Friday, 27 December 2019

ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ankita kamalanabha vittala

by ನಿಡಗುರುಕಿ ಜೀವೂಬಾಯಿ
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ 

ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1

ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2

ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3

ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4

ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
********

No comments:

Post a Comment