Thursday, 17 October 2019

ಬಿಡು ಬಿಡು ಮಾಯವನು ಕೆಡದಿರು ಕಪಟದಲಿ ankita vijaya vittala

ವಿಜಯದಾಸ
ಬಿಡು ಬಿಡು ಮಾಯವನು ಕೆಡದಿರು ಕಪಟದಲಿ |
ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ಪ

ನಾನು ನನ್ನದು ಎಂಬೊ ಹೀನ ವಚನ ಸಲ್ಲ
ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ 1

ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ |
ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ 2

ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ |
ಜನ್ಮಾಂತರ ಪಾಪ ಪೋಗುವುದು 3

ಜ್ಞಾನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ
ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು4
ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು |
ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು5
ಸಂತೋಷಗಳು ಬರಲಿ ಸಂತಾಪಗಳು ಇರಲಿ |
ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ 6
ಮಾನಿನಿ ನಂದನರು ಆರು ? |
ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ7
***

pallavi

biDu biDu mAyavanu keDadali kapaTadali naDi naDi supathava jagadoDiyana nene manave

caraNam 1

nAnu nannadu embO hIna vacana salla gENUdaravallade porevaru matte nAdaru uNTE

caraNam 2

maDai makkaLa nODi kaDu higgi keDabEDa kaDu munidema nADugaLu piDideLedoyuvAga

caraNam 3

iruLu hagalu nInu hari smaraNe cittadali sthiravAgi irisOdu ananta janmAntara pApa pOguvadu

caraNam 4

jnAna mArgaviDidu Ananda mUrutiya dhyAnadindali kANu dainya vrattiya biTTu hAni vraddhiya jaridu

caraNam 5

ati kAmAturanAgi ratiyelli sigadiru satata mADida karma vyALe vyALege shrIpatigarpitavennu

caraNam 6

santOSagaLu barali santApagaLu irali intu ivarigella prEraka hari jagadantaryAmi

caraNam 7

dhana kanaka vastu mAnini nandanaru Aru? tanuve ninnadallatiLidukO gati sAdhanakE vijayaviThala
***


1 comment: