Tuesday, 19 November 2019

ಹಾ ಹಾ ಸಾಧುರು ಮೆಚ್ಚದನಕ ಹರಿಗುರು ankita prasannavenkata

by ಪ್ರಸನ್ನವೆಂಕಟದಾಸರು
ಹಾ ಹಾ ಸಾಧುರು ಮೆಚ್ಚದನಕ ಹರಿಗುರು ಮೆಚ್ಚ ಪ.

ನನ್ನ ಗುಣಕೆ ನಾ ಮೆಚ್ಚಿದೆ ಬರಿದೆಪುಣ್ಯವಂತನೆಂದನ್ಯರ ಜರಿದೆಉನ್ನತ ಸೂಕ್ಷ್ಮ ಸುಧರ್ಮವ ಕಾಣೆನನ್ನೊಳು ನಾ ವೃಥಾ ಹಿಗ್ಗಿದರೇನು 1

ಜನದೊಳು ದಣಿಯದೆ ಜ್ಞಾನವನೊರೆದುಘನವೈರಾಗ್ಯಕೆ ಹಿಂದಕೆ ಸರಿದುತನು ಮನ ಕದ್ದು ಭಕುತಿಯೊಳಿದ್ದುಹೆಣಗಾಡುತ ಭಾಗವತೆನಿಸಿದ್ದು 2

ಸಂತರು ಒಪ್ಪಿದ ಜ್ಞಾನಿಯವ ಸಂತಸಂತರಿಗಾಗದವಿರತಿಭ್ರಾಂತಿಸಂತರುಕೂಡಿದಭಕುತಿ ಮುಕುತಿಸಂತರ ಪ್ರಿಯ ಪ್ರಸನ್ವೆಂಕಟಯ್ಯ 3
******

No comments:

Post a Comment