ರಾಗ : ಕೇದಾರಗೌಳ ತಾಳ : ಅಟ್ಟ
ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ
ಬಾಯಾಡಬಹುದೆ ಕೈಯೊಳಿತ್ತ ಹಣಗಳ ।।ಪ।।
ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ
ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು
ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ ।।೧।।
ಸಾಲವ ಬೇಡಿದರೆ ಕೋಪವೇ ಕಮಲಾಕ್ಷ
ಕಾಲಿಗೆನ್ನ ಕೊರಳ ಕಟ್ಟಿಕೊಂಬೆ
ಆಲಯದವರ ಕೇಳದೆ ಒಳಗಾದೆನೊ
ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ ।।೨।।
ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ
ಮೀಸಲು ಪೊಂಬೆಸರುನಿರುತ ನಡೆಯಲಿ
ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು
ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ ।।೩।।
****
ನ್ಯಾಯವೇ ನಿನಗೆ ಎನಗೆ ಸಿರಿಕೃಷ್ಣ
ಬಾಯಾಡಬಹುದೆ ಕೈಯೊಳಿತ್ತ ಹಣಗಳ ।।ಪ।।
ಆರು ಅರಿಯರು ಹಾಗೆ ಒಂಬತ್ತು ಕೊಡುವಾಗ
ತೋರಿಯಾಡಿದೆ ಒಮ್ಮೆ ನಿನ್ನ ಹೆಸರ
ಗಾರು ಮಾಡದೆ ಬಡ್ಡಿತೆತ್ತು ಬರುವೆನೆಂದು
ಪೂರೈಸಿ ಕೊಡದೆ ಚುಂಗಡಿಯ ನಿಲಿಸುವರೆ ।।೧।।
ಸಾಲವ ಬೇಡಿದರೆ ಕೋಪವೇ ಕಮಲಾಕ್ಷ
ಕಾಲಿಗೆನ್ನ ಕೊರಳ ಕಟ್ಟಿಕೊಂಬೆ
ಆಲಯದವರ ಕೇಳದೆ ಒಳಗಾದೆನೊ
ಭೋಳೆಯತನದಲಿ ನಿನ್ನ ನಂಬಿದೆ ಹರಿಯೆ ।।೨।।
ಅಸಲು ನಿನಗೆ ಸಮರ್ಪಣೆ ಆಯಿತೆಲೊ ದೇವ
ಮೀಸಲು ಪೊಂಬೆಸರುನಿರುತ ನಡೆಯಲಿ
ಶಶಿಧರ ಬ್ರಹ್ಮಾದಿವಂದ್ಯ ಸತ್ಯವೆಂಬ ಬಿರುದು
ಮೀಸಲು ಉಳುಹಿ ಎನ್ನ ಸಲಹಯ್ಯ ಸಿರಿಕೃಷ್ಣ ।।೩।।
****
Nyayave ninage enage sirikrushna
Bayadabahude kaiyolitta hanagala ||pa||
Aru ariyaru hage ombattu koduvaga
Toriyadide omme ninna hesara
Garu madade badditettu baruvenendu
Puraisi kodade cungadiya nilisuvare ||1||
Salava bedidare kopave kamalaksha
Kaligenna korala kattikombe
Alayadavara kelade olagadeno
Boleyatanadali ninna nambide hariye ||2||
Asalu ninage samarpane Ayitelo deva
Misalu pombesaruniruta nadeyali
Sasidhara brahmadivandya satyavemba birudu
Misalu uluhi enna salahayya sirikrushna ||3||
****
No comments:
Post a Comment