Tuesday, 19 November 2019

ಇದೇಕೋ ಧದಿ ಮಥಿಸೆ ಹಸೆ ankita prasannavenkata

ಇದೆಕೋ ಧದಿ ಮಥಿಸೆ ಹಸೆ ಬೆಣ್ಣೆ ಕೊಡವೇನೊ
ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ            ||ಪ||

ಮಲತಹಾಲು ಹುಳಿಮೊಸರು ತಂಗಳಬೆಣ್ಣೆ
ನಳಿನಾಕ್ಷ ನಿನಗೇನು ರುಚಿಯೋ ಕಂದಾ
ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ
ಗೆಳೆತನವ್ಯಾತಕೊ ನಿನಗೆ ರಂಗಮ್ಮಾ            ||೧||

ಮನೆಮನೆ ತಿರುಗಾಡಲು ಬಡವರ ಮಗನೇನೋ
ನಿನಗೇನು ಕೊರತೆನ್ನಾ ಮನೆಯೊಳಗೆ
ಅನುದಿನಾ ವಿಗಡೇರು ದೂರುತಲೈದಾರೆ
ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ         ।।೨।।

ಎನ್ನ ಮುದ್ದಿನ ಅಮೃತ ಎನ್ನ ಭಾಗ್ಯದ ನಿಧಿಯೆ
ಎನ್ನ ಚಿಂತನೆಯ ಚಿಂತಾಮಣಿಯೇ
ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ
ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ              ।।೩।।
***

Ideko dhadi mathise hase benne kodaveno
Padumanaba gollagorasake golidabyado ||pa||

Malatahalu hulimosaru tangalabenne
Nalinaksha ninagenu ruciyo kanda
Kalavina matyake hasule govaleyera
Geletanavyatako ninage ramgamma ||1||

Manemane tirugadalu badavara maganeno
Ninagenu koratenna maneyolage
Anudina vigaderu durutalaidare
Danidenaropaniya keli krushnayya ||2||

Enna muddina amruta enna bagyada nidhiye
Enna chintaneya chintamaniye
Cinnararasanada prasanvenkata krushna
Nannane kannamumdiru nammamma ||3||
***

ಪ್ರಸನ್ನ ವೆಂಕಟದಾಸರು
ರಾಗ : ಕಾಂಬೋಧಿ   ತಾಳ : ಝಂಪೆ

ಇದೆಕೋ ಧದಿ ಮಥಿಸೆ ಹಸೆ ಬೆಣ್ಣೆ ಕೊಡವೇನೊ
ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ            ||ಪ||

ಮಲತಹಾಲು ಹುಳಿಮೊಸರು ತಂಗಳಬೆಣ್ಣೆ
ನಳಿನಾಕ್ಷ ನಿನಗೇನು ರುಚಿಯೋ ಕಂದಾ
ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ
ಗೆಳೆತನವ್ಯಾತಕೊ ನಿನಗೆ ರಂಗಮ್ಮಾ            ||೧||

ಮನೆಮನೆ ತಿರುಗಾಡಲು ಬಡವರ ಮಗನೇನೋ 
ನಿನಗೇನು ಕೊರತೆನ್ನಾ ಮನೆಯೊಳಗೆ 
ಅನುದಿನಾ ವಿಗಡೇರು ದೂರುತಲೈದಾರೆ 
ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ         ।।೨।।

ಎನ್ನ ಮುದ್ದಿನ ಅಮೃತ ಎನ್ನ ಭಾಗ್ಯದ ನಿಧಿಯೆ
ಎನ್ನ ಚಿಂತನೆಯ ಚಿಂತಾಮಣಿಯೇ 
ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ 
ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ              ।।೩।।
**********

No comments:

Post a Comment