷಣ ತಾರಕಗಳು ಎಂದು ಅರ್ಪಿಸಲು ಕೈಕೊಂಡು ಮನ್ನಿಸುವ||28||

ಭೂಸುರರೊಳು ಇಪ್ಪ ಅಬ್ಜಭವನನೊಳು ವಾಸುದೇವನು
ವಾಯುಖಗಪ ಸದಾಶಿವ ಅಹಿಪ ಇಂದ್ರನು ವಿವಸ್ವಾನ್ ನಾಮಕ ಸೂರ್ಯ
ಭೇಶಕಾಮ ಅಮರಾಸ್ಯ ವರುಣಾದಿ ಸುರರು ಕ್ಷತ್ರಿಯರೊಳು ಇಪ್ಪರು
ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು||29||

ಮೀನ ಕೇತನ ತನಯ ಪ್ರಾಣಾಪಾನ ವ್ಯಾನೋದಾನ ಮುಖ್ಯ ಏಕ ಊನ ಪಂಚಾಶತ್
ಮರುದ್ಗಣ ರುದ್ರ ವಸುಗಣರು
ಮೇನಕಾತ್ಮಜ ಕುವರ ವಿಶ್ವಕ್ಸೇನ ಧನಪಾದಿ ಅನಿಮಿಷರನು
ಸದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯುಮ್ನ||30||

ಇರುತಿಹರು ನಾಸತ್ಯ ದಸ್ರರು ನಿರಋತಿಯು ಯಮಧರ್ಮ ಕಿಂಕರರು ಮೇದಿನಿ
ಕಾಲಮೃತ್ಯು ಶನೈಶ್ಚರಾದಿಗಳು
ಕರೆಸಿಕೊಂಬರು ಶೂದ್ರರೆಂದು ಅನವರತ
ಶೂದ್ರರೊಳಿಪ್ಪರು ಇವರೊಳಗೆ ಅರವಿದೂರ ಅನಿರುದ್ಧನು ಇಹನೆಂದರಿದು ಮನ್ನಿಪುದು||31||

ವೀತಭಯ ನಾರಾಯಣ ಚತುಷ್ಪಾತು ತಾನು ಎಂದೆನಿಸಿ
ತತ್ತತ್ ಜಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ
ಚೇತನರ ಒಳಹೊರಗೆ ಓತಪ್ರೋತನಾಗಿದ್ದು ಎಲ್ಲರಿಗೆ
ಸಂಪ್ರೀತಿಯಲಿ ಧರ್ಮಾರ್ಥ ಕಾಮಾದಿಗಳ ಕೊಡುತಿಹನು||32||

ನಿಧನ ಧನದ ವಿಧಾತ ವಿಗತಾಭ್ಯಧಿಕ ಸಮಸಮವರ್ತಿ ಸಾಮಗ
ತ್ರಿದಶ ಗಣಸಂಪೂಜ್ಯ ತ್ರಿಕಕುತ್ ಧಾಮ ಶುಭನಾಮ
ಮಧುಮಥನ ಭೃಗುರಾಮ ಘೋಟಕ ವದನ
ಸರ್ವ ಪದಾರ್ಥದೊಳು ತುದಿ ಮೊದಲು ತುಂಬಿಹನು ಎಂದು ಚಿಂತಿಸು ಬಿಂಬರೂಪದಲಿ||33||

ಕನ್ನಡಿಯ ಕೈವಿಡಿದು ನೋಡಲು ತನ್ನ ಇರವು ಸವ್ಯಾಪಸವ್ಯದಿ ಕಣ್ಣಿಗೆ ಒಪ್ಪುವ ತೆರದಿ
ಅನಿರುದ್ಧನಿಗೆ ಈ ಜಗವು ಭಿನ್ನ ಭಿನ್ನವೆ ತೋರುತಿಪ್ಪುದು
ಜನ್ಯವಾದುದರಿಂದ ಪ್ರತಿಬಿಂಬನ್ನ
ಮಯಗಾನು ಎಂದರಿದು ಪೂಜಿಸಲು ಕೈಕೊಂಬ||34||

