Friday 27 December 2019

ಜಯ ಭಾರತೀಶ ಜಯ ಜಯಭಾರತೀಶ ankita kamalanabha vittala

by ನಿಡಗುರುಕಿ ಜೀವೂಬಾಯಿ
ಜಯಭಾರತೀಶಜಯ ಜಯಭಾರತೀಶ ಜಯಜಯಭಾರತೀಶಜಯತುಜಯ ರಾಘವಾಂಘ್ರಿಪಾದಕಮಲಭೃಂಗನೆ ನಮಿಪೆಜಯಭಾರತೀಶಜಯತು ಪ

ಜಯಭಾರತೀಶಜಯಜಯ ಭೀಮ ಹನುಮನೆಭಯವ ಪರಿಹರಿಸಿ ಪೊರೆಯೈಜಯ ಮಧ್ವಮುನಿರಾಯಗುರುಮಧ್ವಮುನಿರಾಯಗುರುವೆ ಪಾಲಿಸು ಜಯ ಜಯ ಅ.ಪ

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದುಸೀತೆಗುಂಗುರವನಿತ್ತುಮಾತೆಯಾಜೆÕಯ ಕೊಂಡುಘಾತಿಸಿದೆ ರಕ್ಕಸರದೂತ ರಾವಣನ ಕಂಡುಭೀತಿಯಿಲ್ಲದೆ ಜನಕ-ಜಾತೆಯಳ ಕಳುಹೆನಲುಆತ ಕೋಪದಿಂದಲಿ ತನ್ನದೂತರಿಂದಲಿ ವಾಲ-ವಗ್ನಿಯಲಿ ದಹಿಸಿರೆನೆಆ ಪುರವ ದಹಿಸಿ ಮೆರೆದೆ 1

ದ್ವಾಪರದಿ ಶ್ರೀಕೃಷ್ಣನಂಘ್ರಿ ಸೇವಕನಾಗಿಪಾಪಿ ಜರೆಸುತನ ಸೀಳಿದ್ರೌಪದಿಯ ನುಡಿಕೇಳಿಪಾಪಿ ಕೀಚಕನನ್ನುಕೋಪದಿಂ ಕೊಂದ ಮಹಿಮಾಪಾಪಿ ದುರ್ಯೋಧನಾದಿಗಳ ಸಂಗಡ ಕಾದಿಸೋತು ಓಡಲು ದುರುಳನುನೀತಿ ಬಿಡದಲೆ ಗದೆಯಏಟಿನಿಂದವನ ತೊಡೆಘಾತಿಸುತಲವನನಳಿದೆ 2

ಮಧ್ವಮತದವರನುದ್ಧರಿಸ ಬೇಕೆಂದೆನುತಮಧ್ಯಗೇಹರಲಿ ಜನಿಸಿಶುದ್ಧ ಶಾಸ್ತ್ರಗಳನುದ್ಧರಿಸುತ ಜಗದೊಳಗೆ ಪ್ರ-ಸಿದ್ಧನೆಂದೆನಿಸಿ ಮೆರೆದೆಮುದ್ದು ಕೃಷ್ಣನ ಪೂಜೆಶ್ರದ್ಧೆ ಬಿಡದಲೆ ಮಾಡಿಉದ್ಧರಿಸಿ ಸಜ್ಜನರನುಮುದ್ದು ಕಮಲನಾಭ-ವಿಠ್ಠಲಗರ್ಪಿತವೆಂದೆಮಧ್ವಮುನಿರಾಯ ಜಯತು 3
*******

No comments:

Post a Comment