Sunday, 5 December 2021

ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ankita neleyadikeshava TANNA PRAAPTIYA PHALAVA TAANARIYADE INNU NUDIVUDU



ತನ್ನ ಪ್ರಾಪ್ತಿಯ ಫಲವ ತಾನರಿಯದೆ
ಇನ್ನು ನುಡಿವುದು ಮೂರ್ಖತನವಲ್ಲವೆ ||ಪ||

ಸರಸಿಜೋದ್ಭವನು ಫಣೆ*ಯೊಳು ಬರೆದು ನಿರ್ಮಿಸಿದ
ತೆರನೊಂದು ಬೇರುಂಟೆ ತಾನರಿಯದೆ
ಕರಕೊಂಡು ಕಂಡವರ ಕೂಡೆ ತಾನಾಡಿದರೆ
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧||

ಬಡತನವು ಬಂದಲ್ಲಿ ಪೂರ್ವದಲಿ ತಾ ಮುನ್ನ
ಪಡೆದಂಥ ವಿಧಿ ಬೆನ್ನ ಬಿಡಲರಿವುದೆ
ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ
ಬಡತನವು ತಾ ಮುನ್ನ ಕಡೆಗೆ ತೊಲಗುವುದೆ ||೨||

ದೆಸೆಗೆಟ್ಟು ನಾಡದೈವಗಳಿಗೆ ಹಲುಬಿದಡೆ
ನೊಸಲ ಬರಹವ ತೊಡೆದು ತಿದ್ದಲಳವೆ
ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ
ಬಿಸಜ**ವನು ಕಂಡು ನೀ ಸುಖಿಯಾಗು ಮನುಜ ||೩||

*ಫಣೆ=ಹಣೆ  **ಬಿಸಜ=ಕಮಲ, ತಾವರೆ
***

ಮುಖಾರಿ ರಾಗ ಝಂಪೆ ತಾಳ (raga tala may differ in audio)

.ತನ್ನ ಪ್ರಾಪ್ತಿಯ ಫಲವ ತಾನರಿಯದೆ
ಅನ್ಯರಿಗೆ ಆಡುವುದು ಅವಗುಣವು ಮರುಳೆ ||ಪ||

ಸರಸಿಜೋದ್ಭವನು ಪಣೆಯಲಿ ಬರೆದು ನಿರ್ಮಿಸಿದ 
ತೆರೆನೊಂದು ಬೇರುಂಟು ತಾನರಿಯದೆ 
ಕರಕೊಂಡು ಕಂಡವರ ಕೂಡ ತಾನಾಡಿದರೆ 
ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧||

ಬಡತನವು ಸಾಕೆಂದು ಸಿರಿತನವ ಬಯಸಿದರೆ 
ಪಡೆದದ್ದು ಪೂರ್ವದಲಿ ಬೆನ್ನ ಬಿಡದು 
ಅಡಿಗಡಿಗೆ ಶೋಕದಲ್ಲಿ ಅವರಿವರಿಗುಸುರಿದರೆ 
ಬಡತನವು ಬಿಟ್ಟು ಹಿಂಗುವುದೇನು ಮರುಳೆ ||೨||

ದೆಸೆಗೆಟ್ಟು ನಾಡದೈವಂಗಳಿಗೆ ಹಲುಬಿದೊಡೆ 
ನೊಸಲ ಬರಹವ ತೊಡೆದು ತಿದ್ದಲಳವೆ  
ವಸುಧೇಶ ಕಾಗಿನೆಲೆಯಾದಿಕೇಶವನಂಘ್ರಿ 
ಬಿಸಜವನು ಕಂಡು ನೀ ಸುಖಿಯಾಗು ಮನುಜಾ ||೩||
***

Tanna praptiya phalava tanariyade
anyarige aduvudu avagunavu marule ||pa||

Sarasijodbhavanu paneyali baredu nirmisida 
terenondu beruntu tanariyade 
karakondu kandavara kuda tanadidare 
nere duhkhavidu bittu kadege tolaguvude ||1||

Badatanavu sakendu siritanava bayasidare 
padedaddu purvadali benna bidadu 
adigadige sokadalli avarivarigusuridare 
badatanavu bittu hinguvudenu marule ||2||

Desegettu nadadaivangalige halubidode 
nosala barahava toḍedu tiddalaḷave  
vasudhesha kagineleyadikeshavananghri 
bisajavanu kandu ni sukhiyagu manuja ||3||
***

No comments:

Post a Comment