ಬಿಂಬರೆನಿಪರು ಸ್ವೋತ್ತಮರು ಪ್ರತಿಬಿಂಬರೆನಿಪರು ಸ್ವ ಅವರರು
ಪ್ರತಿಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು
ಸಂಭ್ರಮದಿ ಪಾಡುತಲಿ ನೋಡುತ ಉಂಬುದು ಉಡುವುದು ಇಡುವುದು ಕೊಡುವುದು ಎಲ್ಲ
ಅಂಬುಜಾoಬುಕನ ಅಂಘ್ರಿ ಪೂಜೆಗಳು ಎಂದು ನಲಿದಾಡು||35||

ನದಿಯ ಜಲ ನದಿಗೆ ಎರೆವ ತೆರೆದಂದದಲಿ
ಭಗವತ್ ದತ್ತ ಧರ್ಮಗಳು ಉದಧಿಶಯನನಿಗೆ ಅರ್ಪಿಸುತ ವ್ಯಾವೃತ್ತ ನೀನಾಗಿ
ವಿಧಿ ನಿಷೇಧಾದಿಗಳಿಗೆ ಒಳಗಾಗದಲೆ ನೋಡುತ
ದರ್ವಿಯಂದದಿ ಪದುಮನಾಭನ ಸಕಲ ಕರ್ಮಗಳಲಿ ನೆನೆವುತಿರು||36||

ಅರಿಯದಿರ್ದರು ಎಮ್ಮೊಳಿದ್ದು ಅನವರತ ವಿಷಯಗಳ ಉಂಬ
ಜ್ಞಾನ ಉತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ
ಸರಿತು ಕಾಲಪ್ರವಹಗಳು ಕಂಡರೆಯು ಸರಿ ಕಾಣದಿರೆ ಪರಿವವು
ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು||37||

ಏನು ಮಾಡುವ ಕರ್ಮಗಳು ಲಕ್ಷ್ಮೀ ನಿವಾಸನಿಗೆ ಅರ್ಪಿಸು
ಅನುಸಂಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ
ಮಾನನಿಧಿ ಕೈಕೊಂಡು ಸುಖವಿತ್ತು ಅನತರ ಸಂತೈಪ
ತೃಣ ಜಲ ಧೇನು ತಾನುಂಡು ಅನವರತ ಪಾಲ್ಗರೆವ ತೆರದಂತೆ||38||

ಪೂರ್ವ ದಕ್ಷಿಣ ಪಶ್ಚಿಮ ಉತ್ತರ ಪಾರ್ವತೀಪತಿ ಅಗ್ನಿವಾಯು ಸುಶಾರ್ವರೀಚರ
ದಿಗ್ವಲಯದೊಳು ಹಂಸನಾಮಕನು
ಸರ್ವಕಾಲದಿ ಸರ್ವರೊಳು ಸುರ ಸಾರ್ವಭೌಮನು ಸ್ವೇಚ್ಛೆಯಲಿ
ಮತ್ತೋರ್ವರಿಗೆ ಗೋಚರಿಸದ ಅವ್ಯಕ್ತ ಆತ್ಮನು ಎಂದೆನಿಪ||39||

ಪರಿ ಇಡಾವತ್ಸರನು ಸಂವತ್ಸರದೊಳು ಅನಿರುದ್ಧಾದಿ ರೂಪವ ಧರಿಸಿ
ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ
ಇರುತಿಹ ಜಗನ್ನಾಥ ವಿಠಲ ಸ್ಮರಿಸುವವರನು ಸಂತೈಪನು ಎಂದು
ಉರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು||40||
*******

harikathAmRutasAra gurugaLa karuNadindApanitu kELuve
parama BagavadBaktaru idanAdaradi kELuvudu||

