Wednesday, 3 November 2021

ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು ಕೋಗಿಲೆಯು purandara vittala KAAGE KAAKAA ENALU HAKKI CHILIPILI ENALU KOGILEYU



ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |
ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|
ನಾಗಸಂಪಿಗೆ ಅರಳಲು ಪ

ಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |
ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||
ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |
ನಿದ್ದೆ ತಿಳಿದೇಳಯ್ಯ ಕೃಷ್ಣ 1

ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |
ಹೊಸದಾದ ಹಸುವಿನೀ ತುಪ್ಪವನ್ನು ||
ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |
ಹಸುಳೆ ನಿನಗಾರೋಗಣೆಗೆ ಮಾಡುವೆ 2

ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |
ಕಂದರೊಳಗತಿ ನೀನು ಹಟಿಯಾದೆಯ ||
ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |
ಕಂದ ಅಳಬೇಡವೊ ಪುರಂದರವಿಠಲ 3
***

pallavi

kAge kAkA enalu hakki cilipili enalu kOgileyu svarageyyalu krSNa nAgasampige araLalu

caraNam 1

eddu mukha toLeyELu tiddu kastUri tilaka mudde beNNeya ninage nAnu
koDuve hoddiruva kattaladu haridu beLagAyitO nidde tiLidElayya krSNa

caraNam 2

bisiya dOseya hoidu mosaragaDDeya tegedu hosadAda hasuvinI tuppavanu
hasanAda kalasanna hesaru bELeya huggi hasuLe ninagArOgaNege mADuve

caraNam 3

endilladA haTavanidEkE mADutiha kandaroLagati nInu haDiyAdeya
indu nInattarE etti koLLuvarilla kanda aLabEDavo purandara viTTala
***


No comments:

Post a Comment