Tuesday, 19 November 2019

ಹೇ ಮನವೆ ಈ ದೇಹ ಗಾಳಿದೀಪ ankita prasannavenkata

ಹೇ ಮನವೆ ಈ ದೇಹ ಗಾಳಿದೀಪ ||ಪ||

ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರು |
ಇಳೆಯೊಳು ಒಯ್ಯಲಿಲ್ಲ ದಾರೂ ||೧||

ಹಂಬಲಗಡಲೊಳು ಮುಳುಗಲಿನ್ನಾವ ಸುಖ |
ಅಂಬುಜಾಕ್ಷಗೆ ಸಲ್ಲಲೀ ಲೆಕ್ಕ ||೨||

ಧರ್ಮವ ಹಳಿದು ಸತ್ಕರ್ಮವ ಜರೆದರೆ |
ನಮ್ಮ ಪ್ರಸನ್ನವೆಂಕಟ ದೂರ ||೩||
***

hE manave I dEha gALidIpa ||pa||

naLa purUrava hariScandra puNyaSlOkaru |
iLeyoLu oyyalilla dArU ||1||

haMbalagaDaloLu muLugalinnAva suKa |
aMbujAkShage sallalI lekka ||2||


dharmava haLidu satkarmava jaredare |
namma prasannavenkaTa dUra ||3||

***

by ಪ್ರಸನ್ನವೆಂಕಟದಾಸರು
ಹೇ ಮನವೆ ಈ ದೇಹ ಗಾಳಿದೀಪ ಪ.

ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರುಇಳೆಯೊಳು ಒಯ್ಯಲಿಲ್ಲ ದಾರೂ 1

ಹಂಬಲಗಡಲೊಳು ಮುಳುಗಲಿನ್ನಾವ ಸುಖಅಂಬುಜಾಕ್ಷಗೆ ಸಲ್ಲಲೀ ಲೆಕ್ಕ 2

ಧರ್ಮವ ಹಳಿದು ಸತ್ಕರ್ಮವ ಜರೆದರೆನಮ್ಮ ಪ್ರಸನ್ನವೆಂಕಟ ದೂರ 3
*******

No comments:

Post a Comment