SrI taruNi vallaBana parama viBUti rUpa kanDa kanDalli
I teradi cintisuta nODu saMBramadi
nIta sAdhAraNa viSESha sajAti naija ahitavu vijAti KanDAKanDa
bagegaLanu aritu budharinda||1||

jaladharAgasadoLage carisuva halavu jIvara nirmisihanu
adaroLu sajAti vijAti sadhAraNa viSEShagaLa tiLidu
tattat sthAnadali veggaLisi
habbida manadi pUjisutali avana vyApta rUpagaLa nODutali higguvudu||2||

pratime SAlagrAma gO aByAgatanu atithi SrItuLasi pippala yativanastha
gRuhastha vaTu yajamAna svapara jana
pRuthivi jala SiKi pavana tArApatha navagraha Oga karaNa Batithi
sita asita pakSha sankramaNa avana adhiShThAna||3||

kAda kAncanadoLage SOBipa AditEyAsyana teradi
lakShmI dhavanu pratidinadi SAlagrAmadoLage ippa
aidu sAvira mEle mUvattu aidadhika ainUru rUpadi
BUdharagaLABimAni divijaroLu ippanu anavarata||4||

SrIramaNa pratimegaLoLage hadimUradhikavAgippa mEle
ainUru rUpava dharisi ippanu Ahita acaladi
dArumathanava gaiyai pAvaka tOruvante
pratIka suraroLu tOrutippanu tattadA kAladali nOLparige||5||

karaNa niyAmakanu tAnu upakaraNadoLage aivatteraDu sAvirada
hadinAlku adhika Sata rUpagaLanu dharisi
irutihanu tadrUpa nAmagaLa aritu pUjisutihara pUjeya niruta kaikoMba
tRuShArtanu jalava koMbante||6||

biMbarUpanu I teradi jaDapoMbasira modalAda suraroLage iMbugonDihanendu
aridu dharmArtha kAmagaLa haMbalisade anudinadi
viSvakuTuMbi koTTa kaNa annakutsita kaMbaLiyE
sauBAgyavendu avana anGrigaLa Bajisu||7||

vAriyoLagippattu nAlku mUrereDu sAvirada mEle munnUru hadinELu enipa
rUpavu SrItuLasidaLadi
nUru aravattoMdu puShpadi mUradhika daSa dIpadoLu
nAnUru mUru sumUrtigaLu gandhadoLage irutihavu||8||

aShTadaLa sad~hRudaya kamala adhiShThitanu tAnAgi sarva utkruShTamahimanu
daLagaLali sancarisuta oLagiddu
duShTarige durbuddhi karma viSiShTarige suj~jAna dharma
supuShTigaisuta santaipa nirduShTa suKapUrNa||9||

vittadEhAgAra dArApatya mitrAdigaLoLage
guNacittabuddhi Adi indriyagaLoLu j~jAna karmadoLu
tattadAhvayanAgi karesuta sankalpa anusAradi
nityadali tA mADi mADipanu endu smarisutiru||10||

BAvadravyakriyegaLu enisuva I vidha advaita trayangaLa
BAvisuta sadBaktiyali sarvatra mareyadale
tAvakanu tAnendu pratidina sEvisuva Baktarige
tannanIva kAva kRupALu karivaragolida teradante||11||

bAndaLave modalAdudaroLu ondondarali pUjA susAdhanavendenisuva
padArthagaLu bagebageya nUtanadi sandaNisi koMDihavu
dhyAnake tandinitu cintisi sadA gOvindana arcisi
nODu nalinalidADu konDADu||12||

jalajanABana mUrti manadali nelegoLisi niScala Bakutiyali
caLi bisilu maLe gALigaLa nindisade nityadali
neledoLiha gandhavE sugandhavu jalave rasa rUpave sudIpavu
elaru cAmara SaBdha vAdyagaLu arpisalu oliva||13||

