Wednesday, 3 November 2021

ತಂದೆ ವಿಜಯರಾಯ ವ್ಯಾಳಿಗೆ ಬಂದ್ಯೊ ankita mohana vittala TANDE VIJAYARAYA VYALIGE BANDYO VIJYADASA STUTIH



ತಂದೆ ವಿಜಯರಾಯ ವ್ಯಾಳಿಗೆಬಂದ್ಯೊ ವಿಜಯರಾಯ ||pa||

ಹಿಂದೇಸು ಜನ್ಮವು ಮುಂದೇಸು ಜನ್ಮವುಒಂದು ತಿಳಿಯದೆಂದಿಗು ಯೆನ್ನಯ ||a.pa||

ಸೂರ್ಯನ ಸುತನಂತೆ ಅಲ್ಲಿ ಮಹಶೌರ್ಯ ದೂತನಂತೆ ||
ಕಾರ್ಯಾಕಾರ್ಯವು ತಿಳಿಯದೆ ನಿನ ಪರಿಚಾರ್ಯನ ಯೆಳೆತಿರೆ ಭಾರ್ಯಳು ಮೊರೆಯಿಡೆ ||1||

ಅದೇ ಧೈರ್ಯ ನೋಡಿಸುದತಿ ತಾ ಹೃದಯ ಬದ್ಧ ಮಾಡಿ ||
ಮಧುಸೂದನನೆ ಮೋದ ತೀರ್ಥರೆಂ-ದೊದರಿದಳೊದರಿದಳ್ ವಿಜಯರಾಯರೆಂದು ||2||

ಕರಗಳನೇ ಕಟ್ಟಿ ಯೆಳೆಯುತಿರೆದೊರೆಗಳನೇ ಮುಟ್ಟಿ ||
ಸಿರಿ ಮೋಹನ ವಿಠಲನ ಪದವ ತೋರಿಧರಿಗೆ ತಂದುಬಿಟ್ಟೆ ಕರುಣಾಳುವೆ ಯೆನ್ನ ||3||
***
.
Tande vijayaraayaa vyaalege bandyo vijayaraayaa || pa ||

Hindesu janumavo mundesu janumavo |
Ondu tiliyadu endendigoo ninnaya || a.pa. ||

Sooryana sutanante alli | mahaa shoora dootarante |
Kaaryaa kaaryavu tiliyade ninna bali |
Aaryana eleyalu bhaaryalu moreyide || 1 ||

Adu dhairya nodi | sudati taa hrudaya badda maadi |
Madhusoodanane muda teeritendu |
Odaridal odaridal vijayaraayarendu || 2 ||


Karagalane katti eleyutire karavanne mutti |
Siri mohana viththalana paadava tori |
Dharege tandu bitte karunaaluve enna || 3 ||
***

pallavi

tande vijayaraya vyalage bandyo vijayaraya

anupallavi

hindesu janumavo mundesu janumavo ondu teleyado nayandedegu yanna

caraNam 1

sUryana sutananthe alle maha shaurya dUtharanthe
karya karyava teleyade tamma paricarya neleuthere bharyalu moure ede

caraNam 2

Adu dhairyava nodi shudhathe tanna hrudaya badda madi
madhusudhanane modhatIrtharendu vadaredal vadaredal vijayararendu

caraNam 3

karagalane katti yelauthere dhoregalane mutti siri
mOhanavithala padavatori dharege tandu bitte karunaluve yanna
***


ಸನ್ನಿವೇಶ 
ಶ್ರೀ ವಿಜಯವಿಠಲ ಗುರುಭ್ಯೊಮ್ ನಮ: |
ಶ್ರೀ ವಿಜಯ ದಾಸರು, ಬಾಲ್ಯದಿಂದಲೇ ಸಾಕಿ ಸಲಹಿದ ಶ್ರೀ ಮೋಹನ ದಾಸರು ಅಕಾಲ ಮೃತ್ಯು ಹೊಂದಿದಾಗ ಅವರ ಪತ್ನಿ ಶ್ರೀ ವಿಜಯ ದಾಸರನ್ನು ಸ್ಮರಿಸುತ್ತಾಳೆ , ಆಗ ಕಾಶಿಯಲ್ಲಿದ್ದ ಶ್ರೀ ವಿಜಯ ದಾಸರು ತಮ್ಮ ಶಿಷ್ಯನನ್ನು ತಮ್ಮ ತಪ ಶಕ್ತಿಯಿಂದ ಅಲ್ಲಿಂದಲೇ ಬದುಕಿಸುತ್ತಾರೆ. ಶ್ರೀ ಮೋಹನ ದಾಸರು ಆಗ ಗುರುಗಳನ್ನು ನೆನೆದು ರಚಿಸಿದ ಒಂದು ಸುಂದರ ಹಾಡು :ಶ್ರೀ ಮೋಹನ್ನ ವಿಠಲಾಂಕಿತಃ
ತಂದೆ ವಿಜಯ ರಾಯಾ ವ್ಯಾಳ್ಯಕೆ ಬಂದ್ಯೋ ವಿಜಯರಾಯ |
***


No comments:

Post a Comment