Sunday 5 December 2021

ಏನು ಮಾಡಲೋ ರಂಗ ಏಕೆ ಬೆಳಗಾಯಿತೋ purandaravittala ENU MAADALO RANGA EKE BELAGAAYITO



||ಪಲ್ಲವಿ||

ಏನು ಮಾಡಲೋ ರಂಗ ಏಕೆ ಬೆಳಗಾಯಿತೋ|| 

ಏನು ಮಾಡಲೋ ಕೃಷ್ಣ||

ಏನು ಮಾಡಲೋ ರಂಗ ಮಾನಿನಿಯರು ಎನ್ನ ಮಾನವ ಕಳೆಯುವರೋ ರಂಗ||


||ಚರಣ 1||

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ|| ಮೇಲಿನ ಕೆನೆಗಳ ಮೆದ್ದನೆಂಬುವರೊ||

ಬಾಲಕರೆಲ್ಲರ ಬಡಿದನೆಂಬುವರೊ|| ಎಂಥ ಕಾಳಹೆಂಗಸು ಇವನ ಹಡದಳೆಂಬುವರೊ||


||ಚರಣ 2||

ಗಂಗಾ ಜನಕ ನಿನ್ನ ಜಾರನೆಂಬುವರೊ|| ಶೃಂಗಾರ ಮುಖ ನಿನ್ನ ಬರಿದೆದೂರುವರೋ||

ಮಂಗಳ ಮಹಿಮಾ ಶ್ರೀ ಪುರಂದರ ವಿಠ್ಠಲ|| ಹಿಂಗದೆ ಎಮ್ಮನು ಸಲಹೆನೆಂಬುವರೊ||

***'

 Raga: Mohana Taala: Aadi (raga, taala may differ in audio)

Composer:Purandaradasa

Scale:

ಸ ರಿ2 ಗ3 ಪ ದ2 ಸ|| ಸ ದ2 ಪ ಗ3 ರಿ2 ಸ

s r2 g3 p d2 S|| S d2 p g3 r2 s


||Pallavi||

Yenu maadalo ranga yeke belagaayitho|| Yenu maadalo krishna||

Yenu maadalo ranga maaniniyaru yenna maanava kaleyuvaro ranga||


||Charana 1||

Haalu mosaru benne kaddanembuvaro|| Melina kenegala meddanembuvaro||

Baalakarellara badidanembuvaro|| Yentha kaalahengasu ivana hadadalenbuvaro||


||Charana 2||

Ganga janaka ninna jaaranembuvaro|| Shringara mukha ninna barideduruvaro||

Mangala mahima shree purandara vittala|| Hingade yemmanu salahembuvaro||

****


No comments:

Post a Comment