gOLakagaLu ramA ramaNana nija AlayagaLu
anudinadi saMprakShAlaneye sammArjanavu karuNagaLe dIpagaLu
sAlu tattat viShayagaLa sammELanavE pariyanka
tatsuKada ELigeye suppattige AtmanivEdane vasana||14||

pApakarmavu pAdukegaLa anulEpanavu satpuNya SAstra AlApanave SrItuLasi
sumanOvRuttigaLe sumana
kOpadhUpavu Bakti BUShaNa
vyApisida sadbuddhi Catravu dIpavE suj~jAna ArArtigaLe guNakathana||15||

mana vacana kAyika pradakShiNe anudinadi sarvatra vyApaka vanaruhEkShaNage
arpisuta mOdisutaliru satata
anuBavake tandukO sakala sAdhanagaLoLage ide muKya
pAmara manujarige pELidare tiLiyadu budharige alladale||16||

catura vidha puruShArtha paDevare caturadaSalOkagaLa madhyadoLu
itara upAyagaLu nODalu sakala SAstradali
satata viShaya iMdriyagaLali pravitatanenisi rAjisuva lakShmIpatige
sarva samarpaNeyE mahApUje sadupAya||17||

gOLakavE kuMDa agni karaNavu mElodagi bahuviShaya samidheyu
gALi yatnavu kAma dhUpavu sannidhAna arci
mELanavE prajvAle kiDigaLu tULida AnaMdagaLu
tattatkAla mAtugaLu ella mantra adhyAtma yaj~javidu||18||

madhu virOdhiya paTTaNake pUrvada kavATagaLu akShinAsikavadana
SrOtRugaLu eraDu dakShiNa uttaradvAra
gudOpasthagaLu eraDu paScima kadagaLu enipavu
ShaT sarOjave sadana hRudayavE manTapa triguNaogaLe kalaSa||19||

dhAtugaLE sapta AvaraNa upavIdhigaLE nADigaLu madagaLu yUthapagaLu
suShumnanADiyE rAjapanthAna
I tanUruhagaLE vanaMgaLu mAtariSvanu pancarUpadi
pAtakigaLeMba arigaLanu saMharipa taLavAra||20||

ina SaSAnkAdigaLu lakShmIvanite arasana dvAra pAlakarenisuta ipparu
manada vRuttigaLE padAtigaLu
anuBavipa viShayaogaLE paTTaNake bappa pasAragaLu
jIvanE suvartaka kaShTagaLa kaikoMba hari tAnu||21||

uruparAkramana aramanige daSakaraNagaLe kannaDiya sAlugaLu
aravidUrana sadvihArake citta manTapavu
maraLi bIsuva SvAsagaLu cAmara vilAsini buddhi
dAmOdarage sAShTAnga praNAmagaLE suSayanagaLu||22||

mAramaNana aramanege sumahA dvAravenisuva vadanake
oppuva tOraNa smaSrugaLu kESagaLE patAkegaLu
Uri naDeva anGrigaLu janGegaLu Uru madhya udara SiragaLu
AgArada upparigegaLu kOSagaLu aidu kONegaLu||23||

I SarIravE ratha paTAka suvAsagaLu punDragaLu dhvaja
siMhAsanavu cittavu subuddhiyu kalaSa sanmanavu pASa
guNa danDatrayagaLu SuBASuBadvaya karma cakra
mahAsamartha aSvagaLu daSakaraNaogaLu enisuvuvu||24||

mAtariSvanu dEharathadoLu sUtanAgiha sarvakAladi
SrItaruNi vallaBa rathikanu endaridu nityadali
prItiyindali pOShisuta vAtAtapa AdigaLiMda avirata
I tanuvinoLu mamate biTTavanE mahAyOgi||25||

