Thursday 17 October 2019

ಎಂದೆಂದಿಗೂ ಎರಡು ಒಂದಾಗವು ankita vijaya vittala

ವಿಜಯದಾಸ
ಎಂದೆಂದಿಗೂ ಎರಡು ಒಂದಾಗವು |
ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಪ

ಒಂದೇ ರೂಪಪಕ್ಷಿ ಒಂದರಲಿ ತಿರಗೋವು |
ಒಂದೀಗ ಪಂಚವರ್ಣದ ಕೋವಿದಾ ||
ಒಂದೆಲ್ಲ ಸಮನೆಂದು ಪೇಳುತ ಬದುಕುವುದು |
ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ 1

ಒಂದೇ ಕೊಂಬಿನಲಿ ಎರಡು ಸೇರಿಕೊಂಡು |
ಒಂದು ಸಾರವನುಂಬದೊಂದರಿಯದು ||
ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು |
ಒಂದು ನಾನೆಂಬೋದು ಮತ್ತೊಂದು ಪೇಳದು 2

ಒಂದೀಗ ತನ್ನ ಫಲ ಪರರಿಗೆ ಕೊಡುವದು |
ಒಂದು ತನ್ನ ಫಲ ತಾ ತಿಂಬೋದು ||
ಒಂದು ಏರು ಇಳಿವ ಮೆಟ್ಟಗಳು ಬಲ್ಲದು |
ಒಂದೀಗ ಕಾಣದೆ ಕಮರಿ ಬೀಳುವದು 3

ಒಂದು ಸುಡಗಾಡು ಸಿದ್ಧ ಎಂದು ಕೂಗುವದು |
ಒಂದು ಕೂಗುವದು ಪ್ರಸಿದ್ಧನೆಂದು ||
ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು |
ಒಂದು ಕತ್ತಲೆಯೊಳು ಆಡುವುದು ನಿತ್ಯಾ 4

ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು |
ಪುರಂದರ ವಿಜಯವಿಠ್ಠಲನ್ನ |
ಒಂದು ಪೊಂದಿತು |
ಒಂದು ಪೊಂದದಲೆ ಹೋಯಿತು 5
*********

No comments:

Post a Comment