Tuesday, 19 November 2019

ಹಸೆಗೆ ಬಾರೊ ಕುಸುಮನಯನ ankita govinda

by ಗೋವಿಂದದಾಸ
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊ ಪ 

ಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲಮುರಿದುಕುಸುಮಬಾಲೆ ಕೊರಳೊಳ್ ಧರಿಸಿವಸುಧೆಸುತೆಯಕರವಪಿಡಿದು1

ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳದೈತ್ಯ ಕ್ರೋಧವರಿಸಿ ಸುರರುರಗದಲ್ಲಿನಿಂದುಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ2

ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡುಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ3
******

No comments:

Post a Comment