Bavavenipa vanadhiyoLu karma pravahadoLu sancarisutiha
dEhave sunAveya mADi tannavarinda oDagUDi
divasa divasagaLalli lakShmIdhavanu krIDipanu endu cintise
pavananayya BavAbdhi dATisi paramasuKava Iva||26||

ApaNAlayagaLa padArthavu strIpuruShara iMdriyagaLali
dIpa pAvakaroLage iduva tailAdi dravyagaLa
A paramage avadAnavu eMdu padEpadE mareyadale smarisuta
BUpanaMdadi saMcarisu nirBayadi sarvatra||27||

vArija BavAnDave sumanTapa mErugiri siMhAsanavu BAgIrathiyE majjanavu
dikvastragaLu nuDi mantra
BUruhaja PalapuShpa gandha samIra SaSi ravi dIpa
BUShaNa tArakagaLu endu arpisalu kaikonDu mannisuva||28||

BUsuraroLu ippa abjaBavananoLu vAsudEvanu
vAyuKagapa sadASiva ahipa indranu vivasvAn nAmaka sUrya
BESakAma amarAsya varuNAdi suraru kShatriyaroLu ipparu
vAsavAgiha sankaruShaNana nODi mOdiparu||29||

mIna kEtana tanaya prANApAna vyAnOdAna muKya Eka Una pancASat
marudgaNa rudra vasugaNaru
mEnakAtmaja kuvara viSvaksEna dhanapAdi animiSharanu
sadAnurAgadi dhEnipudu vaiSyaroLu pradyumna||30||

irutiharu nAsatya dasraru nira^^Rutiyu yamadharma kiMkararu mEdini
kAlamRutyu SanaiScarAdigaLu
karesikoMbaru SUdrarendu anavarata
SUdraroLipparu ivaroLage aravidUra aniruddhanu ihanendaridu mannipudu||31||

vItaBaya nArAyaNa catuShpAtu tAnu endenisi
tattat jAti dharma sukarmagaLa tA mADi mADisuta
cEtanara oLahorage OtaprOtanAgiddu ellarige
saMprItiyali dharmArtha kAmAdigaLa koDutihanu||32||

nidhana dhanada vidhAta vigatAByadhika samasamavarti sAmaga
tridaSa gaNasaMpUjya trikakut dhAma SuBanAma
madhumathana BRugurAma GOTaka vadana
sarva padArthadoLu tudi modalu tuMbihanu endu cintisu biMbarUpadali||33||

kannaDiya kaiviDidu nODalu tanna iravu savyApasavyadi kaNNige oppuva teradi
aniruddhanige I jagavu Binna Binnave tOrutippudu
janyavAdudarinda pratibiMbanna
mayagAnu endaridu pUjisalu kaikoMba||34||

biMbareniparu svOttamaru pratibiMbareniparu sva avararu
pratibiMba biMbagaLoLage kEvala biMba hariyendu
saMBramadi pADutali nODuta uMbudu uDuvudu iDuvudu koDuvudu ella
aMbujAobukana anGri pUjegaLu endu nalidADu||35||

nadiya jala nadige ereva teredandadali
Bagavat datta dharmagaLu udadhiSayananige arpisuta vyAvRutta nInAgi
vidhi niShEdhAdigaLige oLagAgadale nODuta
darviyandadi padumanABana sakala karmagaLali nenevutiru||36||

ariyadirdaru emmoLiddu anavarata viShayagaLa uMba
j~jAna uttaradi tanagarpisalu citsuKavittu santaipa
saritu kAlapravahagaLu kanDareyu sari kANadire parivavu
maraLi majjana pAna karmagaLinda suKavihavu||37||

