Monday, 1 November 2021

ಧೂಪಾರತಿಯ ನೋಡುವ ಬನ್ನಿರಿ ನಮ್ಮ ಗೋಪಾಲ purandara vittala DHOOPAARATIYA NODUVA BANNIRI NAMMA GOPALA



ರಚನೆ :ಪುರಂದರ ದಾಸರು


ಧೂಪಾರತಿಯ ನೋಡುವ ಬನ್ನಿ ||ಪ||

ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ ||ಅ.ಪ||

ಮುತ್ತು ಛತ್ರ ಚಾಮರ ಪತಾಕ ಧ್ವಜ
ರತ್ನ ಕೆತ್ತಿಸಿದ ಪದಕ ಹಾರಗಳು
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ
ಸತ್ಯಭಾಮೆ ರುಕ್ಮಿಣಿಯರಸ ಶ್ರೀ ಕೃಷ್ಣನ

ಢಣ ಢಣ ಢಣವೆಂಬ ತಾಳ ದಂಡಿಗೆ ಭೇರಿ
ಝಣಕು ಧಿಮಿಕು ಎಂಬ ಮದ್ದಳೆಯ
ಝಣ ಝಣಿಸುವ ರವ ವೀಣೆ ಕಿನ್ನರಿ ಸ್ವರ
ಘನ ರಾಗದಿಂದಲಿ ಹಾಡುತ ಪಾಡುತಲಿ

ಷಡಪಂಚ ಘಂಟೆ ಝಾಗಟೆಯು ಮೊದಲಾದ
ದೃಢವಾದ ವಾದ್ಯ ಮಂಗಳದಿನದಲ್ಲಿ
ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ
ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ

ಹರಿ ಸುರಪತಿ ವಿರಿಂಚಿಜನಕ
ಪರಮ ಮೂರುತಿ ಪುರುಷೋತ್ತಮನ
ಪರದೈವವೆಂಬ ಶ್ರೀ ರಂಗನಾಥನಾದ
ಪುರಂದರ ವಿಠಲ ದೇವರ ಪೂಜೆಯ
***

pallavi

dhUpAratiya nODuva banni

anupallavi

namma gOpAla krSNa dEvara pUjeya

caraNam 1

muttu chatra cAmara patAka dvaja ratna kettisida padaka hAragaLu
matte kOTi sUrya prabheya dhikkarisuva satyabhAme rukmiNiyarasa shrI krSNana

caraNam 2

ThaNa ThaNa ThaNavemba tALa daNDige bhERi jhaNaku dhimiku emba maddaLeya
jhaNa jhaNisuva rava vINe kinnari svara ghana rAgadindali hADuta pADutali

caraNam 3

SaDapanca ghaNTe jhAgaTeyu modalAda drDhavAda vADya mangaLaninadalli
paDeda kAnti dhavaLa shankhada pUjegaLinda oDeya shrIyarasana sambhramada pUjeya

caraNam 4

hari surapati virinci janaka parama mUruti puruSOttamana paradaivavemba
shrI ranganAthanAda purandara viTTala dEvara pUjeya
***


ರಾಗ ಪೂರ್ವಿಕಲ್ಯಾಣಿ. ಅಟ ತಾಳ (raga, taala may differ in audio)
ರಾಗ ಗಮನಶ್ರಮ. ಚಾಪು ತಾಳ

ಧೂಪಾರತಿಯ ನೋಡುವ ಬನ್ನಿ, ನಮ್ಮ

ಗೋಪಾಲ ಕೃಷ್ಣ ದೇವರ ಪೂಜೆಯ || ಪ||

ಮದ್ದಳೆ ಝಾಗಟೆ ತಾಳ ದುಂದುಭಿ ಭೇರಿ

ತದ್ಧಿಮಿ ಧಿಮಿಕೆಂಬ ವಾದ್ಯಗಳು
ಅದ್ಭುತ ಶಂಖನಾದಗಳಿಂದಲಿ ನಮ್ಮ
ಪದ್ಮನಾಭದೇವರ ದಿವ್ಯ ಪೂಜೆಯ ||

ಅಗರುಚಂದನ ಧೂಪ ಗುಗ್ಗುಳ

ಸಾಂಬ್ರಾಣಿ ಮಘಮಘಿಸುವ ಧೂಪಾರತಿಯು
ಮಿಗಿಲಾದ ಏಕಾರತಿ ಭಕ್ತಿಯಲಿ ನಮ್ಮ
ಜಗನ್ನಾಥ ವಿಟ್ಠಲ ದೇವರ ಪೂಜೆಯ ||

ಹರಿಸರ್ವೋತ್ತಮನ ಭಕ್ತರಾಧಾರನ

ಪರಮ ಮಂಗಳ ಮೂರ್ತಿಪಾವನನ
ಪರ ದೈವವಾದಂಥ ಶ್ರೀ ರಂಗನಾಥನ
ಪುರಂದರವಿಠಲ ದೇವರ ಪೂಜೆಯ ||
***

pallavi

dhUpAratiya nODuva banni namma gOpAla krSNa dEvara pUjeya

caraNam 1

maddaLe jAgaTe tALa dundubhi bhEri taddhimi dhimikemba vAdyagaLu
adbhuta shankhanAdagaLindali namma padmanAbha dEvaea divya pUjeya

caraNam 2

agaru candana dhUpa gugguLa sAmbrANi makhamakhisuva dhUpAratiyu
migilAda EkArati bhaktiyali namma jagannAtha viTTala dEvara pUjeya

caraNam 3

hari sarvOttamana bhaktarAdhArana parama mangaLa mUrti pAvanana
para daiva vAdantha shrI ranganAthana puranara viTTala dEvara pUjeya
***

ಧೂಪಾರತಿಯ  ನೋಡುವ ಬನ್ನಿರಿ 
ನಮ್ಮ ಗೋಪಾಲ ಕೃಷ್ಣ  ದೇವರ ಪೂಜೆಯ           (ಪ )

ಅಗರು ಚಂದನ ಗಂಧ ಗುಗ್ಗುಳ ಸಾಂಬ್ರಾಣಿ  ಘಮ ಘಮಿಸುವ ಧೂಪಾರತಿಯ
ಖಗವಾಹನನ ನಗೆ ಮೊಗಧರಸನ  ಸೊಗಸಿನ ಬಗೆ ಬಗೆ ಆರತಿಯ ।।
                                                                                               (ಧೂಪಾರತಿಯ)

ಹೇರಿ (read ಭೇರಿ) ತಮಟೆ  ತಾಳ ಮದ್ದಳೆ  ಜಾಗಟೆ ನಾನಾ ಪರಿಯ  ವಾದ್ಯಘೋಷಗಳು
ಘೋರ (read ತೋಳ) ರಾವಣ (read ಧವಳ) ಶಂಖ ತಾಳ ಕಹಳೆಗಳಿಂದ   ಶ್ರೀ ರಾಮಕೃಷ್ಣ ದೇವರ ಪೂಜೆಯ ।।
                                                                                                (ಧೂಪಾರತಿಯ)

ಪರತರ ಪರತತ್ವ ಪರಮಪಾವನನ  ಪರಮ ಮಂಗಳ ಶುಭದಾಯಕನ
ಪರಿಪೂರ್ಣ ಪರಬ್ರಹ್ಮ ಇದ್ದು ಶ್ರೀ ರಂಗನ  ಪುರಂದರ ವಿಠಲ ದೇವರ ಪೂಜೆಯ ।।                                                                                            ಧೂಪಾರತಿಯ
********

No comments:

Post a Comment