Monday, 18 November 2019

ಹರಿಯೇ ಎನಗಾರು ಗತಿಯೊ ನೀನಲ್ಲದೆ ankita prasannavenkata

by ಪ್ರಸನ್ನವೆಂಕಟದಾಸರು
ಹರಿಯೇ ಎನಗಾರು ಗತಿಯೊ ನೀನಲ್ಲದೆ ಪ.

ಹಿಂದಿನಾಪತ್ತು ಮರೆತೆಇಂದುಮಾಯದಿ ಬೆರೆತೆಒಂದುಗೂಡಿದವುಅಘಮುಂದಿನರುಹಿಲ್ಲ1

ಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುವಿಗಡಕಾವನ ತಡೆ ತಗಲು ಬಿತ್ತೊ ರಂಗಾ2

ಅತ್ತಿತ್ತ ಸುತ್ತುವನಕ ಹೊತ್ತು ಹೋಯಿತು ಯಮನಮುತ್ತಿಗೆ ಬಿದ್ದಾಗ ಮತ್ತಾರಿಲ್ಲೊ ಸ್ವಾಮಿ 3

ಅಜ್ಞಾನೆಂಬಹಿ ಕಚ್ಚಿ ಯಜೆÕೀಶ ನಿನ್ನಂಘ್ರಿಸಂಜÕವಿಲ್ಲದೆ ದು:ಖ ಮಗ್ನನಾದೆನಲ್ಲೊ 4

ಶ್ರೀ ಪ್ರಸನ್ವೆಂಕಟೇಶ ತಾಪತ್ರಯವಿನಾಶನೀ ಪಾಲಿಸಯ್ಯ ವಿಶ್ವವ್ಯಾಪಕ ಸ್ವಾಮಿ 5
******

No comments:

Post a Comment