Monday, 18 November 2019

ಹರಿಯ ನಂಬದ ನರನು ಗೂಡರಿತು ankita prasannavenkata

by ಪ್ರಸನ್ನವೆಂಕಟದಾಸರು
ಹರಿಯ ನಂಬದ ನರನು ಗೂಡರಿತು ಇರದ ವಾನರನು ಶ್ರೀಹರಿಯ ಹೊಗಳದ ಕವಿಯು ಭೂಸುರರುಣ್ಣಿಸದ ಹವಿಯು ಪ.

ಕರುಣವಿಲ್ಲದ ಅರಸ ಕಾಳೋರಗನಾಡುವ ಸರಸಮಾನಕಿಲ್ಲದ ಮಂತ್ರಿ ತಾ ಗರಹೊಡಕ ಕುಮಂತ್ರಿ 1

ಮೆಚ್ಚು ನುಂಗುವ ದೊರೆಯು ಮೀವ ಬಚ್ಚಲಿನ ದೊಡ್ಡಹರಿಯು ಕೈಮುಚ್ಚಿ ನೀಡದ ದಾನ ಹುಸಿರಚನೆ ನಿಧಾನ 2

ಧರುಮಕೆ ಕೂಡದ ಸತಿಯು ಯಮಪುರದಾರಿ ಸಂಗತಿಯು ಬಲುಚರಿಗ ಮತ್ಸರಿತನಯಅವ ಅರಗದ ಅಗ್ಗಣಿಯ3

ಮೂರ್ಖನ ಗೆಳೆತನ ಜರ್ಜರಿತ ತಂತುವಿತಾನ ಒಣಕರಕರಿ ಕಲಹದ ನೆರೆಯು ಸಾಸಿರ ತೇಳಗಗಚ್ಚಿದ ಸರಿಯು 4

ವಂಚಿತವಾದಿ ಬಂಧು ಪ್ರಾಣ ಮುಂಚಿಸುವ ವಿಷಬಿಂದು ಬಹುಕಾಂಚನದಾಸೆ ಬಳಗ ಪ್ರಪಂಚದಳತೆಕೊಳಗ5

ಕೊಡದಿಟ್ಟ ಕೊಡಹಣವು ಸುಡುವ ಅಡವಿಲಿ ಬಿದ್ದ ಹೆಣವು ಬಾಯಿಬಡಕನ ಒಡಂಬಡಿಕೆ ಛಿದ್ರಿಡಿದ ಮಣ್ಣಿನ ಮಡಿಕೆ 6

ಬ್ರಾಹ್ಮರಿಗುಣಿಸದಸದನದುರ್ಬೊಮ್ಮ ರಕ್ಕಸನ್ವದನಮದ್ಹಮ್ಮಿನಣ್ಣಗಳ ವಿದ್ಯಾ ಮಾಯಮ್ಮನ ಮಹನೈವೇದ್ಯ 7

ಓದಿ ಮಲತ ಗುರುಶಿಷ್ಯ ಸದ್ಭೋಧಾಮೃತಪರಿಹೇಯ ಆಪ್ತಾಧಾರಿಲ್ಲದ ಅರಸೆ ಗ್ರಾಮಾದರಿಸುವ ಆಳರಸೆ 8

ವೇತ್ತøವಿವರ್ಜಿತ ಸಭೆಯು ಲೋಕತ್ರಯದಲ್ಲಿ ಅಶುಭವು ಕಂಠತ್ರಾಣಿಲ್ಲದ ಗಾನ ಮುದಿ ಎತ್ತೆಳೆದಾಡುವಗಾಣ9

ಹುಸಿನುಡಿವ ದೈವಜÕ ತಾ ಹಡದ ಮಗನಿಂದ ಅವಜÕ ದುರ್ವಸುಕಾಂಕ್ಷೆಯ ಭೇಷಜನು ಮಾನಿಸರ ಉಂಬ ಮಾಯಿ ದನುಜನು10

ಶ್ರವಣ ಮನನ ಧ್ಯಾನವನು ಬಿಟ್ಟವನೆ ಜೀವಚ್ಛವನುಮಾಧವಪ್ರಸನ್ವೆಂಕಟಮೂರ್ತಿತನ್ನವರಿಗೆ ಕೊಡುವನುಅರ್ಥಿ11
*******

No comments:

Post a Comment