Enu mADuva karmagaLu lakShmI nivAsanige arpisu
anusandhAna pUrvakadinda sandEhisade dinadinadi
mAnanidhi kaikonDu suKavittu anatara santaipa
tRuNa jala dhEnu tAnunDu anavarata pAlgareva teradante||38||

pUrva dakShiNa paScima uttara pArvatIpati agnivAyu suSArvarIcara
digvalayadoLu haMsanAmakanu
sarvakAladi sarvaroLu sura sArvaBaumanu svEcCeyali
mattOrvarige gOcarisada avyakta Atmanu endenipa||39||

pari iDAvatsaranu saMvatsaradoLu aniruddhAdi rUpava dharisi
bArhaspatya sauraBa cAndramanu enisi
irutiha jagannAtha viThala smarisuvavaranu santaipanu endu
uruparAkrama ucitasAdhana yOgyateyanaritu||40||
*****************


ಅರಿಯದಿದ್ದರು ಎಮ್ಮೊಳಿದನ|
...
ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹುವು|| 
✍️ಶ್ರೀ ಮದ್ ಹರಿಕಥಾಮೃತ ಸಾರದಲ್ಲಿ 5 ನೆಯ ಸಂಧಿಯಲ್ಲಿ ಬರುವ ನುಡಿ.
ಶ್ರೀಹರಿಯು ನಮ್ಮ ಒಳಗೆ ಇದ್ದು ನಮಗೆ ತಿಳಿಯದಿದ್ದರು ಸದಾ ವಿಷಯ ಭೋಗಿಸುವನು..
ಸಾರವನ್ನು ತಿಳಿದು ಅನಂತರ ದಲ್ಲಿ ಅವುಗಳನ್ನು ಶ್ರೀ ಹರಿಗೆ ಸಮರ್ಪಣೆ ಮಾಡಲು ಜ್ಞಾನ, ಆನಂದ ಗಳನ್ನು ಇತ್ತು ಸಂತೈಸುತ್ತಾನೆ.
ನದಿ,ಪ್ರವಾಹಗಳು, ಇತರರು ನೋಡಲಿ,ಬಿಡಲಿ ಹರಿಯುವ ಕಾರ್ಯ ಬಿಡುವುದಿಲ್ಲ.
ಅದರಂತೆ ನಾವು ತಿಳಿಯಲಿ,ತಿಳಿಯದೇ ಇರಲಿ ಶ್ರೀ ಹರಿಯು ಎಲ್ಲಾ ಕರ್ಮಗಳನ್ನು ಮಾಡಿಸುತ್ತಾನೆ..
ಹೀಗೆ ಮಾಡಿದ ಕರ್ಮಗಳನ್ನು ಅವನಿಗೆ ಸಮರ್ಪಣೆ ಮಾಡಿದರೆ,  ಅವನು ನಮಗೆ ಜ್ಞಾನ, ಆನಂದಾದಿಗಳನ್ನು ಕೊಡುತ್ತಾನೆ..
ಇದನ್ನೇ ಶ್ರೀ ಮಾನವಿ ಪ್ರಭುಗಳು ಮೇಲಿನ ಸಂಧಿಯಲ್ಲಿ ಹೇಳಿದ್ದು.
🙏ಶ್ರೀ ಕೃಷ್ಣಾರ್ಪಣಮಸ್ತು🙏
ರೋಗ ಭಯವೆಂದುಬಾರದು| ಆಗದಪಜಯ ಧುರದಿ ಬಯಸಿದ
|ಭೋಗ ಶುಭಕಲ್ಯಾಣವಪ್ಪುದು ಸರ್ವಕಾಲದಲಿ||
ಶ್ರೀಗಿರಿಯ ಮಂದಿರನ ಕಥೆ|
ಲೇಸಾಗಿ ಕೇಳಲು ದಿನದಿನದಿ| 
ಶತಯಾಗ ಫಲ ಬಹುದಾಯುರಾರೋಗ್ಯಾದಿ ಸಿರಿಬಹುದು|

🙏ಶ್ರೀ ಕಪಿಲಾಯ ನಮಃ🙏

**********

No comments:

Post a Comment