Wednesday 3 November 2021

ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನು ಬಲ್ಲೆ ankita neleyadikeshava ENENDU KONDAADI STUTISALO DEVA NAANENU BALLE



RAGAMALIKA  TALA KHANDACHAPU



ಏನೆಂದು ಕೊಂಡಾಡಿ ಸ್ತುತಿಸಲೋ ದೇವ || ಪಲ್ಲವಿ||

ನಾನೇನು ಬಲ್ಲೆ ನಿಮ್ಮ ಮಹಿಮೆಗಳ ಮಾಧವ || ಅನುಪಲ್ಲವಿ ||

ಹರಿ ಮುಕುಂದನು ನೀನು ನರಜನ್ಮ ಹುಳು ನಾನು
ಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳ ಪಾಪಿಯು ನಾನು
ಪರಂಜ್ಯೋತಿಯು ನೀನು ತಿರುಕನು ನಾನು || ೧ ||

ವಾರಿಧಿಶಯನನಾದ ಕಾರುಣ್ಯಪತಿ ನೀನು
ಘೋರದಿಂದಿಹ ಕಾಮಿ ಕ್ರೋಧಿಯು ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿಮ್ಮನು ಬೈವ ದುಷ್ಟನು ನಾನು || ೨ ||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅನುಗುಣದ ಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ತನು ನಿತ್ಯವಲ್ಲದ ಬೊಂಬೆಯು ನಾನು || ೩ ||

ಕಂಬದಲಿ ಬಂದ ಆನಂದ ಮೂರುತಿ ನೀನು
ನಂಬಿಕಿಲ್ಲದ ಪ್ರಪಂಚಿಗನು ನಾನು
ಅಂಬರೀಷನಿಗೆ ಒಲಿದ ಅಕ್ರೂರ ಸಖ ನೀನು
ಡಂಭಕರ್ಮಿಯು ನಾನು ನಿರ್ಜಿತನು ನೀನು || ೪||

ತಿರುಪತಿಯವಾಸ ಶ್ರೀ ವೆಂಕಟೇಶನು ನೀನು
ಸ್ಮರಿಸಿ ನಿನ್ನಯ ನಾಮ ಬದುಕುವವ ನಾನು
ಬಿರುದುಳ್ಳವನು ನೀನು ಮರೆಹೊಕ್ಕವನು ನಾನು
ಸಿರಿಕಾಗಿ ನೆಲೆಯಾದು ಕೇಶವನೆ ನೀನು || ೫ ||
***

enendu kondadi stutisalo deva nanenu
balle nimma mahimegala madhava || pa ||

hari mukundanu ninu narajanma
hulunanu paramatma ninu pamaranu nanu
garudagamananu ninu marulu papiyu nanu
parama jyotiyu ninu tirupeyava nanu || 1 ||


kanbadali banda ananda muruti ninu
nanbike yillada prapanciganu nanu
anbarishage olida akrura saka ninu
danbakarmiyu nanu nirjitanu nanu || 2 ||

tirupati vasa sri venkatesanu ninu
smarisi ninnaya padava badukuvanu nanu
birudullavanu ninu morehokkenai nanu
siri kagi neleyadi keshavanu ninu || 3 ||
***

ಏನೆಂದು ಕೊಂಡಾಡಿ ಸ್ತುತಿಸಲೋ ದೇವನಾನೇನು
ಬಲ್ಲೆ ನಿನ್ನ ಮಹಿಮೆಗಳ ಮಾಧವ ||pa||

ಹರಿಮುಕುಂದನು ನೀನು ನರಜನ್ಮ ಹುಳು ನಾನುಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನುಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1||

ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು||2||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು ||3||

ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು||4||

ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು||5||
****

rendered by
shrI Ananda rAo, srIrangam
to aid learning the dAsara pada for beginners

Lyrics:

rAga: rAgamAlika
tALa: kanTacApu

dIna nAnu samasta lOkakkE dAni nInu
vicArisalu mati hIna nAnu mahAmahima kaivalya pati nInu |
yEnu ballanu nAnu nere suGYAna mUruti nInu
ninna samAnaruNTe dEva rakShisu nammanana varatA ||

rAga: kalyANi

Enendu konDADi stutisalO dEva
nAnEnu balle nimma mahimegaLa mAdhavA |

harimukundanu nInu narajanma hula nAnu
paramAtmanu nInu pAmaranu nAnu
garuDa gamananu nInu maruLu pApiyu nAnu
paranjyOtiyu nInu tirukanu nAnu ||
Enendu konDADi stutisalO dEva ||

rAga: cakravAkam (Ahirbhairavi)

vAridhi shayanAda kAruNyapati nInu
ghOradindiha kAmi krOdhi nAnu
IrELu bhuvanadoLu iruva mUruti nInu
dUri nimmanu baiva dushTa nAnu ||
Enendu konDADi stutisalO dEva ||

rAga: aTANA

aNurENu tRNagaLali paripUrNanu nInu
kShaNa kShaNake avaguNada karmi nAnu
vANiyarasana petta vaikunTha pati nInu
tanu nityavallada gombe nAnu ||
Enendu konDADi stutisalO dEva ||

rAga: Ananda bhairavi

kambadali banda Ananda mUruti nInu
nambikkillada prapancikanu nAnu
ambarIShage olida akrUra sakha nInu
Damba karmiyu nAnu nirjitanu nInu ||
Enendu konDADi stutisalO dEva ||

rAga: madhyamAvati

tirupatiya vAsa shrI vEnkatEshanu nInu
smarisi ninnaya nAma badukuvanu nAnu
biruduLLavanu nInu mare hokkavanu nAnu
siri kAginelayAdi kEshavane nInu ||

Enendu konDADi stutisalO dEva
nAnEnu balle nimma mahimegaLa mAdhavA ||
******

No comments:

Post a Comment