Thursday 17 October 2019

ಎಂದೊಡನಾಡುವೆ ಎಂದರ್ಥಿಬಡುವೆ ankita vijaya vittala

ವಿಜಯದಾಸ
ಎಂದೊಡನಾಡುವೆ ಎಂದರ್ಥಿಬಡುವೆ
ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ

ಉತ್ಸವ ಮಂಟಪದೊಳಗೆ ಕುಳಿತು ಭಕ್ತ
ವತ್ಸಲನೆಂದು ನುತಿಸಿಕೊಂಬನ ಕೂಡ 1

ಸಕಲ ಭೂಷಿತನಾಗಿ ಅಜಹರ ಸುರಮುನಿ
ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ 2

ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ
ಆ ಪುರೋಹಿತರಿಂದ ಕಲಿತುಕೊಂಬನ ಕೂಡ 3

ನಾಲ್ವತ್ತುಮೂರು ಪದಂಗಳು ಮಾಡೆಂದು
ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ 4

ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ
ಮಂಡೆಯಲ್ಲಿಟ್ಟ ಮಹಮಹಿಮನ ಕೂಡ 5

ಪಲ್ಲಕ್ಕಿ ಏರಿ ಪವಳಿಯ ಸುತ್ತಿ
ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ6

ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ
ಈ ರೀತಿಯಲಿ ಕೂಡ ಇಂದಿರೇಶನ ಕೂಡ 7

ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ
ಭದ್ರ ಮೂರುತಿಯಾದ ಭವಹರ ಕೂಡ 8

ಗುರುಪುರಂದರ ಉಪದೇಶನ ಬಲದಿಂದ
ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ 9
**********

No comments:

Post a Comment