Sunday, 5 December 2021

ಮರೆತೆಯೇನೋ ರಂಗ ಮಂಗಳಾಂಗ ಕೋಲು ಕೈಯಲಿ purandara vittala MARETEYENO RANGA MANGALAANGA KOLU KAIYALLI

sung as purandara vittala ankita

check ?
same song written by sripadarajaru

ಮರೆತೆಯೇನೋ ರಂಗ ಮಂಗಳಾಂಗ ||ಪ||

ಕೋಲು ಕೈಯಲ್ಲಿ ಕೊಳಲು
ಜೋಲು ಕಮ್ಬಳಿ ಹೆಗಲ
ಮೇಲೆ ಕಲ್ಲಿನ ಚೀಲ ಕನ್ಕುಳಲಿ
ಕಾಲಿಗೆ ಕಡಗವು ಪಶುಹಿಂಡು ಲಾಲಿಸುತ
ಬಾಲಕರ ಮೇಳದೊಳಗಿದ್ಯಲ್ಲೊ ರಂಗ ||

ಕಲ್ಲುಮಣೆ ಕವಡೆ ಚನ್ನೆ
ಗುಲುಗುಂಜಿ ವದವೆ ಸಾರಲು ನಿನ್ನ ಸರ್ವಾಂಗಕ್ಕೆ
ಅಲ್ಲಲ್ಲಿಗಳವಟ್ಟು ನವಿಲುಗರಿದಂಡೆ
ಅಲ್ಲಿ ಗೊಲ್ಲರ ಕೂಡೆ ಸಲ್ಲಾಪವಾಡುತ ||

ಸಿರಿದೇವಿ ಬಂದು ಸೇರಿದ್ದ ಬಳಿಕ ಲೋಕದೊಳಗೆ
ಸಿರಿಯರಸನೆಂಬುವರು
ಪರಮಮುಖ್ಯಪ್ರಾಣ ವಂದಿತ ಉಡುಪಿನ ನೆಲೆಯು ಶ್ರೀ-
ಪುರಂದರ ವಿಠಲ ಕೃಷ್ಣ ನೀ ಮರೆತೀಯೆ ||
****

ರಾಗ ಮೋಹನ. ಏಕ ತಾಳ (raga, taala may differ in audio)

pallavi

maratiyEnO ranga mangaLAnga

caraNam 1

kOlu kaiyalli koLalu jOlu kambaLi hegala mEle kallina cIla kankuLali
kAlige kaDagavu pahuhiNDu lAlisuta bAlakara mELadoLagiddayallo ranga

caraNam 2

kallumaNe kavaDe canne gulugunji sAralu ninna sarvAngakke
allalligaLavaTTu navilugaridaNDe alli gollara kUDe sallApavADuta

caraNam 3

siridEvi bandu sEridda baLiga lOkadoLage siriyarasanembuvaru parama
mukhyaprANa vandita uDupina neleyu shrI purandara viTTala krSNa nI maretIye
***

ಮರೆತೆಯೇನೋ ರಂಗ ಮಂಗಳಾಂಗ|| 

 ಕೋಲು ಕೈಯಲ್ಲಿ ಕೊಳಲು| 
ಜೋಲು ಕಂಬಳಿ ಹೆಗಲ ಮೇಲೆ| 
ಕಲ್ಲಿನ ಚೀಲ ಕಂಕುಳಲಿ |ಕಾಲಿಗೆ ಕಡಗವು| 
ಪಶುಹಿಂಡು ಲಾಲಿಸುತ ಬಾಲಕರ 
ಮೇಳದೊಳು ಇದ್ಯಲ್ಲೊ ರಂಗ || 

 ಕಲ್ಲುಮಣೆ ಕವಡೆ ಚನ್ನೆ ಗುಲುಗುಂಜಿ 
ಒಡವೆ ಸಾರಲು ನಿನ್ನ ಸರ್ವಾಂಗಕ್ಕೆ| 
ಅಲ್ಲಲ್ಲಿಗಳವಟ್ಟು ನವಿಲುಗರಿದಂಡೆ 
ಅಲ್ಲಿ ಗೊಲ್ಲರ ಕೂಡೆ ಸಲ್ಲಾಪವಾಡುತ || 

 ಸಿರಿದೇವಿ ಬಂದು ಸೇರಿದ್ದ ಬಳಿಕ 
ಲೋಕದೊಳಗೆ ಸಿರಿಯರಸನೆಂಬುವರು 
ಪರಮಮುಖ್ಯಪ್ರಾಣ ವಂದಿತ ಉಡುಪಿನ 
ನೆಲೆಯು ಪುರಂದರವಿಠ್ಠಲ ಶ್ರೀಕೃಷ್ಣನೆ ||
****


ಪುರಂದರದಾಸರು
ಮರೆತೆಯೇನೋ ರಂಗ ಮಂಗಳಾಂಗ ಪ 

ಕೋಲು ಕೈಯಲಿ ಕೊಳಲು, ಜೋಲುಗಂಬಳಿ ಹೆಗಲ |ಮೇಲೆ ಕಲ್ಲಿಯ ಚೀಲ ಕಂಕುಳಲಿ ||ಕಾಲಿಗೆ ಕಡಗವು ಕಾಯುತ ಹಸು ಹಿಂಡ |ಬಾಲಕರ ಮೇಳದಿ ಇದ್ದೆಯೊ ರಂಗ 1

ಕಲ್ಲುಮಣಿ ಕವಡಿ ಚೆನ್ನೆ ಗುಳ್ಳೆಗುಂಜಿ ಒಡವೆ |ಎಲ್ಲವು ನಿನ್ನ ಸರ್ವಾಂಗದಲಿ ||ಅಲ್ಲಲ್ಲಿಗಳವಟ್ಟು ನವಿಲುಗರಿಯ ದಂಡೆ |ಗೊಲ್ಲ ಮಕ್ಕಳ ಕೂಡೆ ಸಲ್ಲಾಪವಾಡುತೆ 2

ಸಿರಿದೇವಿ ಬಂದು ಸೇರಿದ ಬಳಿಕ ಲೋಕದೊಳಗೆ |ಸಿರಿಯರಸನೆಂಬುವರು ||ವರಮುಖ್ಯ ಪ್ರಾಣವಂದಿತ ಉಡುಪಿಯ |ಸಿರಿಪುರಂದರವಿಠಲ ಶ್ರೀ ಕೃಷ್ಣ* 3
********

No comments:

Post a Comment