Friday, 27 December 2019

ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ankita kamalanabha vittala

by ನಿಡಗುರುಕಿ ಜೀವೂಬಾಯಿ
ಚಿತ್ರ ವಿಚಿತ್ರವುಹರಿವ್ಯಾಪಾರಚಿತ್ತದಿ ಚಿಂತಿಪರಿಗೆ ಪ

ಸತ್ಯಭಾಮೆಯ ರಮಣನ ಕ್ರಿಯೆಗಳುಉತ್ತಮ ಋಷಿವರರರಿಯರೆನಲು ಬಹು ಅ.

ಮಿತ್ರೆ ರುಕ್ಮಿಣಿ ಕೂಡುತಹರಿಇರಲು ಪಾರಿಜಾತದ ಹೂಮತ್ತೆ ಮಾಧವಗೀಯಲು ನಾರದರು ಕೌತುಕವನೆ ಕೇಳುತಸತ್ಯಭಾಮೆಯು ಕೋಪವ ತಾಳುತಲಿ ಶಚಿಪತಿಯೊಳು ಕಲಹಉತ್ತಮ ಶ್ರೀಹರಿ ಸಮರದಿ ಸೋಲಲುಮತ್ತೆ ಇಂದ್ರ ಜಯಭೇರಿಯ ಹೊಡಿಸಲುಸತ್ಯಭಾಮೆ ಸಮರದಿ ಗೆಲ್ಲುತ ಪುಷ್ಪವೃಕ್ಷಸಹಿತ ದ್ವಾರಕಿಗೈತರೆ ಬಹು 1

ದುರುಳದೈತ್ಯರು ಕೂಡುತ ಗುಂಪಾಗಿ ಶ್ರೀಹರಿಯನು ಪಿಡಿಯಲುಭರದಿಂದೋಡುತ ಬರುತಿರಲದ ನೋಡಿ ಶ್ರೀಹರಿ ತಾ ತಿಳಿದುತ್ವರದಿಂದೋಡುತ ಬರುತಲಿ ಗುಹೆ ಸೇರಿ ಮುಚುಕುಂದರಾಯನಿಗೆಜರದವಲ್ಲಿ ಹೊದಿಸುತ ಮಾಯವಾಗಲುಖಳರು ಬಂದೊದ್ದರು ಮಚುಕುಂದಗೆತೆರೆದು ಕಣ್ಣ ನೋಡಲು ಖಳರೆಲ್ಲರುಉರಿದು ಭಸ್ಮವಾದರು ಕೇಳಿರಿ ಬಹು 2

ಮತ್ತೊಮ್ಮೆ ಖಳರೆಲ್ಲರು ಸೇರುತಲಿ ಸತ್ಯೇಶನ ಪಿಡಿಯಲುಸುತ್ತಮುತ್ತ ಚೀರುತ ಬರುತಿರಲು ಹರಿಬೆದರಿದಪರಿಮತ್ತೋಡೂತ ಹಿಂದಕೆ ನೋಡುತ ಓಡುತಲಿ ಪರ್ವತವನೆ ಏರಲುಸುತ್ತಲು ನಿಂತರು ಖಳರೆಲ್ಲರುಹರಿಒತ್ತಿ ತುಳಿಯೆ ಪರ್ವತ ಕುಸಿಯಲು ಜಲಎತ್ತಿ ಮುಖಕೆರಚಲು ಖಳರೋಡಲುಮೆತ್ತನಿಳಿದುದ್ವಾರಕಿ ಸೇರಿದ ಬಹು 3

ಚಕ್ರವ್ಯೂಹದಿ ಸಿಕ್ಕಿದ ಅಭಿಮನ್ಯು ಷಡುರಥದೊಳು ಕಾದಿದಿಕ್ಕು ದಿಕ್ಕಿಲಿ ಬಾಣದ ಮಳೆಸುರಿಸಿ ರಥಿಕ ಮಹರಥರÉೂಳುಉಕ್ಕಿ ಬರುತಿಹ ರೋಷದಿ ಹೊಯ್ದಾಡಿ ದುರುಳರ ವಶವಾಗಲುಅಕ್ಕರದಲಿ ದೇವಕಿತನಯ ತನ್ನಮಿತ್ರನ ಸುತನ ವಿಯೋಗ ದು:ಖದತಕ್ಕ ಉಪಾಯದಿ ಪರಿಹರಿಸಲು ಸಾ-ಮಥ್ರ್ಯನಾಗಿರಲು ನರನಂತೆ ನಟಿಸಿದ 4

ಹತ್ತು ಹನ್ನೊಂದನೆ ಸಲ ಸಮರದಲಿ ಸರ್ವೇಶನ ಜಯಿಸಲುದೈತ್ಯದಾನವಜರೆಸುತ ಬರುತಿರಲು ಶ್ರೀಹರಿತಾ ತಿಳಿದುಉತ್ತಮ ದ್ವಾರಕಾಪುರ ರಚಿಸುತಲಿ ಜಲಮಧ್ಯದೊಳಿರಲುಪಟ್ಟದರಿಸಿ ಅಷ್ಟ ಸತಿಯರು ಸೌಳಸಾಸಿರ ಸತಿಯರ ಕೂಡುವ ಹರುಷದಿಕರ್ತೃಕಮಲನಾಭ ವಿಠ್ಠಲ ಭಕುತರಇಚ್ಛಿಸಲಿಸಲೀಪರಿ ನಟಿಸಿದ ಬಹು 5
********

No comments:

Post a Comment