Monday, 6 September 2021

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕೀ ankita karpara narahari BAARE GOWRI POOJISUVENU SAARASAABAKI





BY ಕಾರ್ಪರ ನರಹರಿ ದಾಸ


ಬಾರೆ ಗೌರಿ ಪೂಜಿಸುವೆನು ಸಾರಸಾಂಬಕೀ ।
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ।। ಪಲ್ಲವಿ ।।

ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ ।
ಚಂದದಿ ಸಮರ್ಪಿಸುವೆನು ಫಲ ಪುಷ್ಪಗಳ ।। ಚರಣ ।।

ಮಂಗಳೆಯೆಂದು ಪಾಡುತ ಬೆಳಗುವೆನು ಆರತಿ ।
ಮಂಗಳಗೌರಿಯೇ ಕೊಡು ಸೌಭಾಗ್ಯ ಸಂತತಿ ।। ಚರಣ ।।

ಮಂಗಲಪ್ರದಾತೆ ಗಿರಿಸಂಭೂತೆ ಸುರನುತೇ ।
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೇ ।। ಚರಣ ।।

ಪತ್ಯಂತರ್ಗತ ಹರಿಯ ಸೇವೆ ನಿತ್ಯ ಮಾಡಿಸೆ ।
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ।। ಚರಣ ।।

ರತಿಯ ಪತಿಯ ಪಿತಗೆ ಸದಾ ಪ್ರತಿಮೆಯೆನಿಸುವ ।
ಅಥಿತಿಗಳನು ಸೇವಿಸುವ ಸುಮತಿಯ ಕೊಡು ಜವ ।। ಚರಣ ।।

ಸಡಗರದಿ ನಿಮ್ಮಡಿಯ ಸೇವೆ ಬಿಡದೆ ಮಾಡುವೆ ।
ಮೃಡನರಾಣಿ ಕೊಡು ವರಗಳ ಗಡನೆ ಬೇಡುವೆ ।। ಚರಣ ।।

ಶರಣು ಜನರ ಪೊರೆವ ಕಾರ್ಪರ ನಾರಸಿಂಹನ ।
ಚರಣ ಕಮಳಯುಗಳದಿ ಭಕುತಿ ಇರಲಿ ಅನುದಿನಾ ।। ಚರಣ ।।
***

ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ

ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ಪ


ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ

ಚಂದದಿ ಸಮರ್ಪಿಸುವೆನು ಪುಷ್ಪಫಲಗಳ1


ಮಂಗಳೆಂದು ಪಾಡುತ ಬೆಳಗುವೆನು ಆರುತಿ

ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ2


ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ

ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ 3


ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ

ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ 4


ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ

ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ5


ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ

ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ 6


ಶರಣು ಜನರ ಪೊರೆವ ಕಾರ್ಪರ ನಾರಸಿಂಹನ

ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ 7

****

ರಚನೆ : ಕಾರ್ಪರ ನರಹರಿದಾಸರು

ಬಾರೇ  ಗೌರಿ ಪೂಜಿಸುವೆನು  ಸಾರಸಾಂಬಕಿ
ಸಾರುವೆ ಸಂಸಾರದಿ  ನೀ ಸುಖವದೋರೆ  ವಿಧುಮುಖಿ ।।ಪ।।

ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ...
ಚಂದದಿ ಸಮರ್ಪಿಸುವೆನು  ನಾ  ಪುಷ್ಪಂಗಳ ।।೧।।

ಮಂಗಳೆಯೆಂದು  ಪಾಡುತ ಬೆಳಗುವೆನು  ಆರುತಿ
ಮಂಗಳೆಗೌರಿಯೇ ಕೊಡು  ಎನಗೆ ಸೌಭಾಗ್ಯ ಸಂತತಿ ।।೨।।

ಮಂಗಳ ಪ್ರದಾತೆ ಗಿರಿಸಂಭೂತೇ ಭೂಸುರ  ಸುರನುತೆ
ಮಂಗಳಾಂಗಿ  ಕುರು ಕರುಣಾಮಯಿ ನಮೋ  ನಮೋಸ್ತುತೇ ।।೩।।

ಸಡಗರದಿ ನಿಮ್ಮಡಿಯ ಸೇವೆ ಬಿಡದೆ ಮಾಡುವೆ
ಮೃಡನ  ರಾಣಿ ಕೊಡುವರಗಳ  ಗಡನೆ ಬೇಡುವೆ ।।೪।।

ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಲಿ   ಭಕುತಿ ಇರಲಿ ಅನುದಿನಾ ।।೫।।
****

ಪಾರ್ವತೀ ಸ್ತುತಿ

ರಾಗ : ಆನಂದಭೈರವಿ ತಾಳ : ರೂಪಕ


ಬಾರೆ ಗೌರಿ ಪೂಜಿಸುವೆನು 

ಸಾರಸಾಂಬಕೀ ।

ಸಾರುವೆ ಸಂಸಾರದಿ 

ಸುಖದೋರೆ ವಿಧುಮುಖಿ ।। ಪಲ್ಲವಿ ।।


ಕುಂದ ಮಲ್ಲಿಗೆ ಜಾಜಿ 

ಕುಸುಮ ಗಂಧ ಪರಿಮಳ ।

ಚಂದದಿ ಸಮರ್ಪಿಸುವೆನು 

ಫಲ ಪುಷ್ಪಗಳ ।। ಚರಣ ।।


ಮಂಗಳೆಯೆಂದು ಪಾಡುತ 

ಬೆಳಗುವೆನು ಆರತಿ ।

ಮಂಗಳಗೌರಿಯೇ ಕೊಡು 

ಸೌಭಾಗ್ಯ ಸಂತತಿ ।। ಚರಣ ।।


ಮಂಗಲಪ್ರದಾತೆ ಗಿರಿ-

ಸಂಭೂತೆ ಸುರನುತೇ ।

ಮಂಗಳಾಂಗಿ ಕುರು ಕರುಣಾಮಯಿ 

ನಮೋಸ್ತುತೇ ।। ಚರಣ ।।


ಪತ್ಯಂತರ್ಗತ ಹರಿಯ 

ಸೇವೆ ನಿತ್ಯ ಮಾಡಿಸೆ ।

ಪುತ್ರ ಪೌತ್ರಾದಿ ಸಂಪದವಿತ್ತು 

ರಕ್ಷಿಸೆ ।। ಚರಣ ।।


ರತಿಯ ಪತಿಯ ಪಿತಗೆ 

ಸದಾ ಪ್ರತಿಮೆಯೆನಿಸುವ ।

ಅಥಿತಿಗಳನು ಸೇವಿಸುವ 

ಸುಮತಿಯ ಕೊಡು ಜವ ।। ಚರಣ ।।


ಸಡಗರದಿ ನಿಮ್ಮಡಿಯ 

ಸೇವೆ ಬಿಡದೆ ಮಾಡುವೆ ।

ಮೃಡನರಾಣಿ ಕೊಡು 

ವರಗಳ ಗಡನೆ ಬೇಡುವೆ ।। ಚರಣ ।।


ಶರಣು ಜನರ ಪೊರೆವ 

ಕಾರ್ಪರ ನಾರಸಿಂಹನ ।

ಚರಣ ಕಮಳಯುಗಳದಿ 

ಭಕುತಿ ಇರಲಿ ಅನುದಿನಾ ।। ಚರಣ ।।

****


No comments:

Post a Comment