Monday, 18 November 2019

ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವ ankita prasannavenkata

by ಪ್ರಸನ್ನವೆಂಕಟದಾಸರು
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.

ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1

ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2

ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3

ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4

ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5

ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6

ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
*******

No comments:

Post a Comment